ಅಪರಾಧ
ವಿಜಯಪುರದಲ್ಲಿ ಕಾರು ಪಲ್ಟಿಯಾಗಿ ಮೂವರ ಸಾವು
ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಮೃತಪಟ್ಟವರನ್ನು ಅಭಿಷೇಕ್ ಸಾವಂತ್ (23), ವಿಜಯಕುಮಾರ್ ಔರಂಗಾಬಾದ್ (24), ರಾಜು ಬಿರಾದಾರ (23) ಎಂದು ಗುರುತಿಸಲಾಗಿದೆ. ರಾಜು ಕಾಂಬಳೆ, ಪೋಳ ಗಾಯಗೊಂಡವರು. ಇವರೆಲ್ಲ ಕಾರಿನಲ್ಲಿ ಸೊಲ್ಲಾಪುರಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಗಂಡನ ಕೊಲೆಗೈದು ಆತನ ಜೇಬಲ್ಲಿಟ್ಟಳು ವಯಾಗ್ರ ಪ್ಯಾಕ್
ಕಾನ್ಪುರದಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ಗಂಡನನ್ನು ಕೊಲೆ ಮಾಡಿ, ಗಂಡನ ಶರ್ಟ್ ಜೇಬಿನಲ್ಲಿ 8 ವಯಾಗ್ರ ಪ್ಯಾಕ್ಗಳನ್ನು ಇಟ್ಟು, ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ಸತ್ತಿದ್ದಾನೆ ಎಂದು ಬಿಂಬಿಸಿದ್ದಳು. ಪೊಲೀಸರು ಸತ್ಯ ಎಂದು ನಂಬಿದ್ದರು. ಶವಪರೀಕ್ಷೆಯ ವರದಿ ಬಂದಾಗ ಆತ ಸತ್ತಿದ್ದು
ಕಪಿಲ್ ಶರ್ಮಾ, ರಾಜ್ಪಾಲ್ ಯಾದವ್ ಸೇರಿ ನಾಲ್ವರಿಗೆ ಪಾಕ್ನಿಂದ ಜೀವ ಬೆದರಿಕೆ
ಕಾಮಿಡಿ ಶೋ ನಿರೂಪಕ ಕಪಿಲ್ ಶರ್ಮಾ, ಬಾಲಿವುಡ್ ಕಾಮಿಡಿ ನಟ ರಾಜ್ಪಾಲ್ ಯಾದವ್ ಸೇರಿದಂತೆ ಒಟ್ಟು ನಾಲ್ವರು ಸೆಲೆಬ್ರೆಟಿಗಳಿಗೆ ಪಾಕಿಸ್ತಾನದಿಂದ ಇಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು, ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಪಿಲ್ ಶರ್ಮಾ, ರಾಜ್ಪಾಲ್ ಯಾದವ್,
ಪತ್ನಿಯ ಕೊಂದು ಕುಕ್ಕರ್ನಲ್ಲಿ ಬೇಯಿಸಿ ಕೆರೆಗೆಸೆದ ನಿವೃತ್ತ ಸೈನಿಕ
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ನಲ್ಲಿ ನಿವೃತ್ತ ಸೈನಿಕರೊಬ್ಬರು ತಮ್ಮ ಪತ್ನಿಯನ್ನು ಹತ್ಯೆ ಮಾಡಿ, ದೇಹದ ಭಾಗಗಳನ್ನು ಕುಕ್ಕರ್ನಲ್ಲಿ ಹಾಕಿ ಬೇಯಿಸಿರುವ ಪ್ರಕರಣ ಬಯಲಾಗಿದೆ. ಜನವರಿ 18ರಂದು ರಾಚಕೊಂಡ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಮೀರಪೇಟ್ ಪೊಲೀಸ್ ಠಾಣೆಗೆ ತಮ್ಮ ಪತ್ನಿ ವೆಂಕಟ ಮಾಧವಿ
ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ, ಮಗನ ಬಂಧನ
ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದ ಸಮೀಪ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ, ಮಗನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯೂರು ಗ್ರಾಮದ ನಾಗೇಶ ಬಿನ್ ಶಿವಪ್ರಸಾದ್(28) ಹಾಗೂ ಶಿವಪ್ರಸಾದ್ ಬಿನ್ ಷಡಕ್ಷರಿ(48) ಖೋಟಾ ನೋಟು ಪ್ರಿಂಟ್ ಮಾಡಿ ಪೋಲೀಸರ ಬಲೆಗೆ ಬಿದ್ದ
ಟರ್ಕಿ ಹೋಟೆಲ್ನಲ್ಲಿ ಬೆಂಕಿಗೆ ಆಹುತಿಯಾದವರ ಸಂಖ್ಯೆ 76
ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್ನಲ್ಲಿರುವ ಹೋಟೆಲ್ನಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, 51 ಮಂದಿ ಗಾಯಗೊಂಡಿದ್ದಾರೆ. 12 ಅಂತಸ್ತಿನ ಈ ಹೋಟೆನಲ್ಲಿ ಅಗ್ನಿ ಅವಘಡಕ್ಕೆ ನಿಖರ ಕಾರಣ ಏನು ಎಂಬ ಬಗ್ಗೆ ಸ್ಥಳೀಯ
ಹೆಚ್.ಡಿ ಕೋಟೆಯಲ್ಲಿ ಮಗನೆದುರೇ ಪೆಟ್ರೋಲ್ ಸುರಿದು ಪತ್ನಿಗೆ ಬೆಂಕಿ ಹಚ್ಚಿದ ಪತಿ
ಹೆಚ್.ಡಿ ಕೋಟೆಯ ಹನುಮಂತ ನಗರದಲ್ಲಿ ವ್ಯಕ್ತಿಯೊಬ್ಬ ಮಗನ ಎದುರೇ ತನ್ನ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪತಿಯ ಕ್ರೌರ್ಯದಿಂದ ನಲುಗಿದ ಮಹಿಳೆ ಮಧುರ. ಆಕೆಯ ಗಂಡ ಮಲ್ಲೇಶ್ ನಾಯ್ಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾತ. ಮಹಿಳೆಗೆ ಮೈಸೂರಿನ ಖಾಸಗಿ
ಇಂದು ಅಪಘಾತಗಳಲ್ಲಿ ಮೃತಪಟ್ಟವರಿಗೆ ಸಿಎಂ ಸಂತಾಪ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸಲ್ಲಿಸಿದ್ದಾರೆ. ಎರಡು ಅಪಘಾತಗಳಲ್ಲಿ ಒಟ್ಟು 14 ಜನ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ
ವಾಹನ ಟೈರ್ ಸ್ಫೋಟ: ಮಂತ್ರಾಲಯ ಪಾಠ ಶಾಲೆಯ ವಿದ್ಯಾರ್ಥಿಗಳು ಸೇರಿ ಮೂವರ ಸಾವು
ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ರಸ್ತೆಯಲ್ಲಿ ಟೈರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ರೂಸರ್ ಚಾಲಕ ಶಿವ, ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಅಯ್ಯವಂದನ್ (18), ಸುಜೇಂದ್ರ (22) ಹಾಗೂ ಅಭಿಲಾಷ್(20) ಮೃತಪಟ್ಟವರು. ಘಟನೆಯಲ್ಲಿ 10
ಯಲ್ಲಾಪುರದಲ್ಲಿ ಲಾರಿ ಪಲ್ಟಿಯಾಗಿ 10 ಜನ ಸಾವು
ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನರು ಮೃತಪಟ್ಟಿದ್ದಾರೆ. ಈ ದುರಂತ ಇಂದು (ಬುಧವಾರ) ಬೆಳಗ್ಗೆ ಸಂಭವಿಸಿದೆ. 15ಕ್ಕೂ ಹೆಚ್ಚು ಜನರಿಗೆ ಗಂಭೀರ