ಅಪರಾಧ
ವಿಜಯಪುರದಲ್ಲಿ ಬಾಗಪ್ಪ ಶಿಷ್ಯನ ಹತ್ಯೆ ಆರೋಪಿಗಳ ಕಾಲಿಗೆ ಫೈರಿಂಗ್
ವಿಜಯಪುರದಲ್ಲಿ ಹಂತಕ ಬಾಗಪ್ಪನ ಹಳೆ ಶಿಷ್ಯ ಸುಶೀಲ್ ಕಾಳೆ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ತಡರಾತ್ರಿ ಸುಶೀಲ್ ಕಾಳೆ ಹಂತಕರಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಗಾಂಧಿ ಚೌಕ ಸಿಪಿಐ ಪ್ರದೀಪ್ ತಳಕೇರಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿ ಆಕಾಶ ಕಲ್ಲವ್ವಗೋಳ, ಸುದೀಪ್ ಅಲಿಯಾಸ್ ಸುಭಾಷ ಬಗಲಿ ಕಾಲಿಗೆ ಗುಂಡು ತಾಗಿದೆ. ಆಕಾಶ ಮೇಲೆ ಈಗಾಗಲೇ 7
ರಿಂಗ್ ರೋಡ್ ಶುಭಾಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ
2003ರಲ್ಲಿ ಸಂಚಲನ ಸೃಷ್ಟಿಸಿದ್ದ ಟೆಕ್ಕಿ ಗಿರೀಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಿಂಗ್ರೋಡ್ ಶುಭಾ ಸೇರಿ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಶ್ಚಿತಾರ್ಥ
ನ್ಯಾಷನಲ್ ಹೆರಾಲ್ಡ್ ಅಕ್ರಮ: ಹಣ ವರ್ಗಾವಣೆ ಆರೋಪ ತೀರ್ಪು ಕಾಯ್ದಿರಿಸಿದ ಕೋರ್ಟ್
ನ್ಯಾಷನಲ್ ಹೆರಾಲ್ಡ್ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಉಳಿದ ಐವರ ವಿರುದ್ಧದ ಹಣ ವರ್ಗಾವಣೆ ಆರೋಪವನ್ನು ಪರಿಗಣಿಸಬೇಕೆ ಎಂಬ ಕುರಿತು ದೆಹಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಜುಲೈ 29ರಂದು ಆದೇಶ ಪ್ರಕಟಿಸುವುದಾಗಿ ರೋಸ್ ಅವೆನ್ಯೂ ಕೋರ್ಟ್
ಯೆಮೆನ್ನಲ್ಲಿ ನರ್ಸ್ ನಿಮಿಷಾಗೆ ತಪ್ಪಲಿದೆಯಾ ಗಲ್ಲು ?
ಯೆಮೆನ್ ಸರ್ಕಾರದ ಜೊತೆಗೆ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡುವಂತೆ ಭಾರತ ಸರ್ಕಾರ ನಡೆಸಲಾದ ಚರ್ಚೆಯಲ್ಲಿ ಅನೌಪಚಾರಿಕವಾಗಿ ಗಲ್ಲು ಶಿಕ್ಷೆ ಸ್ಥಗಿತ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಭಾರತೀಯ ಸುಪ್ರೀಂಕೋರ್ಟ್ ತುರ್ತು ವಿಚಾರಣೆ ಮಾಡಿದ್ದು, ಪ್ರಕರಣವನ್ನು ಜು.18ಕ್ಕೆ
ಆನ್ಲೈನ್ ಗೆಳತಿಯ ಪ್ರೀತಿಗೆ ಮರುಳಾಗಿ 44 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಯುವಕ
ಬೆಂಗಳೂರಿನ ಯುವಕನೊಬ್ಬ ಆನ್ಲೈನ್ ಗೆಳತಿಯನ್ನು ಪ್ರೀತಿಸಲು ಹೋಗಿ 44 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಅರ್ಚನಾ ಎನ್ನುವ ಹೆಸರಿನಲ್ಲಿ ಯುವಕನನ್ನು ಇನ್ಸ್ಟಾಗ್ರಾಮ್ನಲ್ಲಿ ಬಲೆಗೆ ಬೀಳಿಸಿ ೪೪ ಲಕ್ಷ ರೂ. ಟೋಪಿ ಹಾಕಲಾಗಿದೆ. ಹೀಗೆ ಯುವಕನಿಗೆ ವಂಚಿಸಿದ ವ್ಯಕ್ತಿ ಮಹಿಳೆಯೇ, ಪುರುಷನೋ ಎಂಬುದು ಇನ್ನಷ್ಟೇ
ಮಂತ್ರಾಲಯ ಬಳಿ ನದಿ ಪಾಲಾಗಿದ್ದ ಮೂವರು ಯುವಕರ ಶವ ಪತ್ತೆ
ಹಾಸನ ಮೂಲದ ಮೂವರು ಯುವಕರು ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದು, ಶವಗಳು ಪತ್ತೆಯಾಗಿವೆ. ಹಾಸನ ಮೂಲದ ಅಜಿತ್ (20), ಸಚಿನ್ (20), ಪ್ರಮೋದ್ (19) ಮೃತ ಯುವಕರು. ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ರಾಯರ ಮಠಕ್ಕೆ ಬಂದಿದ್ದ
ಜೈಲಿನಿಂದಲೇ ಗಲ್ಫ್ನಲ್ಲಿರುವ ಉಗ್ರನೊಂದಿಗೆ ಮಾತನಾಡಿ ನಾಸಿರ್ಗೆ ವಿಷಯ ಮುಟ್ಟಿಸುತ್ತಿದ ಫಾತಿಮಾ
ಉಗ್ರ ನಾಸಿರ್ ಗೆ ಸಹಾಯ ಮಾಡುತ್ತಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಎನ್ಐಎ ಮಹತ್ವದ ವಿಚಾರಗಳನ್ನು ಬಯಲಿಗೆಳೆದಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಫಾತಿಮಾ ತನ್ನ ಮಗ ಉಗ್ರ ಜುನೈದ್ ಜೊತೆ ರಾತ್ರಿ ಎರಡು ಗಂಟೆಗೆ ಸಿಡಿಆರ್ ನಲ್ಲಿ ಸಂಪರ್ಕ ಸಾಧಿಸಿ ನಲ್ವತ್ತು
ಶಿವಮೊಗ್ಗ ಜೈಲು ಕೈದಿ ಹೊಟ್ಟೆಯಿಂದ ಮೊಬೈಲ್ ಹೊರ ತೆಗೆದ ವೈದ್ಯರು
ಶಿವಮೊಗ್ಗ ನಗರದ ಸೋಗಾನೆಯ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಹೊಟ್ಟೆನೋವು ಎಂದು ಜೈಲಿನ ಆಸ್ಪತ್ರೆಗೆ ಹೋದ ಕೈದಿ ಕೈದಿ ದೌಲತ್ ಖಾನ್ ಅಲಿಯಾಸ್ ಗುಂಡಾ (30) ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಎಕ್ಸ್ ರೇ
Accident deaths: ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಕಾರು ತಡೆಗೋಡೆಗೆ ಡಿಕ್ಕಿಯಾಗಿ ನಾಲ್ವರ ಸಾವು
ರಾಮನಗರ ತಾಲೂಕಿನ ಜಯಪುರ ಗೇಟ್ ಸಮೀಪ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯಲ್ಲಿ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾರೆ. ಕೆಆರ್ ಪೇಟೆ ಮೂಲದ ಮುತ್ತುರಾಜು (55), ತಮ್ಮನಗೌಡ (27), ಸಂಜು (28) ಹಾಗೂ ಚಾಲಕ ಸಚಿನ್(27) ಮೃತಪಟ್ಟವರು. ಮೈಸೂರಿನಿಂದ ಬೆಂಗಳೂರು
ವಂಚಕಿ ಪರ ಠಾಣೆಯಲ್ಲಿ ಕರ್ತವ್ಯಕ್ಕೆಅಡ್ಡಿಪಡಿಸಿದ್ದ ನಕಲಿ ವಕೀಲನ ಬಂಧನ
ಕೋಟ್ಯಂತರ ವಂಚನೆ ಪ್ರಕರಣದ ಆರೋಪಿ ಪರ ಠಾಣೆಗೆ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಕಲಿ ವಕೀಲನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ ನಿವಾಸಿ ಯೋಗಾನಂದ್ (52) ಬಂಧಿತ. ಪ್ರಭಾವಿ ರಾಜಕಾರಣಿಗಳ ಆಪ್ತೆಯೆಂದು ನಂಬಿಸಿ ವಂಚಿಸಿದ್ದ ಪ್ರಕರಣದ ಆರೋಪಿ ಸವಿತಾ ಪರ ವಕೀಲ