Menu

ಮಹಿಳೆಯರಿಗಾಗಿ ಮಾರ್ಚ್ ನಲ್ಲಿ ಉಚಿತ ಫರ್ಟಿಲಿಟಿ ಮೌಲ್ಯಮಾಪನ

pregnent

ಹೈದರಾಬಾದ್: ಫರ್ಟಿಲಿಟಿ ಎನ್ನುವ ಪ್ರಯಾಣವನ್ನು ನೀವು ಒಬ್ಬರೇ ಮುಗಿಸುವ ಪ್ರಯತ್ನ ಮಾಡಬಾರದು. ಸಾಮಾನ್ಯವಾಗಿ, ಮಹಿಳೆಯರು ತಮ್ಮ ದೇಹದ ಬಗ್ಗೆ ಮತ್ತು ಅವರ ಸ್ಥಿರತೆಯ ಬಗ್ಗೆ ಹಲವಾರು ನಿರೀಕ್ಷೆಗಳನ್ನು, ಪ್ರಶ್ನೆಗಳನ್ನು ಹೊಂದಿರುತ್ತಾರೆ.

ಅನೇಕ ಮಹಿಳೆಯರು ತಮಗೆ ಬೇಡದ ಸಲಹೆಗಳನ್ನು ಪಡೆಯುತ್ತಾರೆ, ತಮಗೆ ಅಗತ್ಯವಿರದ ಚಿಕಿತ್ಸೆಗಳನ್ನು ಪಡೆಯುತ್ತಾರೆ. ಸ್ತ್ರೀರೋಗ ತಜ್ಞರೂ ಸಹ ಮಹಿಳೆಯರ ಮೇಲೆಯೇ ಗಮನ ನೀಡುತ್ತಾರೆ -ಅವರ ವರದಿಗಳು, ಅವರ ಜೀವನಶೈಲಿ, ಮತ್ತು ಅವರ ಪ್ರಯತ್ನಗಳು. ಆದರೆ ಸಂತಾನ ಪಡೆಯುವುದು ಕೇವಲ ಮಹಿಳೆಯೊಬ್ಬಳದೇ ಜವಾಬ್ದಾರಿಯಲ್ಲ; ಇದೊಂದು ಹಂಚಿಕೊಳ್ಳುವ ಪ್ರಯಾಣ.

ಇದಕ್ಕಾಗಿ ದಂಪತಿಗಳಿಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಬೇಕು, ಬೆಂಬಲ ನೀಡಬೇಕು ಮತ್ತು ಸಮಗ್ರ ವಿಧಾನವನ್ನು ಅನುಸರಿಸಬೇಕು.
ಓಯಾಸಿಸ್ ಫರ್ಟಿಲಿಟಿ ಪುರುಷರು ಮತ್ತು ಮಹಿಳೆಯರಿಬ್ಬರಿಗಾಗಿ ವಿಜ್ಞಾನ ಆಧಾರಿತ ಸಮಗ್ರ ಆರೈಕೆ ಮತ್ತು ವೈಯಕ್ತಿಕಗೊಳಿಸಿದ ಚಿಕಿತ್ಸಾ ವಿಧಾನಗಳನ್ನು ಒದಗಿಸುವ ಮೂಲಕ ಈ ಫರ್ಟಿಲಿಟಿ ಚಿಕಿತ್ಸೆಯನ್ನು ಮರುವ್ಯಾಖ್ಯಾನಿಸುತ್ತಿದೆ.

ಸುಧಾರಿತ ಡಯಾಗ್ನೋಸ್ಟಿಕ್ಸ್, ಪರಿಣಿತ ಸಮಾಲೋಚನೆಗಳು ಮತ್ತು ಅತ್ಯಾಧುನಿಕ ಅತ್ಯುತ್ತಮ ಚಿಕಿತ್ಸೆಗಳ ಮೂಲಕ ಓಯಾಸಿಸ್ ಫರ್ಟಿಲಿಟಿ ಮಹಿಳೆಯರಿಗೆ ಅಗತ್ಯವಿರುವ ತಿಳಿವಳಿಕೆಯನ್ನು ನೀಡುತ್ತದೆ ಮತ್ತು ದಂಪತಿಗಳು ಒಟ್ಟಿಗೆ ಸಂತಾನ ಪಡೆಯಲು ಸಹ ಪ್ರೋತ್ಸಾಹಿಸುತ್ತದೆ. ಈ ಬದ್ಧತೆಯನ್ನು ಮುಂದುವರೆಸುತ್ತಾ, ಓಯಾಸಿಸ್ ಫರ್ಟಿಲಿಟಿ ಭಾರತಾದ್ಯಂತ ತನ್ನ ಎಲ್ಲಾ ಕೇಂದ್ರಗಳಲ್ಲಿ ಮಾರ್ಚ್ 1 ರಿಂದ 31ರವರೆಗೆ ಉಚಿತ ಫರ್ಟಿಲಿಟಿ ಮೌಲ್ಯಮಾಪನ ಉಪಕ್ರಮವನ್ನು ಆಯೋಜಿಸಿದೆ.

ಇದರಲ್ಲಿ ಉಚಿತ AMH ಪರೀಕ್ಷೆ(ಶಿಫಾರಸ್ಸು ಮಾಡಿದ್ದರೆ) ಮತ್ತು ಎಲ್ಲಾ ಫರ್ಟಿಲಿಟಿ ಮೌಲ್ಯಮಾಪನ ಪರೀಕ್ಷೆಗಳು ಸೇರಿದ್ದು, ಇದು ಸಂತಾನೋತ್ಪತ್ತಿ ಆರೋಗ್ಯಕ್ಕೆ ಪ್ರಮುಖ ವಿಷಯಗಳನ್ನು ಒದಗಿಸುತ್ತದೆ. ಓಯಾಸಿಸ್ ಫರ್ಟಿಲಿಟಿ ಸಂತಾನ ಪಡೆಯುವ ಆರೈಕೆಗೆ ಸಮಗ್ರ ವಿಧಾನವನ್ನು ಬಳಸುತ್ತಿದ್ದು, ದಂಪತಿಗಳಿಬ್ಬರಿಗೂ ಸಮಗ್ರ ಬೆಂಬಲವನ್ನು ಒದಗಿಸುತ್ತದೆ ಮತ್ತು ನಿಮ್ಮ ಪೋಷಕರಾಗುವ ಕನಸಿನ ಪಯಣಕ್ಕೆ ವಿಜ್ಞಾನದ ಬೆಂಬಲವನ್ನು ನೀಡುತ್ತದೆ.

ಭಾರತದಿಂದ ಬರುವ ಪ್ರತಿ 4 ಇನ್ಫರ್ಟಿಲಿಟಿ ದಂಪತಿಗಳಲ್ಲಿ 1 ದಂಪತಿಯು ಇನ್ಫರ್ಟಿಲಿಟಿ ಸಮಸ್ಯೆ ಹೊಂದಿದ್ದು, ಇದೊಂದು ಜಾಗತಿಕ ಸಮಸ್ಯೆಯಾಗಿ ತಲೆದೋರುತ್ತಿದೆ. IVF ಮತ್ತು ಇತರ ಫರ್ಟಿಲಿಟಿ ಚಿಕಿತ್ಸೆಗಳ ಮೂಲಕ ಓಯಾಸಿಸ್ ಫರ್ಟಿಲಿಟಿ 1,00,000ಕ್ಕೂ ಅಧಿಕ ಮಕ್ಕಳನ್ನು ಪಡೆಯಲು ಸಹಾಯ ಮಾಡಿದೆ. 15 ವರ್ಷಗಳ ಪರಿಣಿತಿಯೊಂದಿಗೆ, ಓಯಾಸಿಸ್ ಫರ್ಟಿಲಿಟಿ ಭಾರತದಲ್ಲಿ PCOS ಅಥವಾ PCOD ಇರುವ ರೋಗಿಗಳಿಗೆ ಔಷಧ-ಮುಕ್ತ IVF ಆಯ್ಕೆಯ ಪ್ರಯೋಜನವನ್ನು ನೀಡಲು CAPA ಇನ್ ವಿಟ್ರೋ ಮ್ಯಚುರೇಶನ್ ಚಿಕಿತ್ಸೆಗಳನ್ನು ಸಹ ಪರಿಚಯಿಸಿದೆ.

ಇದು ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್(PGT-A), ಎಂಡೊಮೆಟ್ರಿಯಲ್ ರೆಸೆಪ್ಟಿವಿಟಿ ಅನಾಲಿಸಿಸ್(ERA), ಮೈಕ್ರೋಫ್ಲ್ಯೂಯಿಡಿಕ್ಸ್ ಮತ್ತು ಮೈಕ್ರೋಸರ್ಜಿಕಲ್ ಟೆಸ್ಟಿಕುಲರ್ ಸ್ಪರ್ಮ್ ಎಕ್ಸ್ಟ್ರಾಕ್ಷನ್(ಮೈಕ್ರೋ TESE) ರೀತಿಯ ಸುಧಾರಿತ ಚಿಕಿತ್ಸೆಗಳನ್ನು ನೀಡುತ್ತದೆ, ಇವೆಲ್ಲವೂ ಸಹ ಆರೋಗ್ಯಕರ ಜೈವಿಕ ಮಕ್ಕಳನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಓಯಾಸಿಸ್ ಫರ್ಟಿಲಿಟಿಯ ಸಹ-ಸ್ಥಾಪಕಿ ಮತ್ತು ವೈದ್ಯಕೀಯ ನಿರ್ದೇಶಕಿ ಡಾ. ದುರ್ಗಾ ಜಿ. ರಾವ್ ಅವರು ಮಾತನಾಡಿ, “ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯದ ಕುರಿತಾಗಿ ಮಾಹಿತಿಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಅವರಿಗೆ ತಿಳಿವಳಿಕೆ, ಬೆಂಬಲ ಮತ್ತು ವಿಜ್ಞಾನ ಬೆಂಬಲಿತ ಪರಿಹಾರಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ಇಡೀ ತಿಂಗಳ ನಮ್ಮ ಉಚಿತ ಫರ್ಟಿಲಿಟಿ ಮೌಲ್ಯಮಾಪನ ಉಪಕ್ರಮವು ಈ ಬದ್ಧತೆಗೆ ಸಾಕ್ಷಿಯಾಗಿದೆ, ಇದು ಮಹಿಳೆಯರು ತಮ್ಮ ಪ್ರಯಾಣದ ಪ್ರತಿ ಹಂತದಲ್ಲಿಯೂ ಪರಿಣಿತರ ಮಾರ್ಗದರ್ಶನ, ಮಾನಸಿಕ ಬೆಂಬಲ ಮತ್ತು ವೈಯಕ್ತಿಕಗೊಳಿಸಲಾದ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಮಹಿಳೆಯರು ಮಾತ್ರ ಈ ಪ್ರಯಾಣವನ್ನು ಪೂರ್ಣಗೊಳಿಸಬಾರದು ಎನ್ನುವ ಉದ್ದೇಶದಿಂದ ನಾವು ಫರ್ಟಿಲಿಟಿ ಕನ್ಸಲ್ಟೇಶನ್ ಗಳನ್ನು ದಂಪತಿಗಳಿಬ್ಬರೂ ಪಡೆದುಕೊಳ್ಳಬೇಕೆಂದು ಪ್ರೋತ್ಸಾಹಿಸುತ್ತೇವೆ ಎಂದರು.

Related Posts

Leave a Reply

Your email address will not be published. Required fields are marked *