Menu

ಏರ್‌ ಟೆಲ್ ಸಾಧನೆ: 650 ಮಿಲಿಯನ್ ಗ್ರಾಹಕರ ಮೈಲಿಗಲ್ಲು ದಾಟಿದ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ

ಬೆಂಗಳೂರು: ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಹಾಗೂ ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾದ ಭಾರ್ತಿ ಏರ್‌ ಟೆಲ್, 650 ಮಿಲಿಯನ್ ಗ್ರಾಹಕರ ಗಡಿಯನ್ನು ದಾಟುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಜಿಎಸ್ಎಂಎ ಇಂಟೆಲಿಜೆನ್ಸ್ ವರದಿಯ ಪ್ರಕಾರ, ಭಾರತ ಮತ್ತು ಆಫ್ರಿಕಾದಾದ್ಯಂತ ತನ್ನ ಕಾರ್ಯಾಚರಣೆಯನ್ನು ಹೊಂದಿರುವ ಭಾರ್ತಿ ಏರ್‌ಟೆಲ್, ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.

ಈ ಸಾಧನೆಯ ಬಗ್ಗೆ ಮಾತನಾಡಿದ ಭಾರ್ತಿ ಏರ್‌ಟೆಲ್‌ ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಗೋಪಾಲ್ ವಿಠ್ಠಲ್ ಅವರು, “650 ಮಿಲಿಯನ್ ಗ್ರಾಹಕರ ಮೈಲಿಗಲ್ಲನ್ನು ತಲುಪಿ ಜಾಗತಿಕವಾಗಿ ಎರಡನೇ ಅತಿದೊಡ್ಡ ಆಪರೇಟರ್ ಎನಿಸಿಕೊಂಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಮ್ಮ ಗ್ರಾಹಕರಿಗೆ ಪ್ರತಿದಿನ ಇನ್ನೂ ಉತ್ತಮವಾದ ಸೇವೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಮಾತು ಮುಂದುವರಿಸಿದ ಅರು, “ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡುವುದು ಮಾತ್ರವಲ್ಲದೆ, ಸುರಕ್ಷಿತವಾದ ನೆಟ್‌ ವರ್ಕ್ ಒದಗಿಸಲೆಂದೇ ನಾವು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ, ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿದಂತೆಲ್ಲಾ, ಹೊಸ ಆವಿಷ್ಕಾರ, ವಿಶ್ವಾಸಾರ್ಹತೆ ಮತ್ತು ಅನುಭವದ ಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತೇವೆ. ಇದರಿಂದಾಗಿ ಗ್ರಾಹಕರ ಜೊತೆಗಿನ ಪ್ರತಿಯೊಂದು ಸಂವಹನವು ಅವರ ನಂಬಿಕೆಯನ್ನು ಗಳಿಸಲು ಮತ್ತು ಮೌಲ್ಯಯುತವಾದ ಸೇವೆಯನ್ನು ನೀಡಲು ನಮಗೆ ಸಿಗುವ ಒಂದು ಅವಕಾಶವಾಗಿದೆ” ಎಂದು ಹೇಳಿದರು.

ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಏರ್‌ ಟೆಲ್ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವುದು, ಜಾಗತಿಕ ಮಟ್ಟದಲ್ಲಿ ಅದರ ಸ್ಥಾನಮಾನ ನಿರಂತರವಾಗಿ ಸುಧಾರಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

ಭಾರತ ಮತ್ತು ಆಫ್ರಿಕಾದಾದ್ಯಂತ ಕಂಪನಿಯ ಕಾರ್ಯಾಚರಿಸುತ್ತಿದ್ದು, ಸಂಸ್ಥೆಯು ಕಾರ್ಯನಿರ್ವಹಿಸುವ ಎಲ್ಲಾ ಮಾರುಕಟ್ಟೆಗಳಲ್ಲಿ ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಸೇವೆಗಳು ಮತ್ತು ಮೂಲಸೌಕರ್ಯ ಸೌಲಭ್ಯಗಳ ಬೆಂಬಲವನ್ನು ಹೊಂದಿದೆ.

Related Posts

Leave a Reply

Your email address will not be published. Required fields are marked *