Tuesday, February 10, 2026
Menu

ಲೋಕಾಯುಕ್ತ ಹೆಸರಲ್ಲಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾತ ಅರೆಸ್ಟ್‌

ಲೋಕಾಯುಕ್ತ ಡಿವೈಎಸ್​ಪಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸರ್ವಿಸ್‌ನಿಂದ ವಜಾಗೊಂಡ ರಿಸರ್ವ್ ಪೊಲೀಸ್ ಕಾನ್ಸ್​ಟೇಬಲ್ ಮುರುಗಪ್ಪ ಬಂಧಿತ ಆರೋಪಿ.

ಬಂಧಿತ ಮುರುಗೆಪ್ಪ ವಿರುದ್ಧ ರಾಜ್ಯದ ನಾನಾ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಪಿಯು ಲೋಕಾಯುಕ್ತ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್​ಮೇಲ್​ ಮಾಡಿ ಹಣ ಸುಲಿಗೆ ಮಾಡುತ್ತಿದ್ದನು. ಲೋಕಾಯುಕ್ತ ಡಿವೈ ಎಸ್​ಪಿ ಬಸವರಾಜು ಆರ್. ಮಗದಮ್ ನೀಡಿದ ದೂರಿನಂತೆ ವಿಧಾನಸೌಧ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಮುರುಗಪ್ಪ ಅಪರಿಚಿತ ನಂಬರ್​ನಿಂದ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ಲೋಕಾಯುಕ್ತ ಡಿವೈಎಸ್​ಪಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದನು. ನಿಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ಹಾಕಲಾಗುತ್ತಿದೆ ಅಂತ ಬೆದರಿಕೆ ಹಾಕುತ್ತಿ ದ್ದನು. ನಿಮ್ಮ ವಿರುದ್ಧ ಕೇಸ್‌ ಆಗಬಾರದು ಅಂದ್ರೆ ಹಣ ನೀಡಿ ಅಂತ ಡಿಮ್ಯಾಂಡ್ ಮಾಡುತ್ತಿದ್ದ. ಇದೇ ರೀತಿ ಹಲವು ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ‌ ಹಣ ವಸೂಲಿ ಮಾಡಿದ್ದ. ಬ್ಲ್ಯಾಕ್​ಮೇಲ್ ಆರೋಪದ ಮೇಲೆ ಮುರುಗಪ್ಪ ಹಲವು ಬಾರಿ ಜೈಲು ಸೇರಿ ಬಿಡುಗಡೆಯಾದ ಬಳಿಕ ಮತ್ತೆ ಲೋಕಾಯುಕ್ತ ಹೆಸರಿನಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ.

Related Posts

Leave a Reply

Your email address will not be published. Required fields are marked *