ಚಾಮರಾಜನಗರದ ಹನೂರು ತಾಲೂಕಿನ ಬಂಡಳ್ಳಿ ಹೊರ ವಲಯದ ತೆಳ್ಳನೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಉರುಳಿ ಬಿದ್ದು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಮೃತಪಟ್ಟವರು. ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥಕ್ಕೆಂದು ಬಸ್ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಗೆ ಹೋಗಿದ್ದವರು ಕಾರ್ಯಕ್ರಮ ಮುಗಿಸಿ ಗ್ರಾಮಕ್ಕೆ ಹಿಂತಿರುಗು ತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಸಮೀಪದ ಗ್ರಾಮಸ್ಥರು ಆಗಮಿಸಿ ಬಸ್ಸಿನಲ್ಲಿದ್ದ ಜನರನ್ನು ಖಾಸಗಿ ವಾಹನಗಳ ಮೂಲಕ ಹನೂರು, ಕಾಮಗೆರೆ, ಕೊಳ್ಳೇಗಾಲ ಆಸ್ಪತ್ರೆಗಳಿಗೆ ಕಳುಹಿಸಿದರು. ಸ್ಥಳಕ್ಕಾಗಮಿಸಿದ ಹನೂರು ಹಾಗೂ ಕೊಳ್ಳೇಗಾಲ ಪೊಲೀಸರು, ಮೃತದೇಹವನ್ನು ಜೆಸಿಬಿ ಮುಖಾಂತರ ಹೊರ ತೆಗೆದಿದ್ದಾರೆ.