ಅಪರಾಧ
ಬೆಂಗಳೂರಿನ ಕಸದ ಲಾರಿಯಲ್ಲಿ ಮಹಿಳೆ ಶವ ಎಸೆದಿದ್ದ ಹಂತಕ ಅರೆಸ್ಟ್
ಕಸದ ಲಾರಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಬೆಂಗಳೂರಿನ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿದ್ದು, ಕೊಲೆ ಮಾಡಿದ ಅಸ್ಸಾಂ ಮೂಲದ ಗೆಳೆಯನನ್ನು ಬಂಧಿಸಿದ್ದಾರೆ. ಹುಳಿಮಾವು ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪ ಅಲಿಯಾಸ್ ಆಶಾಳ ಶವ ಕಸದ ಲಾರಿಯಲ್ಲಿ ಪತ್ತೆಯಾಗಿತ್ತು. ಅಚ್ಚುಕಟ್ಟು ಪ್ರದೇಶದ ಪೊಲೀಸರು ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಕೊಲೆ ಆರೋಪಿ ಅಸ್ಸಾಂ ಮೂಲದ ಸಂಶುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ. ಎರಡು ವರ್ಷಗಳಿಂದ ಇಬ್ಬರು ಲಿವ್ ಇನ್
ವಿದ್ಯಾರಣ್ಯಪುರ ಬಳಿ ಎರಡು ಕೋಟಿ ದರೋಡೆ: ನಾಲ್ವರ ಬಂಧನ
ವಿದ್ಯಾರಣ್ಯಪುರ ಬಳಿ ನಡೆದ ಎರಡು ಕೋಟಿ ದರೋಡೆ ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಬಂಧಿತರಿಂದ 15 ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಕೋಟಿ ದರೋಡೆ ಪ್ರಕರಣದ ಹಿಂದೆ ದೊಡ್ಡ
Accident Death: ಬ್ಯಾಟರಾಯನಪುರದಲ್ಲಿ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ
ಬೆಂಗಳೂರು ಬ್ಯಾಟರಾಯನಪುರ ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ನೈಸ್ ರಸ್ತೆ ಪ್ರವೇಶಿಸುವ ಬಳಿ ಬೈಕ್ ಗೆ ಸಿಮೆಂಟ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರೇಣುಕಾ ಎಂಬವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬಸವೇಶ್ವರ ನಗರ ಬಿಡಿಎ ನಿವಾಸಿ ರೇಣುಕಾ(52) ಮೃತಪಟ್ಟವರು. ಅವರು ಮಗಳು
ಚಿಂತಾಮಣಿಯ ಎಂಎಸ್ಸಿ ಪದವೀಧರಗೆ ಲಂಡನ್ ಉದ್ಯೋಗ ಆಮಿಷ: 11 ಲಕ್ಷ ರೂ. ಕಿತ್ತುಕೊಂಡು ಕೊಲೆ
ಎಂಎಸ್ಸಿ ಇನ್ ಅಗ್ರಿಕಲ್ಚರ್ ಪದವಿ ಮುಗಿಸಿ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಉಪನ್ಯಾಸಕ ಕೆಲಸ ಮಾಡುತ್ತಿದ್ದ ಯುವಕನಿಗೆ ಪಿಯುಸಿ ಫೇಲ್ ಆದ ಯುವಕ ಲಂಡನ್‌ನಲ್ಲಿ ಉದ್ಯೋಗದ ಆಮಿಷವೊಡ್ಡಿ ಹನ್ನೊಂದು ಲಕ್ಷ ರೂ. ವಸೂಲಿ ಮಾಡಿ ಕೊನೆಗೆ ಕೊಲೆ ಮಾಡಿದ್ದಾನೆ. ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿಯಲ್ಲಿ
Accident Deaths: ತಿರುಪತಿಯಿಂದ ಬರುತ್ತಿದ್ದಾಗ ಆಂಧ್ರಪ್ರದೇಶದಲ್ಲಿ ಅಪಘಾತ: ಮೂವರು ಕನ್ನಡಿಗರು ಬಲಿ
ತಿರುಪತಿ ಯಾತ್ರೆ ಮುಗಿಸಿಕೊಂಡು ವಾಪಸಾಗುತ್ತಿದ್ದಾಗ ಟಿಟಿ ವಾಹನ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲೂಕಿನ ಕುರುಬಲಕೋಟ ಮಂಡಲದ ಚೆನ್ನಾಮರ್ರಿಮಿಟ್ಟ ಬಳಿ ಅಪಘಾತಗೊಂಡು ಮೂವರು ಕನ್ನಡಿಗರು ಮೃತಪಟ್ಟಿದ್ದಾರೆ. ತಿರುಪತಿಯಿಂದ ಮರಳುತ್ತಿದ್ದ ಟಿಟಿ ವಾಹನಕ್ಕೆ ಭಾರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಟಿಟಿ
Accident Deaths: ಕುಣಿಗಲ್‌ನಲ್ಲಿ ಕಾರಿಗೆ ಲಾರಿ ಡಿಕ್ಕಿ: ಪತಿ, ಪತ್ನಿ, ಮಗ, ಮಗಳು ಸಾವು
ತುಮಕೂರಿನ ಕುಣಿಗಲ್ ಬೈಪಾಸ್ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಕ್ಯಾಂಟರ್ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಪತಿ, ಪತ್ನಿ, ಮಗ, ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಬೇಗೌಡ (48), ಶೋಭಾ (42), ದುಂಬಿಶ್ರೀ (16), ಭಾನು ಕಿರಣ್ ಗೌಡ (14) ಮೃತಪಟ್ಟವರು. ಮೃತ ಕುಟುಂಬ ಮಾಗಡಿ
ರಸ್ತೆ ಮಧ್ಯೆ ಗುಂಡು ಹಾರಿಸಿ ಹುಟ್ಟು ಹಬ್ಬ: ಕುಡಚಿ ಗ್ರಾ.ಪಂ ಸದಸ್ಯ ಪೊಲೀಸ್ ಅತಿಥಿ
ರಸ್ತೆ ಮಧ್ಯೆದಲ್ಲೇ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಗ್ರಾಮ ಪಂಚಾಯತ್ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿರುವ ಪ್ರಕರಣ ಬೆಳಗಾವಿಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ. ಕುಡಚಿ ಗ್ರಾಮ ಪಂಚಾಯತಿ ಸದಸ್ಯ ಬಾಬಾಜಾನ್ ಖಾಲಿಮುಂಡಾಸೈ ಬಂಧಿತ ವ್ಯಕ್ತಿ. ಎರಡು
ಚನ್ನಮ್ಮನಕೆರೆ ಗ್ರೌಂಡ್ ಬಳಿ ಮಹಿಳೆಯ ಕೊಲೆಗೈದು ಕಸದ ಲಾರಿಯಲ್ಲಿಟ್ಟು ಪರಾರಿ
ಬೆಂಗಳೂರು ನಗರದ ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಮಹಿಳೆಯನ್ನು ಕೊಲೆ ಮಾಡಿ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಶನಿವಾರ ತಡರಾತ್ರಿ
Murder: ಬಾಲಕಿಯ ಕೊಲೆಗೈದು ವೀಡಿಯೊ ಪೋಸ್ಟ್ ಮಾಡಿ ಬಾಲಕ ಆತ್ಮಹತ್ಯೆ
ಬಾಲಕನೊಬ್ಬ ಗೆಳತಿಯನ್ನು ಕೊಲೆ ಮಾಡಿ ವೀಡಿಯೊವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್ನ ಸೆರೆಂಗ್‌ಡಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. 17 ವರ್ಷದ ಬಾಲಕ ಜಯನಾಥ್ ಆತ್ಮಹತ್ಯೆ ಮಾಡಿಕೊಂಡವ. ಆತ 14 ವರ್ಷದ ಬಾಲಕಿಯ
Suicide: ಚಿಕ್ಕಮಗಳೂರು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಚಿಕ್ಕಮಗಳೂರುಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ವಸತಿ ಶಾಲೆಯ ಹಾಸ್ಟೆಲ್‌ನ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಪ್ಪ ತಾಲೂಕಿನ ಬೊಮ್ಲಾಪುರ ಗ್ರಾಮದ ಶಮಿತಾ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶನಿವಾರ ರಾತ್ರಿ ಶಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗಿನ ಜಾವ ಮಕ್ಕಳು ಎದ್ದಾಗ ತಿಳಿದು