Menu

41 ದಿನ ಐದು ದೇಶ ಸುತ್ತಿ ಸಿಐಡಿಗೆ ಲಾಕ್ ಆದ ಬಿಕ್ಲ ಶಿವ ಕೊಲೆ ಆರೋಪಿ ಜಗ್ಗ

ರೌಡಿಶೀಟರ್‌ ಬಿಕ್ಲ ಶಿವ ಕೊಲೆ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಎಂಬಾತನನ್ನು ದೆಹಲಿಯ ಏರ್ ಪೋರ್ಟ್‌ನಲ್ಲಿ ಸಿಐಡಿ ತಂಡ ಬಂಧಿಸಿದೆ. ಕೊಲೆ ಬಳಿಕ ಆರೋಪಿ ಜಗದೀಶ್
41 ದಿನ ಐದು ದೇಶ ಸುತ್ತಿ ಬಂದ ಬಳಿಕ ಸಿಐಡಿಯಿಂದ ಸೆರೆಯಾಗಿದ್ದಾನೆ.

ಜುಲೈ 15 ರಂದು ಸಂಜೆ ಕೊಲೆಯಾಗಿದ್ದು, ಅದಕ್ಕೂ ಮೊದಲೇ ಆರೋಪಿ ಚೆನ್ನೈಗೆ ಹೋಗಿದ್ದ, ಜುಲೈ 16 ರಂದು ಆರೋಪಿಗಳ ಬಂಧನಕ್ಕೆ ಟೀಂ ರಚನೆಯಾದ ಕೂಡಲೇ ಚೆನ್ನೈ
ಏರ್ ಪೋರ್ಟ್ ನಿಂದ ದುಬೈಗೆ ಪರಾರಿಯಾಗಿ ಅಲ್ಲಿ ಒಂದು ವಾರ ಉಳಿದಿದ್ದ. ದುಬೈನಿಂದ ಇಂಡೋನೇಷ್ಯಾಗೆ ಶಿಫ್ಟ್‌ ಆಗಿದ್ದ. ಇಂಡೋನೇಷ್ಯಾ ದಿಂದ ಕೊಲೊಂಬೋಗೆ ತೆರಳಿ ಸ್ವಲ್ಪ ದಿನವಿದ್ದು, ಬಳಿಕ ಥಾಯ್ಲೆಂಡ್ ಗೆ ಪ್ರಯಾಣಿಸಿದ್ದ.

ಆರೋಪಿ ಥಾಯ್ಲೆಂಡ್ ಹೋಗುವಷ್ಟರಲ್ಲಿ ಬ್ಲೂಕಾರ್ನರ್ ನೋಟಿಸ್ ಜಾರಿಯಾಗಿತ್ತು. ಬ್ಲೂ ಕಾರ್ನರ್ ನೋಟಿಸ್ ಬಗ್ಗೆ ತಿಳಿಸಿ ವಾಸ್ತವ್ಯಕ್ಕೆ ಬಿಡದೆ ಥಾಯ್ಲೆಂಡ್‌ ಏರ್ ಪೋರ್ಟ್ ಅಧಿಕಾರಿಗಳು ವಾಪಸ್‌ ಕಳಿಸಿದ್ದರು, ಮತ್ತೆ ಕೊಲೊಂಬೋಗೆ ಹೋಗಿದ್ದ. ಥಾಯ್ಲೆಂಡ್ ನಿಂದ ಕೊಲಂಬೋ ಏರ್ ಪೋರ್ಟ್ ಗೂ ಇಂಟರ್ ಪೋಲ್ ನಿಂದ ಮಾಹಿತಿ ಹೋಗಿತ್ತು. ಕೊನೆಗೆ ದಾರಿಯಿಲ್ಲದೆ
ದೆಹಲಿ ಪ್ಲೈಟ್ ಹತ್ತಿದ್ದ, ಆರೋಪಿ ದೆಹಲಿಗೆ ಬರುತ್ತಿದ್ದ ಮಾಹಿತಿ ತಿಳಿದು ಐಡಿ ಟೀಂ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಸಿಐಡಿ ಆರೋಪಿಯನ್ನು ಹತ್ತು‌ ದಿನ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದೆ. ವಿಚಾರಣೆ ವೇಳೆ ಬೈರತಿ ಬಸವರಾಜ್ ಗೂ ತನಗೂ ಆತ್ಮೀಯತೆ ಇಲ್ಲ. ಕ್ಷೇತ್ರದ ಶಾಸಕರಾಗಿ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು ಅಷ್ಟೇ, ಕುಂಭಮೇಳಕ್ಕೆ ಹೋಗಿದ್ದಾಗ ಭೇಟಿಯಾಗಿ ಪೋಟೊಸ್ ವಿಡಿಯೋಸ್ ತೆಗೆದುಕೊಳ್ಳಲಾಗಿದೆ. ಕೊಲೆಗೂ ತನಗೂ ಸಂಬಂಧವಿಲ್ಲ ಎಂದು ಆರೋಪಿ ಹೇಳಿದ್ದಾನೆ.

Related Posts

Leave a Reply

Your email address will not be published. Required fields are marked *