ಮರಳು ಮಾಫಿಯಾದ ದುಷ್ಕರ್ಮಿಗಳಿಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಬಳಿ ನಡೆದ ಘಟನೆಯಲ್ಲಿ ಮಾನ್ವಿ ಪೊಲೀಸ್ಠಾಣೆಯ ಕಾನ್ಸ್ ಟೇಬಲ್ ಹೆಚ್. ಲಕ್ಷ್ಮಣ ಗಾಯಗೊಂಡಿದ್ದಾರೆ.
ಚಿಕಲಪರ್ವಿ ಬಳಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಜಾಗಕ್ಕೆ ತಪಾಸಣೆ ನಡೆಸಲು ಹೋಂಗಾರ್ಡ್ ಸಿಬ್ಬಂದಿ ಜೊತೆ ತೆರಳಿದ್ದ ಕಾನ್ಸ್ ಟೇಬಲ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಅಕ್ರಮ ಮರಳು ಹೊತ್ತು ಸಾಗುತ್ತಿದ್ದ ವಾಹನವನ್ನು ತಡೆಯಲು ಹೋಗಿದ್ದ ಕಾನ್ಸ್ ಟೇಬಲ್ ಲಕ್ಷ್ಮಣ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಲಕ್ಷ್ಮಣ್ ಅವರನ್ನು ಮಾನ್ವಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.