Menu

ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್‌ ಅರೆಸ್ಟ್‌

ಪೊಲೀಸ್ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆಟೊ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ಬಂಧಿತ ಆರೋಪಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆಸೀಫ್ ಪೊಲೀಸ್ ಎಂದು ಹೇಳಿಕೊಂಡು ಬಂದು ಹಣ ವಸೂಲಿ ಮಾಡುತ್ತಿದ್ದ. ಪಾರ್ಕ್‌ನಲ್ಲಿರುವವರನ್ನು ಬೆದರಿಸಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ. ಆರೋಪಿ ಇಬ್ಬರಿಂದ 12 ಗ್ರಾಂನ ಚಿನ್ನದ ಸರ ಹಾಗೂ 5 ಗ್ರಾಂನ ರಿಂಗ್ ಮತ್ತು 10,000 ರೂ. ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದ. ಪೋಲಿಸ್ ಎಂದು

ಸ್ನೇಹಿತೆಯ ಭೇಟಿಯಾಗಲು ಬುರ್ಖಾ ಧರಿಸಿ ಹಾಸ್ಟೆಲ್‌ಗೆ ಬಂದ ಯುವಕ

ಬೆಂಗಳೂರಿನ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ಸ್ನೇಹಿತೆಯನ್ನು ಭೇಟಿಯಾಗಲು ಯುವಕನೊಬ್ಬ ಬುರ್ಖಾ ಧರಿಸಿ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿರುವ ಘಟನೆ ನಡೆದಿದೆ. ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ರಾತ್ರಿ 7 ಗಂಟೆಗೆ ಯುವಕ ಬುರ್ಖಾ ಧರಿಸಿ ಪ್ರವೇಶಿಸಿದ್ದ. ಬುರ್ಖಾ ಧರಿಸಿದ ಯುವಕ ಮಾಲೂರು ಮೂಲದವನು ಎನ್ನಲಾಗಿದೆ.

ಅರೆಸ್ಟ್‌ ಬೆದರಿಕೆಯೊಡ್ಡಿ 2 ತಿಂಗಳಲ್ಲಿ ವೃದ್ಧೆಯ ಖಾತೆಯಿಂದ 20.25 ಕೋಟಿ ರೂ. ದೋಚಿದ್ರು

ಸೈಬರ್ ವಂಚಕರು ಮುಂಬೈನಲ್ಲಿ  ವೃದ್ಧ ಮಹಿಳೆಯನ್ನು 2 ತಿಂಗಳು ಡಿಜಿಟಲ್ ಅರೆಸ್ಟ್‌ ಮಾಡಿ ಅವರ ಬ್ಯಾಂಕ್ ಖಾತೆಯಿಂದ 20.25 ಕೋಟಿ ರೂ. ದೋಚಿಸಿದ್ದಾರೆ. ಈ ಸಮಯದಲ್ಲಿ ಆಕೆಯನ್ನು ಮತ್ತು ಮಕ್ಕಳನ್ನು ಬಂಧಿಸುವುದಾಗಿ ವಂಚಕರು ಬೆದರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು

ಹಮಾಸ್‌ ಉಗ್ರರನ್ನು ಬೆಂಬಲಿಸುವ ಭಾರತೀಯ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್‌

ಹಮಾಸ್‌ ಉಗ್ರರಿಗೆ ಬೆಂಬಲ ವ್ಯಕ್ತಪಡಿಸಿದ್ದ ಭಾರತೀಯ ಸಂಶೋಧನಾ ವಿದ್ಯಾರ್ಥಿಯನ್ನು ಅಮೆರಿಕದ ವಲಸೆ ಅಧಿಕಾರಿಗಳು ಬಂಧಿಸಿದ್ದು ಗಡಿಪಾರುಗೊಳಿಸುವ ಸಾಧ್ಯತೆಯಿದೆ. ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಪೋಸ್ಟ್-ಡಾಕ್ಟರಲ್ ಫೆಲೋ ಬದರ್‌ ಖಾನ್ ಸೂರಿ ಬಂಧಿತ. ಬದರ್‌ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಅಮೆರಿಕದಲ್ಲಿ ಹಮಾಸ್‌

ನಟಿ ಹೆಸರಲ್ಲಿ ನಕಲಿ ವಾಟ್ಸಾಪ್‌ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಸೈಬರ್‌ ಖದೀಮರು

ನಕಲಿ ಮೊಬೈಲ್‌ ನಂಬರ್ ತೆಗೆದುಕೊಂಡು ವಾಟ್ಸಾಪ್‌ಗೆ ನಟಿಯೊಬ್ಬರ ಫೋಟೋ ಹಾಕಿದ ಸೈಬರ್‌ ವಂಚಕರು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬಯಲಾಗಿದೆ. ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ‌ ಆಕೆಯ ಫೋಟೋವನ್ನು ಡಿಪಿಯಾಗಿ ಹಾಕಿಕೊಂಡು, ಸ್ವಲ್ಪ ಹಣದ‌ ಅವಶ್ಯಕತೆ ಇದೆ, ಹಣ ಇದ್ದರೆ

ದಾವಣಗೆರೆಯಲ್ಲಿ ಚಿನ್ನ ಕಳವು: ಒಂದೇ ದಿನದಲ್ಲಿ ಕಳ್ಳನ  ಬಂಧಿಸಿದ ಪೊಲೀಸ್‌

ದಾವಣಗೆರೆಯ  ಹೊನ್ನಾಳಿ ಪಟ್ಟಣದ ಸರ್ವರಕೇರಿಯಲ್ಲಿ ನಡೆದ ಆಭರಣ ಕಳವು ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಹೇಳಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಚುರ್ಚುಗುಂಡಿ ಗ್ರಾಮದ ಶಿವರಾಜ್ ಪಿ.ಎಸ್. ಬಂಧಿತ.

ಪಾಕಿಸ್ತಾನದ ಪರ ಗೋಡೆ ಬರಹ: ಇಬ್ಬರು ಗುತ್ತಿಗೆ ಕಾರ್ಮಿಕರ ಬಂಧನ

ಬೆಂಗಳೂರು: ಬಿಡದಿ ಬಳಿಯ ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಪಾಕಿಸ್ತಾನದ ಪರ ಗೋಡೆ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕದ ಹೈಮದ್ ಹುಸೇನ್(24) ಮತ್ತು ಸಾದಿಕ್(20) ಬಂಧಿತ ಆರೋಪಿಗಳಾಗಿದ್ದಾರೆ.ಇವರಿಬ್ಬರು ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ

ಪ್ರಿಯಕರ ಜೊತೆಗೂಡಿ ಗಂಡನ ಕೊಂದು ಡ್ರಮ್ ನಲ್ಲಿ ಶವ ಇರಿಸಿ ಸೀಮೆಂಟ್ ತುಂಬಿದ ಪತ್ನಿ!

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ನಡೆದಿದೆ. ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್ (29) ಕೊಲೆಯಾದ ಪತಿ.

ಬೆಳಗಾವಿಯಲ್ಲಿ ಬಸ್‌ ಕಳ್ಳಿಯರ ಗ್ಯಾಂಗ್‌ ಸೆರೆ, ಚಿನ್ನಾಭರಣ ವಶ

ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ  ಸರ್ಕಾರಿ ಬಸ್ಸುಗಳು  ಮಹಿಳೆಯರಿಂದ ತುಂಬಿ ತುಳುಕುತ್ತಿರುವುದನ್ನೇ  ದಾಳ ಮಾಡಿಕೊಂಡು ಬಸ್‌ ಗಳಲ್ಲಿ   ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ವಡ್ಡರವಾಡಿಯ ಅನಿತಾ ಚೌಗಲೆ, ನಿಶಾ ಲೊಂಡೆ, ಗಿಡ್ಡಿ

ಅತ್ತಿಬೆಲೆಯಲ್ಲಿ ವಿವಾಹೇತರ ಸಂಬಂಧ ಶಂಕೆಯಿಂದ ಪತ್ನಿಯ ಕೊಲೆ

ಆನೇಕಲ್‌ನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಚಾಮಾನಹಳ್ಳಿಯಲ್ಲಿ ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಹಿಟ್ಟಿನ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ. ಅನಿತಾ(27) ಕೊಲೆಯಾದ ಮಹಿಳೆ. ರಾಚಮಾನಹಳ್ಳಿಯ ವಾಸಿ ಬಾಬು(32) ಕೊಲೆ ಆರೋಪಿ. ಆರೋಪಿಗೆ ಇಬ್ಬರು ಪತ್ನಿಯರು, ನಾಲ್ಕು ಜನ ಮಕ್ಕಳಿದ್ದಾರೆ.