Menu

ಕಥೆ ಕವನ ಗೀಚಲು ಕವಯತ್ರಿಯರ ಮನೆ-ಮನೆಯ ಗೋಳು!

ಪ್ರತಿಯೊಬ್ರು ಎಷ್ಟೆಷ್ಟೋ ಕಷ್ಟ ಬಿದ್ದು ಏನಾರ ಬರುದ್ರ ಮತ್ತ ಬುಕ್ಪ್ರಿಂಟ್ಮಾಡಿದ್ರ… ಅಡುಗೆ ಮನಿ ಸಾಹಿತ್ಯ ಅಂತ ಮೂಗು ಮುರಿತಾರಲ್ರೀ ಈ ಗಂಡಸರು. ಪುಸ್ತಕದ ಅಂಗಡಿಯೊಳಗ ಹೆಣ್ಮಕ್ಕಳು ಬರೆದ ಪುಸ್ತಕಕ್ಕ ಒಂದಿಷ್ಟರ ಗಂಟು ಬೀಳ್ತಾರೇನ್ರೀ ಓದವ್ರು… ಯಾಕಾರ ಬರೀಬೇಕು ಅನ್ಸುವಂಗ ವರ್ತಸ್ತಾರ. ಇಲ್ಲೀನೂ ಸ್ತ್ರೀ ಪುರುಷ ಬೇಧ… ಮಹಿಳಾ ಸಾಹಿತ್ಯವನ್ನ ಓದೋರು, ಪ್ರೋತ್ಸಾಹ ಮಾಡೋರು ಎ ನೂರುಕ್ಕ ಒಬ್ರ ನೋಡ್ರೀ , ಮತ್ತ ಮೂರೊತ್ತು ಅಡಗಿಮನಿಯೊಳಗ ಇದ್ದು ಬರದ್ರ ಅಡುಗಿ ಮನಿ

 ಬೆಂಗಳೂರಿನ ಪರೋಪಕಾರಿ ರಾವ್ ಬಹದ್ದೂರ್‌ ಎಲೆ ಮಲ್ಲಪ್ಪ ಶೆಟ್ಟರು

ವಿಜಯನಗರದ ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರಮಾತ್ಯನ ಶಾಸನದಲ್ಲಿ ಲಕ್ಷ್ಮೀಧರಮಾತ್ಯನ ತಾಯಿ ಹಾಲನ್ನು ಕುಡಿಸುವಾಗ ಕಿವಿಯಲ್ಲಿ ಹೇಳಿದ ಮಾತು… ಕೆರೆಯಂ ಕಟ್ಟಿಸು, ಬಾವಿಯಂ ಸೆವೆಸು, ದೇವಾಗಾರಮಂ ಮಾಡಿಸು, ಜ್ವರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು… ಅಂದರೆ ಇದರ ಅರ್ಥ ಹೀಗಿದೆ: ಕೆರೆಯನ್ನು ಕಟ್ಟಿಸು, ಬಾವಿಯನ್ನು

ವ್ಯಕ್ತಿ ಹಿಂಬಾಲಕರೇ ಬಿಜೆಪಿಯಲ್ಲಿನ ಗೊಂದಲಕ್ಕೆ ಕಾರಣ

ಬಿಜೆಪಿಯಲ್ಲಿ ಇತ್ತೀಚಿನ ಬೆಳವಣಿಗೆಗಳು ತಳಮಟ್ಟದ ಕಾರ್ಯಕರ್ತರಿಗೆ ತೀವ್ರ ಮುಜುಗರ ಉಂಟು ಮಾಡುತ್ತಿರುವುದು ಸುಳ್ಳಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಬೇಕಾದವರು ಹಾದಿಬೀದಿಯಲ್ಲಿ ಮಾತನಾಡುವುದು ಕಂಡಾಗ ಪಕ್ಷದ  ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದು  ಸತ್ಯ. ಸಮಸ್ಯೆ ಬಗೆಹರಿಸಬೇಕಾದ ಹೈಕಮಾಂಡ್ ನಾಯಕರ ಕಾದು ನೋಡುವ ತಂತ್ರಕ್ಕೆ

ಕೊಟ್ಟಾಗ ಅಪತ್ಬಾಂಧವ ಕೊಡೆಂದಾಗ ದೆವ್ವ!

ಮೈಕ್ರೋ ಫೈನಾನ್ಸ್‌ನಂತಹ ಹಣಕಾಸು ವ್ಯವಹಾರದ ಸಂಸ್ಥೆಗಳು ಬ್ಯಾಂಕ್‌ಗಳ ಮಾದರಿಯಲ್ಲಿ ಕ್ರೆಡಿಟ್ ಸ್ಕೋರ್ ಇರಬೇಕು, ಆದಾಯದ ಮೂಲ ತೋರಿಸಬೇಕು, ಸಾಲ ಬೇಕೆಂದ್ರೆ ವರ್ಷಗಟ್ಟಲೆ ಅಡ್ಡಾಡಬೇಕು, ಅವರಿವರಿಂದ ಸೆಕ್ಯೂರಿಟಿ, ಷ್ಯೂರಿಟಿ ಕೊಡಿಸಬೇಕು ಎಂದು ಜನರನ್ನು ಅಲೆದಾಡಿಸದೇ ಸುಲಭವಾಗಿ ಸಾಲ ಮಂಜೂರು ಮಾಡುವ ವಿಧಾನ ಅನುಸರಿಸಿದ್ದು

ಹೆಣ್ಣು ಉಳಿದರೆ ನಾಡು ಉಳಿದೀತು…!

ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚು ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ದಿ ಹೊಣೆ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಆರು ವರ್ಷದೊಳಗಿನ ಹೆಣ್ಣು ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು,

ಲೌಕಿಕ ಬದುಕಿನೆಡೆಗೆ ನೋಡದ ನಾಗಾಸಾಧುಗಳು

ಭಾರತದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಭಕ್ತರು, ಸಾಧು, ಸಂತರು ಬರುತ್ತಿzರೆ. ಇಡೀ ಕುಂಭಮೇಳದ ಪ್ರಮುಖ ಆಕರ್ಷಣೆ ನಾಗಾಸಾಧುಗಳು. ಲೌಕಿಕ ಬದುಕಿನ ಕಡೆಗೆ ಕಿರುಗಣ್ಣು ಎತ್ತಿಯೂ ನೋಡದೆ, ಅಲೌಕಿಕ ಸಾಧನೆಯಲ್ಲಿ ಮುಳುಗೇಳುವ ಈ ನಾಗಸಾಧುಗಳು ಯಾರು? ನಾಗಸಾಧುಗಳು

ಒಂದ್ ಮನಿ ಕಥಿ: ಮನಸೀಗಿ ನಾಟುವಂಗೈತಿ…

ಗ್ರಾಮೀಣ ಭಾಗದಾಗ ಒಂದ್ ಗಾದೀ ಮಾತ ಐತಿ. ಊರ ಗೌಡನ ಬಗಲಾಗೊಂದು ಹರಕ್ ಛತ್ರಿ, ಮತ್ತೊಂದು ಮುರಕ್ ರಂಡಿ ಇರಬೇಕಂತ ಹಂಗಿದ್ರನೇ ಅವನೀಗಿ ಮರ್ವಾದಿಯಿಂದ ‘ಊರಗೌಡ’ ಅಂತಾರಂತ. ಈ ಗಾದಿಮಾತ ಎಷ್ಟು ಖರೆನೊ, ಎಷ್ಟು ಸುಳ್ಳೊ ದೇವರೇ ಬಲ್ಲ. ಯಾಕಪಾ ಹಿಂಗ್ಯಾಕ

ದಿಲ್ದಾರ ಮಂದಿ ಚರ್ಮದ ಸೈಜ್ ಗೊತ್ತಾಗುದೇ ಇಲ್ಲಿ!

ಇಲ್ಲಿ ಮಂದಿ ?ಲ್ ದಿಲ್ದಾರ ಇವ್ರು?! ತಲೆ ಬಿಸಿ ಅಂಬು ಶಬ್ದಾನೆ ಅವರ ಕುಡೆ ಇಲ್ಲಾ. ಹಂಗಾಗೆ ಅವರು ತಲಿಮ್ಯಾನೆ ಕುಂತಿದ್ದು, ಮಂದಿ ಸೇವೆ ಮಾಡ್ತೆವು ಹೇಳಿಕಂಡ ಜನ ಪ್ರತಿನಿಧಿಗಳು ಮತ್ತ ಸರಕಾರದ ಕೆಲಸ ದೇವರ ಕೆಲಸ ಅಂತೆ ಡೌ ಮಾಡುಕೆ

ಸಂವಿಧಾನ ಬದಲಾವಣೆ ಚರ್ಚೆ ಅನಗತ್ಯ

ಭಾರತದ ಸಂವಿಧಾನ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ಎಲ್ಲೆಲ್ಲೂ ಸಂವಿಧಾನದ ಮಾತು. ಸಂವಿಧಾನಕ್ಕೆ ಏನೋ ಅಪತ್ತು ಬಂದಿದೆ ಎನ್ನುವ ರೀತಿಯಲ್ಲಿ ಮಾತುಗಳು ಮತ್ತು ಚರ್ಚೆ ಕೇಳುತ್ತಿವೆ. ಸಂವಿಧಾನದ ಬಗೆಗೆ ಅರಿವು, ಸಂವಿಧಾನ ಓದು ಮುಂತಾದ ಅಭಿಯಾನಗಳು ಭಾರೀ  ವಿಜೃಂಭಣೆಯಿಂದ ಮತ್ತು ಅರ್ಥಪೂರ್ಣವಾಗಿ ನಡೆದುಹೋದವು.

ಗಡಿ ಭಾಗದ ಕನ್ನಡ: ಮರಾಠಿ ಜನರ ಅಡ್ಡ!

ಸದರಬಜಾರ್ ಕಾದಂಬರಿ ವಸ್ತು ಎಂಬತ್ತನೆಯ ದಶಕದಲ್ಲಿ ಕಂಡು ಬಂದಿರುವ ಸನ್ನಿವೇಶ ಒಳಗೊಂಡಿದೆ. ಅಂದಿನ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜ ಭಾಷೆಯ ಎಲ್ಲೆ ಮೀರಿ ಜೀವಿಸಿದೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀಯ ಸಂಘರ್ಷ, ಅಸ್ಮಿತೆ, ಅಸಹಾಯಕ