Menu

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 3.43 ಲಕ್ಷ ಕೋಟಿ ರೂ. ಹೂಡಿಕೆ

invest karnataka

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿದೆ.

ಮಂಗಳವಾರ ಸಮಾವೇಶದ ಉದ್ಘಾಟನೆ ಬಳಿಕ ನವೀರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿದ ಸಂಸ್ಥೆಗಳ ಮುಖ್ಯಸ್ಥರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಒಪ್ಪಂದ ಪತ್ರ ಸ್ವೀಕರಿಸಿದರು.

ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು ಉಪಸ್ಥಿತರಿದ್ದರು.

ನವೀಕರಿಸಹುದಾದ ಇಂಧನ ಕ್ಷೇತ್ರದಲ್ಲಿ ಒಟ್ಟು 13 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು, ಒಟ್ಟು 3,42,925 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಪ್ರಮುಖ ಹೂಡಿಕೆಗಳು

ಜೆಎಸ್ ಡಬ್ಲ್ಯು ನಿಯೋ ಎನರ್ಜಿ ಲಿಮಿಟೆಡ್- 56 ಸಾವಿರ ಕೋಟಿ ರೂ.

ರಿನ್ಯೂ ಪ್ರೈ. ಲಿ. ಮತ್ತು ಟಾಟಾ ಪವರ್ ರಿನಿವೇಬಲ್ ಎನರ್ಜಿ ಲಿಮಿಟೆಡ್ ಗಳು ತಲಾ 50 ಸಾವಿರ ಕೋಟಿ ರೂ.

ಸೆರೆಂಟಿಕಾ ರಿನಿವೇಬಲ್ ಇಂಡಿಯಾ ಪ್ರೈ. ಲಿ.- 43,975 ಕೋಟಿ ರೂ.

ಮಹೀಂದ್ರ ಸಸ್ಟೆನ್ ಪ್ರೈ.ಲಿ.- 35,000 ಕೋಟಿ ರೂ. ಸೇರಿದಂತೆ ವಿವಿಧ ಕಂಪನಿಗಳು ಒಟ್ಟಾರೆ 3,42,925 ಕೋಟಿ ರೂ. ಮೊತ್ತದ ಹೂಡಿಕೆ

Related Posts

Leave a Reply

Your email address will not be published. Required fields are marked *