Menu

ಚಾಮರಾಜಪೇಟೆಯಲ್ಲಿ  ವಿದ್ಯುತ್‌ ತಗುಲಿ ಮಹಿಳೆ ಸಾವು, ಸ್ಥಳೀಯರ ಪ್ರತಿಭಟನೆ

ಬೆಂಗಳೂರಿನ ಚಾಮರಾಜಪೇಟೆ ವ್ಯಾಪ್ತಿಯ ಆನಂದಪುರದಲ್ಲಿ ನೀರು ಹಿಡಿಯುವಾಗ ವಿದ್ಯುತ್‌ ಶಾಕ್ ಹೊಡೆದು ಮಹಿಳೆ ಮೃತಪಟ್ಟಿದ್ದಾರೆ. ಸೆಲ್ವಿ ಮೃತ ಮಹಿಳೆ. ಕೆ.ಆರ್‌. ಮಾರ್ಕೆಟ್‌ ರಸ್ತೆಯ ಈ ಪ್ರದೇಶದಲ್ಲಿ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್‌ನಲ್ಲಿ ಅಲ್ಲಲ್ಲಿ ಮೋಟಾರ್‌ ಸಂಪರ್ಕ ನೀಡಲಾಗಿದೆ. ಗುರುವಾರ ಬೆಳಗ್ಗೆ ಐದು ಗಂಟೆಗೆ ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್‌ ತಗುಲಿ ಮಹಿಳೆ ಮೃತಪಟ್ಟಿದ್ದಾರೆ. ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದು, ಮಾರ್ಕೆಟ್ ರಸ್ತೆಯಲ್ಲಿ

ಜಮಖಂಡಿಯಲ್ಲಿ ಗರ್ಭದಲ್ಲೇ ಶಿಶು ಸಾವು: ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬ ಆಕ್ರೋಶ

ಬಾಗಲಕೋಟೆಯ ಜಮಖಂಡಿಯಲ್ಲಿರುವ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭದಲ್ಲೇ ಶಿಶು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಬೇಜವಾಬ್ದಾರಿಯೇ ಕಾರಣವೆಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜಮಖಂಡಿಯ ಚೌಡಯ್ಯ ನಗರದ ನಿವಾಸಿ.ಶಿವಪ್ಪ ರೇವಣಸಿದ್ದಪ್ಪ ಬೋವಿ ಅವರ ಪತ್ನಿ ಇಂದ್ರಾ ಅವರ ಗರ್ಭದಲ್ಲೇ ಮಗು ಮೃತಪಟ್ಟಿದೆ. ಇಂದ್ರಾ ಅವರನ್ನು

ನಟಿಯರಾದ ರಾಗಿಣಿ, ಸಂಜನಾ ವಿರುದ್ಧ ಎಫ್‌ಐಆರ್‌ ರದ್ದು ಪ್ರಶ್ನಿಸಿ ಸಿಸಿಬಿ ಮೇಲ್ಮನವಿ

ಈ ಹಿಂದೆ ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯವರಿಗೆ ಸಿಸಿಬಿ ಆಘಾತ ನೀಡಿದೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ನಟಿ ಸಂಜನಾ ಮತ್ತು ರಾಗಿಣಿ ವಿರುದ್ಧದ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ

ಮೇಳದಲ್ಲಿ ಕೈಚಳಕ ತೋರಿದ ಮಾಜಿ ಉಪನ್ಯಾಸಕಿ ಅರೆಸ್ಟ್

ಬೆಂಗಳೂರು: ಆಭರಣ ಪ್ರದರ್ಶನ ಮೇಳಗಳಲ್ಲಿ ಗ್ರಾಹಕಳ ಸೋಗಿನಲ್ಲಿ ‌ ಕಳವು ಮಾಡುತ್ತಿದ್ದ ನಿವೃತ್ತ ಉಪನ್ಯಾಸಕಿಯನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು‌ ಬಂಧಿಸಿದ್ದಾರೆ. ಮೈಸೂರಿನ ಉದಯಗಿರಿಯ ನಿವೃತ್ತ ಉಪನ್ಯಾಸಕಿ, ಜಹೀರಾ ಫಾತಿಮಾ (64) ಬಂಧಿತ ಆರೋಪಿ. ಆಕೆಯಿಂದ ಒಟ್ಟು 8 ಲಕ್ಷ ರೂ. ಮೌಲ್ಯದ

ತುಮಕೂರು ಕೆಂಪಮ್ಮ ದೇಗುಲ ಬಳಿ ವಾಮಾಚಾರ, ಬಾಗಿಲಿಗೆ ತಗುಲಿದ ಬೆಂಕಿ

ತುಮಕೂರಿನ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಇರುವ ಶಕ್ತಿ ದೇವತೆ ಕೆಂಪಮ್ಮ ದೇವಿ ದೇವಾಲಯದ ಎದುರು ದುಷ್ಕರ್ಮಿಗಳು ವಾಮಾಚಾರ ಎಸಗಿರುವುದು ಪತ್ತೆಯಾಗಿದೆ. ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿಯು ದೇಗುಲದ ಬಾಗಿಲನ್ನು ಸಂಪೂರ್ಣ ಆವರಿಸಿ

ರನ್ಯಾ ರಾವ್‌ ದೇಶ ತೊರೆಯುವ ಸಾಧ್ಯತೆ: ಜಾಮೀನು ನೀಡದಂತೆ ಡಿಆರ್‌ಐ ಆಕ್ಷೇಪಣೆ

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್‌ಗೆ ಜಾಮೀನು ಮಂಜೂರು ಮಾಡದಂತೆ ಕೋರ್ಟ್‌ಗೆ ಡಿಆರ್‌ಐ ಆಕ್ಷೇಪಣೆ ಸಲ್ಲಿಸಿದೆ. ಆಕೆ ದುಬೈ ರೆಸಿಡೆಂಟ್‌ ವೀಸಾ ಹೊಂದಿರುವುದರಿಂದ ಜಾಮೀನು ಮಂಜೂರು ಮಾಡಿದರೆ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ತನಿಖಾ

ರನ್ಯಾ ಚಿನ್ನ ಕಳ್ಳ ಸಾಗಣೆ: ರಾಜಕೀಯ ನಾಯಕರ ಸಂಪರ್ಕದ ಪ್ರಭಾವಿ ಸ್ವಾಮೀಜಿ ಶಾಮೀಲು?

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್​ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ತೀವ್ರಗೊಂಡಿದೆ. ಡಿಆರ್‌ಐ , ಸಿಬಿಐ, ಸಿಐಡಿ ತಂಡಗಳಿಂದ ತನಿಖೆ ಮುಂದುವರಿದಿದೆ. ಈ ವ್ಯವಹಾರದಲ್ಲಿ ಪ್ರಭಾವಿ ಸ್ವಾಮೀಜಿಯೊಬ್ಬರು ಶಾಮೀಲಾಗಿರುವ ಬಗ್ಗೆ ಮಾಹಿತಿ ಡಿಆರ್​ಐಗೆ ಲಭಿಸಿದೆ ಎಂದು ಮೂಲಗಳು ತಿಳಿಸಿವೆ. ನಟಿ

ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಡಿವೈಎಸ್ ಪಿ ಕನಕಲಕ್ಷ್ಮೀ ಅರೆಸ್ಟ್

ಭೋವಿ ನಿಗಮದಲ್ಲಿ ನಡೆದ ಅಕ್ರಮ ತನಿಖೆ ಎದುರಿಸಿದ್ದ ವಕೀಲೆ ಹಾಗೂ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಕೀಲೆ ಜೀವಾ ೧೩ ಪುಟಗಳ ಡೆತ್ ನೋಟ್ ನಲ್ಲಿ

ಐಪಿಎಸ್ ಅಧಿಕಾರಿ ರನ್ಯಾ ರಾವ್ ತಂದೆ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಮಲತಂದೆ ಹಾಗೂ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರ ಹಾಗೂ ಪೊಲೀಸರ ಪ್ರೊಟೊಕಾಲ್ ಉಲ್ಲಂಘನೆ ಕುರಿತು ರಾಜ್ಯ ಸರ್ಕಾರ ಹೊಸದಾಗಿ ತನಿಖೆಗೆ ಆದೇಶಿಸಿದೆ. ಐಎಎಸ್ ಅಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ತನಿಖೆ

ಮರಾಠಿಯಲ್ಲಿ ಪಹಣಿ ಕೊಡಲಿಲ್ಲವೆಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಹಲ್ಲೆ

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮರಾಠಿಯಲ್ಲಿ ಪಹಣಿ ಕೊಡಲಿಲ್ಲ ಹಾಗೂ ಕಾನೂನು ಬಾಹಿರ ಕೃತ್ಯಕ್ಕೆ ಸಹಕಾರ ನೀಡಲಿಲ್ಲ ಎಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಬೇವಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗಪ್ಪ ಎಂಬವರ ಮೇಲೆ ಬೆಳಗಾವಿ ತಾಲೂಕಿನ ಗೋಜಗಾ ಸಮೀಪ