ಪಿರಿಯಾಪಟ್ಟಣ ತಾಲೂಕಿನ ನವಿಲೂರ ಗ್ರಾಮದಲ್ಲಿ ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ತಾಯಿಯನ್ನೇ ಮಗ ಕೊಲೆ ಮಾಡಿದ್ದಾನೆ.
ಸ್ವಾಮಿ ಕೊಲೆ ಆರೋಪಿ, ಜಯಮ್ಮ ಕೊಲೆಯಾದವರು. ಗಂಡನಿಗೆ ಹುಷಾರಿಲ್ಲದ ಕಾರಣ ಚಿಕಿತ್ಸೆಗೆಂದು ಜಯಮ್ಮ 90 ಸಾವಿರ ರೂ. ಕೂಡಿಟ್ಟಿದ್ದರು. ಆ ಹಣ ನೀಡುವಂತೆ ಮಗ ಪೀಡಿಸುತ್ತಿದ್ದ. ತಂದೆ ಆಸ್ಪತ್ರೆಗೆ ತೆರಳಿದ ವೇಳೆ ತಾಯಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟ್ರಿಕ್ಟ್ ಮಾಡ್ತಿದ್ದರು ಎಂಬ ಸಿಟ್ಟಿಗೆ ಮಗನೊಬ್ಬ ತಂದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ. ಮಗ ಬೋಲು ಅರಬ್ ತಂದೆ ಹಾಗೂ ನಿವೃತ್ತ ಯೋಧ ಇಸ್ಲಾಂ ಅರಬ್ ಅವರನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.