Menu

ಮುಡಾಗೆ ವಾಪಸ್‌ ಮಾಡಿರೋ ಸೈಟ್‌ ಪಾರ್ವತಿ ಮತ್ತೆ ಕೇಳಲಿದ್ದಾರೆ: ಶಾಸಕ ಯತೀಂದ್ರ

ಮುಡಾದಿಂದ ಅಕ್ರಮವಾಗಿ ಸೈಟುಗಳನ್ನು ಪಡೆದ ಆರೋಪ ಕೇಳಿ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿಎಂ ಪಾರ್ವತಿ ಸೈಟ್‌ಗಳನ್ನು ವಾಪಸ್‌ ಮಾಡಿದ್ದರು.  ಈ ಸೈಟ್‌ಗಳನ್ನು ಅವರು ಮತ್ತೆ ಕ್ಲೈಮ್ ಮಾಡಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆ ನಡೆಯುತ್ತಿದೆ. ಈ ಸೈಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ವಾಗಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ನಮ್ಮ ಕುಟುಂಬ ಆರೋಪ ಮುಕ್ತವಾಗಲಿದೆ. ಆಗ ಮುಡಾಕ್ಕೆ ಹಿಂದಿರುಗಿಸಲಾಗಿರುವ ಸೈಟ್‌ಗಳನ್ನು ಮತ್ತೆ ನಮ್ಮ ತಾಯಿ (ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿಎಂ ಪಾರ್ವತಿ) ಹಿಂದಕ್ಕೆ ಪಡೆಯಲಿದ್ದಾರೆ ಎಂದು ಯತೀಂದ್ರ ತಿಳಿಸಿದ್ದಾರೆ.

ಕಾನೂನಾತ್ಮಕವಾಗಿ ನಾವು ಈಗಲೂ ಮುಡಾ ಸೈಟುಗಳ ಮೇಲೆ ಅಧಿಕಾರ ಹೊಂದಿದ್ದೇವೆ. ತನಿಖೆಗೆ ಸಹಕರಿಸುವ ಉದ್ದೇಶದಿಂದ ಮುಡಾಕ್ಕೆ ವಾಪಸ್‌ ಮಾಡಿ ದ್ದೇವೆ. ತನಿಖೆ ಮುಗಿದ ನಂತರ ತಾಯಿ ಮರಳಿ ಪಡೆಯಲು ಪ್ರಯತ್ನಿಸುತ್ತಾರೆ’ ಎಂದು ಹೇಳಿದ್ದಾರೆ.

ಇದರಲ್ಲೇನಾದರೂ ಅಕ್ರಮ ನಡೆದಿದ್ದರೆ ಅದು ಅಧಿಕಾರಿಗಳ ತಪ್ಪಿನಿಂದ ಆಗಿರಬಹುದೇನೋ, ಈಗಾಗಲೇ ಮುಡಾ ಶುದ್ಧೀಕರಣಕ್ಕಾಗಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಬಿಡಿಎ ಮಾದರಿಯಲ್ಲಿ ಮುಡಾವನ್ನು ಬದಲಾವಣೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಇನ್ನು ಮುಡಾ ಆಡಳಿತ ಮಂಡಳಿಯಲ್ಲಿ ಯಾವುದೇ ಜನಪ್ರತಿನಿಧಿಗಳು ಇರುವುದಿಲ್ಲ. ಸರ್ಕಾರದಿಂದ ನಾಮನಿರ್ದೇಶನಗೊಂಡವರು ಮಾತ್ರ ಇರುತ್ತಾರೆ. ಮುಡಾ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಪ್ರಕರಣ ಸಂಬಂಧ ಜಾರಿ ನಿರ್ದೇಶನಾ ಲಯ ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

Related Posts

Leave a Reply

Your email address will not be published. Required fields are marked *