ಅಂಕಣ
ಅದ್ಧೂರಿತನ ಅರ್ಥಿಕ ಶಿಸ್ತನ್ನು ಮೀರದಿರಲಿ
ಮಲೆನಾಡು ಎಂದರೆ ಎಲ್ಲರ ಕಣ್ಣಿನ ಮುಂದೆ ಬರುವುದು ಇಲ್ಲಿನ ನೈಸರ್ಗಿಕ ವಾತಾವರಣ, ಇಲ್ಲಿನ ರೈತಾಪಿ ಜೀವನ, ಇಲ್ಲಿನ ಪ್ರೇಕ್ಷಣೀಯ ಪ್ರಸಿದ್ಧ ಸ್ಥಳಗಳ ಜೊತೆ ಜೊತೆಗೆ ಇಲ್ಲಿನ ಜನ ಅನೇಕ ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ವಿಭಿನ್ನ ಆಚರಣೆಗಳು, ಸಂಪ್ರದಾಯಗಳು. ಒಂದು ಬೆಳೆಯನ್ನು ಬೆಳೆಯ ಬೇಕೆಂದರೆ ಭೂಮಿತಾಯಿಗೆ ಸಲ್ಲಿಸುವ ಪೂಜೆಯಿಂದ ಬೆಳೆ ಬೆಳೆದು ನಿಂತ ಮೇಲೆ ಮೇಲೆ ಕಟಾವು ಮುಗಿಸಿ ಮನೆಗೆ ಬರುವ ತನಕವೂ ವಿವಿಧ ರೀತಿಯ ಪೂಜೆಗಳು ಸಲ್ಲಿಕೆಯಾಗುತ್ತವೆ. ಇಂತಹ ಶ್ರೇಷ್ಠ
ಬೆಲೆ ಏರಿಕೆ ಮತ್ತು ಪಕ್ಷ ರಾಜಕಾರಣ
ವಾಸ್ತವದಲ್ಲಿ ಬೆಲೆ ಏರಿಕೆಯ ನಿಯಂತ್ರಣ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆ. ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎನ್ನುತ್ತಾ ಈ ಹೊಣೆಗಾರಿಕೆಯನ್ನು ರಾಜ್ಯದ ಮಡಿಲಿಗೆ ಹಾಕಿ ಉಪಾಯದಿಂದ ನುಣುಚಿಕೊಂಡಿದ್ದಾರೆ.
ಅಹಿಂಸಾ ಪರಮೋಧರ್ಮಃ ಸಂದೇಶ ಸಾರಿದ ಮಹಾವೀರ
ಮಹಾವೀರನು ಬೋಧಿಸಿದ ತ್ರಿರತ್ನಗಳೆಂದರೆ ಸದ್ಭಕ್ತಿ, ಸತ್ಕ್ರಿಯೆ, ಸತ್ಜ್ಞಾನ. ಮಹಾವೀರನು ಪರಿಪೂರ್ಣ ಮಾನವನಲ್ಲಿ ಕಂಡುಬರುವ ಶಕ್ತಿಯನ್ನು ಅತ್ಯುನ್ನತ ವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಆವಿಷ್ಕರಿಸುವುದೇ ದೇವರೆಂದು ಪರಿಗಣಿಸಿದನು. ಅಹಿಂಸೆಯಿಂದ ಬಾಳಬೇಕು. ತನ್ನದಲ್ಲದ್ದನ್ನು ಕದಿಯಬಾರದು. ಸತ್ಯವನ್ನೇ ನುಡಿಯಬೇಕು. ಮಾದಕ ವ್ಯಸನಗಳಿಗೆ ಒಳಗಾಗಬಾರದು. ಪರಿಶುದ್ಧವಾದ ಬದುಕನ್ನು
ಕೃಷ್ಣಾ -ಕಾವೇರಿ ಜಲಹಂಚಿಕೆಯಲ್ಲಿ ರಾಜ್ಯವೆಂದೂ ನೀರುಗಂಟಿಯೇ…!
ಕರ್ನಾಟಕದ ಜನತೆಯ ಪಾಲಿಗೆ ಆಲಮಟ್ಟಿ, ತುಂಗಭದ್ರಾ, ಕೆಆರ್ಎಸ್ ಅಣೆಕಟ್ಟುಗಳು ಕಾಮಧೇನುವಲ್ಲ, ಕಲ್ಪ ವೃಕ್ಷವೂ ಆಗಿಲ್ಲ. ಏಕೆಂದರೆ ನದಿದಂಡೆ ಮೇಲಿನ ಭಾಗದಲ್ಲಿರುವ ರಾಜ್ಯಕ್ಕೆ ಇದುವರೆಗೆ ಸಿಕ್ಕಿದ್ದು ಬೊಗಸೆ ನೀರು. ಆದರೆ ಆಂಧ್ರ ಮತ್ತು ತಮಿಳುನಾಡಿಗೆ ದೊರೆತಿದ್ದು ಹಂಡೆಯಷ್ಟು.. ಕೃಷ್ಣಾ – ಕಾವೇರಿ ನದಿ
ಜೆಡಿಯು-ಟಿಡಿಪಿಯಲ್ಲಿ ವಕ್ಫ್ ಬೇಗುದಿ: ಏನು-ಎತ್ತ
ವಕ್ಫ್ ಆಸ್ತಿಗಳ ಸಂರಕ್ಷಣೆ ಸಂಬಂಧ ಎನ್ಡಿಎ ಸರ್ಕಾರ ಮಂಡಿಸಿದ್ದ ವಿಧೇಯಕ ಎರಡೂ ಸದನಗಳ ಒಪ್ಪಿಗೆ ಪಡೆದಿದೆ. ರಾಷ್ಟ್ರಪತಿಯ ಅಂಕಿತವನ್ನೂ ಪಡೆದಿದೆ. ಆಡಳಿತಾರೂಢ ಬಿಜೆಪಿ ಮತ್ತು ಮಿತ್ರಪಕ್ಷಗಳು ಈ ವಿಧೇಯಕವನ್ನು ಸ್ವಾಗತಿಸಿದ್ದರೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಧರ್ಮದ ಬೇರುಗಳನ್ನು ಅಲುಗಾಡಿಸುವ ರೀತಿಯಲ್ಲಿ
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನದ ಸಂಗಮ ಎಡೆಯೂರು ಸಿದ್ಧಲಿಂಗೇಶ್ವರ ಶ್ರೀ
ಎಡೆಯೂರು ಸಿದ್ಧಲಿಂಗೇಶ್ವರ ಶ್ರೀಗಳು ಅಲ್ಲಮಪ್ರಭುವಿನ ವೈರಾಗ್ಯ, ಬಸವಣ್ಣನವರ ಭಕ್ತಿ, ಚೆನ್ನಬಸವಣ್ಣನ ಜ್ಞಾನದ ತ್ರಿವೇಣಿ ಸಂಗಮವೆಂದು ಗದಗದ ಡಾ.ತೋಂಟದ ಸಿದ್ಧಲಿಂಗಸ್ವಾಮಿಗಳು ಹೇಳುತ್ತಾರೆ. ಅಚಾರ್ಯ, ಅವಧೂತ, ಪವಾಡಪುರುಷರಾಗಿ ಮೇಲ್ವರ್ಗ ಕೆಳವರ್ಗವನ್ನು ಶರಣ ಚಳುವಳಿಯಲ್ಲಿ ಒಟ್ಟಾಗಿಸಿದ ಸಂತ ಇವರು. ಸಿದ್ಧಲಿಂಗ ಯತಿಗಳ ಕಾಲ ನಿರ್ಣಯ, ಸ್ಥಳ
ಜಾಗತಿಕ ಅಧ್ಯಯನದ ವಿಷಯವಾದ ಕುಂಭಮೇಳ
ಮಿಲಿಟರಿ ಶಕ್ತಿ, ಅದರ ಆಯುಧಗಳು, ಗಡಿಯಲ್ಲಿನ ಭದ್ರತೆಯ ವ್ಯವಸ್ಥೆ ಇವುಗಳಿಂದ ಮಾತ್ರ ದೇಶದ ಭದ್ರತೆ ಸಾಧ್ಯವಾಗುವುದಿಲ್ಲ, ಇವುಗಳ ಜೊತೆ ನಾಯಕತ್ವ, ಯೋಜನೆ ರೂಪಿಸುವ ವ್ಯವಸ್ಥೆ, ಯೋಜನೆ ಜಾರಿಗೊಳಿಸುವ ವ್ಯವಸ್ಥೆ, ಅಧಿಕಾರಿಗಳಲ್ಲಿ ಸಮರ್ಪಣಾ ಮನೋಭಾವ ಜೊತೆಗೆ ಇಲ್ಲಿಗೆ ಬರುವ ಜನರು, ಕಷ್ಟ-ನಷ್ಟಗಳು, ವ್ಯಯ
ವಕ್ಫ್ ತಿದ್ದುಪಡಿ: ಭಾರತದ ನೆಲದಲ್ಲಿ ಸಂವಿಧಾನವೇ ಸಾರ್ವಭೌಮ
ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ೧೪ನೇ ವಿಧಿಯ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಿಯಮದ ಪಾಲನೆಗಾಗಿ ಸಂಸತ್ತಿನ ವಕ್ಫ್ ತಿದ್ದುಪಡಿ ವಿಧೇಯಕವು ಅಂಗೀಕೃತವಾಗಿ ಕಾಯಿದೆಯಾಗಿ ರೂಪುಗೊಳ್ಳುತ್ತಿದೆ. ಭಾರತದ ನೆಲದಲ್ಲಿ ಯಾವುದೇ ವೈಯಕ್ತಿಕವಿರಬಹುದು ಅಥವಾ ಇನ್ನಾವುದೇ ಕಾಯಿದೆಗಳು ಸಂವಿಧಾನಕ್ಕಿಂತ ದೊಡ್ಡವಲ್ಲ. ಸಂವಿಧಾನದಡಿ ಸೃಜನೆಗೊಂಡ
ಬಿಜೆಪಿ ಭಿನ್ನಮತ ಮತ್ತು ಬಣ ಬಡಿದಾಟಕ್ಕೆ ತೆರೆ ಬೀಳಬಹುದೆ?
-ರಮಾನಂದ ಶರ್ಮಾ ಲೇಖಕರು ಫೈರ್ ಬ್ರ್ಯಾಂಡ್ ಹಿಂದುತ್ವವಾದಿ ಭಿನ್ನಮತೀಯ ನಾಯಕ ಬಸವರಾಜ ಪಾಟೀಲ್ ಯತ್ನಾಳ್ರನ್ನು ಭಾರತೀಯ ಜನತಾ ಪಕ್ಷದಿಂದ ೬ ವರ್ಷ ಕಾಲ ಹೊರಹಾಕಿ ರುವ ಬೆಳವಣಿಗೆಯು ವರ್ಷಗಳಿಂದ ಪಕ್ಷದಲ್ಲಿ ನಡೆಯುತ್ತಿರುವ ಭಿನ್ನಮತ ಮತ್ತು ಬಣ ಬಡಿದಾಟಕ್ಕೆ ಪೂರ್ಣವಿರಾಮ ಹಾಕಬಹುದೇ? ಪಕ್ಷ
ಬದುಕಿನಲ್ಲಿ ಕೊಂಡುಕೊಳ್ಳಲಾಗದ ನೆಮ್ಮದಿಯನ್ನು ಕಂಡುಕೊಳ್ಳಿ
ನೆಮ್ಮದಿಯನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ಕಂಡುಕೊಳ್ಳಬೇಕಷ್ಟೆ, ನೆಮ್ಮದಿಯನ್ನು ಗುರುತಿಸುವುದರಲ್ಲಿ ಸಫಲವಾದರೆ ಸಂತೋಷ, ಅದರೊಟ್ಟಿಗೆ ಕುಣಿಕುಣಿಯುತ್ತ ನಮ್ಮನ್ನು ಅಪ್ಪಿಕೊಳ್ಳುವುದು. ಅಡಗಿರುವ ನೆಮ್ಮದಿ ಕಂಡುಕೊಳ್ಳುವ ಬಗೆ ತಿಳಿದುಕೊಂಡರೆ ಕಷ್ಟಕಾಲದಲ್ಲೂ ಸುಖಿಗಳಾಗಿ ಇರಲಿಕ್ಕೆ ಸಾಧ್ಯ. ನೆಮ್ಮದಿ ಎಂದರೆ ಏನು ಎಂಬ