ಅಂಕಣ
ಜಾತ್ಯತೀತ ವ್ಯವಸ್ಥೆಯಲ್ಲಿ ಜಾತಿಗಣತಿ: ಹಲವು ಸಂದೇಹಗಳಿಗೆ ಉತ್ತರ ಬೇಕಿದೆ
ಈಗ ಮಾಧ್ಯಮದಲ್ಲಿ ಹರಿದಾಡುವ ಅಂಕೆ ಸಂಖ್ಯೆಗಳು ಮತ್ತು ಇತರ ಮಾಹಿತಿಗಳು ಸೋರಿಕೆಯಾದ ವರದಿಯಿಂದ ಹೊರಬಂದಿದ್ದು, ಇದರ ಮೇಲೆ ಅಭಿಪ್ರಾಯ ವನ್ನು ಮಾಡಲಾಗದು. ಒಂದು ದೃಢವಾದ ಅಭಿಪ್ರಾಯವನ್ನು ರೂಪಿಸಬೇಕಿದ್ದರೆ ಅಧಿಕೃತ ವರದಿಗಾಗಿ ಸ್ವಲ್ಪದಿನ ಕಾಯಲೇಬೇಕು. ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ವರದಿಯು ಯಥಾರೀತಿ ಜಾರಿಯಾಗುವ ಲಕ್ಷಣ ಕಾಣುತ್ತಿಲ್ಲ. ಇದರ ಬಗೆಗೆ ಅಂತಿಮ ನಿರ್ಣಯ ತೆಗೆದು ಕೊಳ್ಳಲು ವರ್ಷಗಳೇ ಬೇಕಾಗಬಹುದು. ಭಾರತಕ್ಕೂ ವಿಭಜನೆಗೂ ಅವಿನಾಭಾವ ಸಂಬಂಧ ಇದೆ ಎನ್ನುವುದು ಹಳೆಯ ಮಾತು.
ತಪ್ಪಿ ಹೋಗುವ ಬದುಕಿನ ಲೆಕ್ಕಾಚಾರ ತಿಳಿಸುವ ಟಿ. ಎಸ್. ಗೊರವರ ಕವಿತೆ
‘ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ’ ಎನ್ನುತ್ತಾರಲ್ಲ. .ಹಾಗೆ ಜತನದಿಂದ ಕೂಡಿಟ್ಟ ಭವಿಷ್ಯದ ಕನಸುಗಳೆಲ್ಲ ಯಾರೋ ಹಾಕಿದ ದಾಳಕ್ಕೆ ನುಚ್ಚುನೂರಾಗಿ ಭ್ರಮನಿರಸನಗೊಳಿಸುತ್ತವೆ. ಬದುಕನ್ನು ಎಷ್ಟೇ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಹಿಡಿತದಿಂದ ಬಾಳುವೆ ಮಾಡಿದರೂ ಹಾಸಿಗೆಯ ಹೊರಗೆ ಕಾಲು ಇಣುಕಿ ಬಿಡುತ್ತವೆ. ಹಾಗಿದ್ದರೆ
ಭೂಮಿ ಉಳಿದರೆ ಮಾತ್ರ ಬದುಕಿನ ಭರವಸೆ
ಚೀನಾ ದೇಶವು ವಿಶ್ವದಲ್ಲಿಯೇ ಅತಿಹೆಚ್ಚು ಪವನ ಮತ್ತು ಸೌರ ವಿದ್ಯುತ್ ಅನ್ನು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಉರುಗ್ವೆ ದೇಶವು ಆಂತರಿಕ ಬಳಕೆಯ ೯೮% ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳಿಂದಲೇ ಉತ್ಪಾದಿಸಿ ಜಗತ್ತಿಗೆ ಮಾದರಿಯಾಗಿದೆ. ಕೀನ್ಯಾ ದೇಶವು ಬೇಡಿಕೆಯ ಸುಮಾರು ಅರ್ಧದಷ್ಟು ವಿದ್ಯುತ್
ರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್ಗಳಲ್ಲಿ ಯಾರು ಮೇಲು
ಶಾಸಕಾಂಗ ಮತ್ತು ಕಾರ್ಯಾಂಗವು ತನ್ನ ವಿಧಿಬದ್ಧ ಕರ್ತವ್ಯವೆಸಗಲು ವಿಫಲವಾದಾಗ, ಅನ್ಯಾಯಕ್ಕೊಳಗಾದವನ ಪರವಾಗಿ ಕಂಪ್ಲೀಟ್ ಜಸ್ಟೀಸ್ ಅಡಿ ಸುಪ್ರೀಂಕೋರ್ಟ್, ಆರ್ಟಿಕಲ್ ೧೪೨ ಅಸ್ತ್ರವನ್ನು ಬಳಸುವುದರಲ್ಲಿ ತಪ್ಪೇನಿದೆ? ಕಳೆದ ವಾರದಲ್ಲಿ ದೇಶದ ಸರ್ವೋನ್ನತ ನ್ಯಾಯಪೀಠವಾದ ಸುಪ್ರೀಂಕೋರ್ಟ್ ನೀಡಿದ ಎರಡು ಪ್ರಮುಖ ಆದೇಶಗಳು ಎಲ್ಲರ ಗಮನ
ನಿರ್ದಿಷ್ಟ ಪ್ರೋಟಿನ್ ಕೊರತೆ ಕಾರಣ ರಕ್ತಸ್ರಾವದಿಂದ ಜೀವ ಹಿಂಡುವ ಹಿಮೋಫಿಲಿಯಾ
ತುರ್ತು ಸಂದರ್ಭಗಳಲ್ಲಿ ರಕ್ತ ಪರೀಕ್ಷೆ ಮಾಡಿ, ನಿರ್ದಿಷ್ಟ ಪ್ರೋಟೀನ್ನ ಕೊರತೆಯನ್ನು ಪತ್ತೆ ಮಾಡಲು ಸಮಯವಿಲ್ಲದಾಗ, ಹೊಂದಿಕೊಳ್ಳುವ ಆರೋಗ್ಯವಂತ ಮನುಷ್ಯನ ತಾಜಾ ರಕ್ತವನ್ನೇ ರೋಗಿಗೆ ನೀಡಲಾಗುತ್ತದೆ. ಬೇಕಾದ ಪ್ರೋಟೀನ್ ಅನ್ನು ಪಡೆಯುವ ರಕ್ತ ತಾನೇ ತಾನಾಗಿ ಹೆಪ್ಪುಗಟ್ಟಿ ರೋಗಿ ಅಪಾಯದಿಂದ ಪಾರಾಗುತ್ತಾನೆ. ಈ
ಮುಖಂಡರಂತೆ ಪಕ್ಷಗಳ ಕಾರ್ಯಕರ್ತರಲ್ಲೂ ಗೆಳೆತನವಿರಲಿ
ರಾಜಕೀಯ ನೇತಾರರು ಚುನಾವಣೆಯ ನಂತರದಲ್ಲಿ ಗಳಸ್ಯ ಕಂಠಸ್ಯ ಸ್ನೇಹಿತರಾಗುವಾಗ ಕಾರ್ಯಕರ್ತರಲ್ಲಿ ಮಾತ್ರ ದ್ವೇಷವೇಕೆ? ಆದ್ದರಿಂದ ಪ್ರತಿಯೊಬ್ಬರು ನಾಗರಿಕ ಸಮಾಜದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಒಂದಾಗುವುದು ಅವಶ್ಯವಿದೆ. ರಾಜಕೀಯ ಏನೇ ಇರಲಿ ವೈಯಕ್ತಿಕ ಸಂಬಂಧಗಳು ಗಟ್ಟಿಯಾಗಿರಬೇಕು. ವೈಯಕ್ತಿಕ ದ್ವೇಷಗಳಿಗೆ ಸಂಬಂಧಗಳನ್ನು ಬಲಿ ಕೊಡಬಾರದು.
ಗ್ರಾಮ ನಾಮಗಳ ಮೇಲೆ ಬೆಳಕು ಚೆಲ್ಲುವ ದೇಜಗೌ ಕೃತಿ “ವಿಲೇಜ್ ನೇಮ್ಸ್ ಆಫ್ ಮೈಸೂರ್ ಡಿಸ್ಟ್ರಿಕ್ಟ್”
ದೇಜಗೌ ಎಂದು ಕರೆಯಲ್ಪಡುವ ಪ್ರೊ.ಡಿ.ಜವರೇಗೌಡ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ವಿದ್ವಾಂಸರು. ಅವರು ಸ್ಥಳನಾಮಗಳ ಅಧ್ಯಯನದಲ್ಲಿ ತೀವ್ರ ಆಸಕ್ತಿ ಹೊಂದಿದ್ದು, ಈ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ವ್ಯಾಪಕವಾದ ಕ್ಷೇತ್ರ ಕಾರ್ಯದ ಕೊರತೆಯಿಂದಾಗಿ ಅಧ್ಯಯನದ ಮಿತಿಗಳನ್ನು ಲೇಖಕರು ಒಪ್ಪಿಕೊಂಡರೂ ಪುಸ್ತಕದಲ್ಲಿ
ಭಾರತ ಶೂನ್ಯ ಆದಾಯ ತೆರಿಗೆ ದೇಶವಾಗಬಹುದೇ?
ಕೆಲವು ಸೃಜನಶೀಲ ಪರಿಹಾರದ ಮೂಲಕ ಭಾರತದಲ್ಲಿ ಜನರ ಮೇಲೆ ಆಗುತ್ತಿರುವ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಅತೀ ಅವಶ್ಯಕವಾಗಿದೆ. ವಿವಿಧ ವಲಯಗಳಿಗೆ ತೆರಿಗೆಯ ನೆಲೆಗಳನ್ನು ವಿಸ್ತರಿಸುವ ಮೂಲಕ ಹೊರೆಯನ್ನು ಕಡಿಮೆ ಮಾಡಬಹುದು. ಕಾಂಬೋಡಿಯಾದಂತಹ ದೇಶಗಳು ಹೂಡಿಕೆಯ ಮೂಲಕ ಪೌರತ್ವವನ್ನು ನೀಡುತ್ತದೆ. ಭಾರತದಲ್ಲೂ
ದ್ರಾವಿಡ ಪಾರ್ಟಿಗಳ ಮುಂದೆ ಮಂಡಿಯೂರಿದ ಬಿಜೆಪಿ
ವಕ್ಫ್ ವಿಧೇಯಕದ ಸಂಸತ್ ಅನುಮೋದನೆ ಬಳಿಕ, ಹಂಡ್ರೆಡ್ ಪರ್ಸೆಂಟ್ ಹಿಂದೂ ಮತಗಳು ಕನ್ಸಾಲಿಡೇಟ್ ಆಯಿತೆಂದು ಬಗೆದರೆ ಅದು ಬಿಜೆಪಿ ಭ್ರಮೆಯಷ್ಟೆ. ಜಾತ್ಯತೀತ ಪಾರ್ಟಿಗಳ ಜೊತೆ ರಾಜಿ ಮಾಡಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯುವುದೂ ಬಲು ಕಷ್ಟ. -ಪಿ.ರಾಜೇಂದ್ರ, ಲೇಖಕರು ದಕ್ಷಿಣ
ಭೂಮಿಯ ಜೀವನಾಡಿ ಹಿಮನದಿಗಳನ್ನು ರಕ್ಷಿಸೋಣ
ನಾವು ವಾಸಿಸುವ ಭೂಮಿ ತುಂಬಾ ಅಮೂಲ್ಯವಾದುದು. ಮನುಷ್ಯನು ಸೇರಿದಂತೆ ಪ್ರಾಣಿ, ಪಕ್ಷಿ ಮತ್ತು ಇನ್ನಿತರ ಜೀವ ಸಂಕುಲಗಳನ್ನು ಕೋಟ್ಯಂತರ ವರ್ಷಗಳಿಂದ ಸಲಹುತ್ತಿರುವ ಭೂಮಿಯ ಅಗಾಧತೆ ಅನನ್ಯ. ಕೋಟ್ಯಂತರ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಭೂಮಿಗಿದೆ. ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ




