ನೆಲಮಂಗಲ ತಾಲೂಕಿನ ಅಲ್ಪಯ್ಯನಪಾಳ್ಯದಲ್ಲಿ ಹಳಿ ದಾಟುವ ವೇಳೆ ತಂದೆ-ಮಗನಿಗೆ ರೈಲು ಡಿಕ್ಕಿಯಾಗಿದ್ದು, ಬಿಹಾರ ಮೂಲದ ಸೌರವ್(8) ಮೃತಪಟ್ಟಿದ್ದಾನೆ.
ಆತನ ತಂದೆ ನಿತಿನ್(40) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಬಸ್ ಪೇಟೆಯಿಂದ ಅಲ್ಪಯ್ಯನಪಾಳ್ಯಕ್ಕೆ ತೆರಳುವಾಗ ಈ ದುರಂತ ನಡೆದಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.