ಚಿಕ್ಕಬಳ್ಳಾಪುರ ತಾಲೂಕಿನ ಅಣಕೂರು ಗ್ರಾಮದಲ್ಲಿ ೨೬ ಎಕರೆ ಸರ್ಕಾರಿ ಭೂಮಿಗೆ ಮಹಿಳೆಯ ಹೆಸರಿನಲ್ಲಿ ಅಕ್ರಮವಾಗಿ ಇ-ಖಾತೆ ಸೃಷ್ಟಿಸಿರುವ ಆರೋಪದ ತನಿಖೆಗೆ ಜಿಲ್ಲಾಧಿಕಾರಿ ವಿಶೇಷ ತನಿಖಾ ತಂಡವನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.
ಚಿಕ್ಕಬಳ್ಳಾಪುರ: ತಾಲೂಕಿನ ಅಣಕನೂರು ಗ್ರಾಮದ ಸರ್ವೆ ನಂ.109 ರಲ್ಲಿರುವ 26 ಎಕರೆ ಸರ್ಕಾರಿ ಜಮೀನಿಗೆ ಖಾಸಗಿ ಮಹಿಳೆಯ ಹೆಸರಲ್ಲಿ ಅಕ್ರಮವಾಗಿ ಇ-ಖಾತೆ ಸೃಜಿಸಿದ ಆರೋಪ ಕೇಳಿಬಂದಿದೆ.
ಗ್ರಾಮದ ರ್ವೆ ನಂಬರ್ ೧೦೯ ರ ಜಮೀನಿಗೆ ಅಕ್ರಮವಾಗಿ ಇ-ಖಾತೆ ಮಾಡಲಾಗಿದೆ ಎಂದು ಚಿಕ್ಕಬಳ್ಳಾಪುರ ನಗರಸಬೆ, ಪೌರಾಯುಕ್ತ ಹಾಗೂ ಆಧಿಕಾರಿಗಳ ವಿರುದ್ಧ ಈ ಸಂಬಂಧ ದೂರು ನೀಡಲಾಗಿದೆ. ಜಿಲ್ಲಾಧಿಕಾರಿ ಜಿ. ಪ್ರಭು ವಿಶೇಷ ತನಿಖಾ ತಂಡ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಎಸಿ ಅಶ್ವಿನ್, ಪಿಡಿ ಮಂಜುನಾಥ್ ಹಾಗೂ ನಗರಸಭೆ ಆಯುಕ್ತೆ ಶಿಲ್ಪಾ ದೇಸಾಯಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಸರ್ಕಾರಿ ಜಮೀನಿಗೆ ಖಾಸಗಿ ಮಹಿಳೆ ಭರಣಿ ಹೆಸರಲ್ಲಿ ಇ-ಖಾತೆ ಹೇಗೆ ಮಾಡಲಾಯಿತು, ಯಾವ ದಾಖಲೆಗಳ ಆಧಾರದಲ್ಲಿ ಮಾಡಲಾಗಿದೆ, ಈ ಅಕ್ರಮದಲ್ಲಿ ನಗರಸಭೆ ಅಧಿಕಾರಿಗಳ ಪಾತ್ರವೇನು
ಎಂಬುದರ ಬಗ್ಗೆ ತನಿಖಾ ತಂಡ ಪರಿಶೀಲನೆ ನಡೆಸಲಿದೆ. ಜಿಲ್ಲಾಧಿಕಾರಿ ಆದೇಶದ ಬಳಿಕ 26 ಎಕರೆ ಸರ್ಕಾರಿ ಜಮೀನಿನ ಇ-ಖಾತೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, 24 ಗಂಟೆಯೊಳಗೆ ತನಿಖಾ ವರದಿ ಲಭ್ಯವಾಗುವ ಸಾಧ್ಯತೆ ಇದೆ.


