ಅಪರಾಧ
ಮಹೇಶ್ ಜೋಷಿ ಕ್ಷಮೆ ಯಾಚನೆ ಜೊತೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಿ: ಕೋರ್ಟ್
ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಷಿಗೆ ಒಂದು ಲಕ್ಷ ರೂಪಾಯಿಗಳ ದಂಡ ಹಾಗೂ ಕೇಸು ದಾಖಲಿಸಿದ ದಿನದಿಂದ ದಂಡ ಪಾವತಿಯ ದಿನದವರೆಗೆ ಶೇ.೨೪ರಷ್ಟು ಬಡ್ಡಿಯನ್ನು ಅರ್ಜಿದಾರ ಎನ್.ಕೆ.ಮೋಹನ್ ರಾಂ ಅವರಿಗೆ ತೀರ್ಪು ಪ್ರಕಟಿಸಿದ ಏಳು ದಿನಗಳೊಳಗೆ ನೀಡಬೇಕು ಮತ್ತು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಬೆಂಗಳೂರು ದೂರದರ್ಶನದಲ್ಲಿ ಕ್ಷಮೆ ಕೋರಬೇಕೆಂದು ಬೆಂಗಳೂರಿನ ೧೪ನೇ ನ್ಯಾಯಾಲಯ ಆದೇಶಿಸಿದೆ. ಈ ಆದೇಶ ಉಲ್ಲಂಘನೆಯಾದ್ದಲ್ಲಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು
ಕುಂಭಮೇಳಕ್ಕೆ ತೆರಳುತ್ತಿದ್ದ ಗೋಕಾಕ್ನ ಏಳು ಮಂದಿ ಅಪಘಾತಕ್ಕೆ ಬಲಿ
ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್ರಾಜ್ಗೆ ತೆರಳುತ್ತಿದ್ದ ಗೋಕಾಕ್ನ ಏಳು ಮಂದಿ ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಮಧ್ಯಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಈ ದುರಂತ ಸಂಭವಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ,
ಲೋಕಾಯುಕ್ತ ಹೆಸರಲ್ಲಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾತ ಅರೆಸ್ಟ್
ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸರ್ವಿಸ್ನಿಂದ ವಜಾಗೊಂಡ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಮುರುಗಪ್ಪ ಬಂಧಿತ ಆರೋಪಿ. ಬಂಧಿತ ಮುರುಗೆಪ್ಪ ವಿರುದ್ಧ ರಾಜ್ಯದ ನಾನಾ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಪಿಯು
ಗರುಡ ಮಾಲ್ ಬಳಿ ಶಾಸಕ ಹ್ಯಾರಿಸ್ ಆಪ್ತನ ಕೊಲೆ
ಬೆಂಗಳೂರಿನ ಅಶೋಕನಗರದ ಗರುಡ ಮಾಲ್ ಬಳಿ ಲೈವ್ ಬ್ಯಾಂಡ್ನಿಂದ ಶನಿವಾರ ರಾತ್ರಿ ಹೊರ ಬರುತ್ತಿದ್ದಾಗ ಕಾಂಗ್ರೆಸ್ ಮುಖಂಡನನ್ನು ಅಡ್ಡಗಟ್ಟಿ ಕೊಲೆ ಮಾಡಿರುವ ಘಟನೆ ನಡೆದಿದೆ. ತಡರಾತ್ರಿ 1 ಗಂಟೆಗೆ ಘಟನೆ ನಡೆದಿದ್ದು, ಆನೆಪಾಳ್ಯ ನಿವಾಸಿ ಶೇಖ್ ಅಲಿ ಕೊಲೆಯಾದ ಕಾಂಗ್ರೆಸ್ ಮುಖಂಡ.
ಕಂಬದಹಳ್ಳಿ ಆಂಜನೇಯಬೆಟ್ಟದಲ್ಲಿ ಬಾಂಬ್ ಸ್ಫೋಟಕ್ಕೆ ವಿದ್ಯಾರ್ಥಿಯ ಅಂಗೈ ಛಿದ್ರ
ನಾಗಮಂಗಲ ತಾಲೂಕಿನ ಕಂಬದಹಳ್ಳಿಯ ಆಂಜನೇಯಬೆಟ್ಟದಲ್ಲಿ ನಾಡಬಾಂಬ್ ಸ್ಫೋಟದಿಂದಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವನ ಅಂಗೈ ಛಿದ್ರವಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಎಂದು ಗುರುತಿಸಲಾಗಿದೆ. ಇವರು ಜೈನ ಬಸದಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ
ಜನಪ್ರತಿನಿಧಿಗಳು ಎಲ್ಲಿದ್ದೀರಿ, ನಾನು ಬೆಳಗಾವಿ, ಬಾಳೇಕುಂದ್ರಿಗೆ ಬಂದೇ ಬರುತ್ತೇನೆ: ಕರವೇ ಅಧ್ಯಕ್ಷ ನಾರಾಯಣ ಗೌಡ
ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ಬಾಳೇಕುಂದ್ರಿಗೂ ಬಂದೇ ಬರುತ್ತೇನೆ. ಬಾಳೇಕುಂದ್ರಿ ಕರ್ನಾಟಕದ ಹೆಮ್ಮೆಯ ಇಂಜಿನಿಯರ್, ನೀರಾವರಿ ತಜ್ಞ ಶಿವಪ್ಪ ಗುರುಬಸಪ್ಪ ಬಾಳೇಕುಂದ್ರಿಯವರ ಊರು. ಕೃಷ್ಣಾ, ಮಲಪ್ರಭ, ಘಟಪ್ರಭ ವ್ಯಾಪ್ತಿಯ ನೀರಾವರಿ ಯೋಜನೆಗಳ ರೂವಾರಿಯವರು. ಇಂಥ ಶ್ರೇಷ್ಠ ವ್ಯಕ್ತಿಗೆ ಜನ್ಮ ನೀಡಿದ ಅಪ್ಪಟ
ಸರ್ಕಾರಿ ಕೆಲಸ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿಸಿ ವಂಚಿಸಿದ ವ್ಯಕ್ತ ಅರೆಸ್ಟ್!
ನಿಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಕೋಟ್ಯಂತರ ರೂಪಾಯಿ ವಂಚಿಸಿದ ಮಹಾನ್ ವಂಚಕನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಮಂಡ್ಯ ನಗರದ ತಾವರೆಗೆರೆ ನಿವಾಸಿ ಹೆಚ್.ಸಿ.ವೆಂಕಟೇಶ್ ವಂಚಿಸಿದ ವ್ಯಕ್ತಿ. ತಾನೊಬ್ಬ ದೊಡ್ಡ ಅಧಿಕಾರಿ ಎಂದು ಬಿಂಬಿಸಿಕೊಂಡು ನಿಮ್ಮ ಮಕ್ಕಳಿಗೆ, ನಿಮ್ಮ ಹೆಂಡತಿಗೆ ಸರ್ಕಾರಿ
ತಂಗಿಯನ್ನು ಆರನೇ ಮದುವೆಯಾಗಲು ಒಪ್ಪದ್ದಕ್ಕೆ ಸ್ನೇಹಿತನ ಕೊಲೆ
ಮಧ್ಯಪ್ರದೇಶದ ಭೋಪಾಲ್ನಲ್ಲಿ ಐದು ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ತಂಗಿಯನ್ನು ಮದುವೆಯಾಗಲು ಬಯಸಿದಾಗ ನಿರಾಕರಿಸಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದಾನೆ. ಸ್ನೇಹಿತ ಸಂದೀಪ್ ಪ್ರಜಾಪತಿ ಕೊಲೆಯಾದವ. ಕೊಲೆ ಆರೋಪಿ ವಿಕಾಸ್ ಜೈಸ್ವಾಲ್ ಅಲಿಯಾಸ್ ಅವಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ನಂತರ ತಲೆಮರೆಸಿಕೊಂಡಿದ್ದ
ಅಕ್ರಮ ಸಂಬಂಧ ಪ್ರಶ್ನಿಸಿದ ತಾಯಿಗೆ ಜೀವ ಬೆದರಿಕೆಯೊಡ್ಡಿದ ಪಿಎಸ್ಐ
ಮಗನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕಪಾಳ ಮೋಕ್ಷ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೊಡ್ಡಬಳ್ಳಾಪುರ ತಾಲೂಕು ಹಣಬೆ ಗ್ರಾಮದ ಮಂಗಳಮ್ಮ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳಮ್ಮ ನೀಡಿದ ದೂರಿನ ಅನ್ವಯ ಪುತ್ರ ಪಿಎಸ್ಐ ಮಂಜುನಾಥ,
ರೀಲ್ಸ್ ವ್ಯಸನದಿಂದ ಗಂಗಾವತಿಯಲ್ಲಿ ನದಿ ಪಾಲಾಗಿದ್ದ ವೈದ್ಯೆಯ ಶವ ಪತ್ತೆ
ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಬುಧವಾರ ಮುಂಜಾನೆ ಕಲ್ಲುಬಂಡೆಗಳ ಮೇಲಿಂದ ನದಿಗೆ ಜಿಗಿದ ಯುವ ವೈದ್ಯೆಯ ಶವ ಪತ್ತೆಯಾಗಿದೆ. ಮೃತ ವೈದ್ಯೆಯನ್ನು ಹೈದರಾಬಾದ್ನ ನಾಂಪಲ್ಲಿ ಪ್ರದೇಶದ ನಿವಾಸಿ, ಎಂಬಿಬಿಎಸ್ ಪದವೀಧರೆ ಅನನ್ಯ ಮೋಹನ್ (26) ಎಂದು ಗುರುತಿಸಲಾಗಿದೆ. ಆಕೆ