Thursday, September 03, 2026
Menu

ತಿರುಪತಿ ತಿರುಮಲ ದೇಗುಲ ಅಧಿಕಾರಿ ಮನೆ, ಕಚೇರಿಗಳಿಗೆ ಎಸಿಬಿ ದಾಳಿ

ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳವು ತಿರುಪತಿ ವೆಂಕಟೇಶ್ವರ ದೇಗುವಲ ನಿರ್ವಹಿಸುವ ತಿರುಪತಿ ತಿರುಮಲ ದೇವಸ್ಥಾನದ ಉಪ ಕಾರ್ಯ ನಿರ್ವಾಹಕ ಅಧಿಕಾರಿ ಮೆಂಡು ಲೋಕನಾಥಂ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ.

ಉಪ ಕಾರ್ಯ ನಿರ್ವಾಹಕ ಅಧಿಕಾರಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ಬೆಳಗ್ಗೆ ಆರು ಗಂಟೆಗೆ ಎಸಿಬಿ ಕಾರ್ಯಾಚರಣೆ ಆರಂಭಿಸಿದೆ. ಡಿಎಸ್ಪಿ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಏಳು ಎಸಿಬಿ ತಂಡಗಳು ಪೆದ್ದಕಾಪು ಲೇಔಟ್‌ನಲ್ಲಿರುವ ಲೋಕನಾಥಂ ನಿವಾಸ, ತಿರುಮಲದಲ್ಲಿರುವ ಕಚೇರಿ, ಅತಿಥಿ ಗೃಹ ಮತ್ತು ತಿರುಪತಿ ಮತ್ತು ಚೆಲ್ಲೂರಿನ ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಿವೆ. ತಿರುಪತಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಸ್‌ಟಿವಿ ನಗರ ಶಾಖೆಯಲ್ಲಿರುವ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಅಧಿಖಾರಿಗಳು ಮಾಹಿತಿ ನೀಡಿದ್ದಾರೆ.

ಎಸಿಬಿ ಅಧಿಕಾರಿಗಳು ಆಸ್ತಿ ದಾಖಲೆಗಳು, ಚಿನ್ನ, ಹಣಕಾಸು ದಾಖಲೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸಿ ಆಸ್ತಿಯ ಪ್ರಮಾಣ ಮತ್ತು ಅವುಗಳ ಮೂಲಗಳನ್ನು ನಿರ್ಧರಿಸುತ್ತಾರೆ. ನೆಲ್ಲೂರು ಎಸಿಬಿ ನ್ಯಾಯಾಲಯದ ವಾರಂಟ್‌ಗಳ ಅಡಿಯಲ್ಲಿ ಶೋಧ ನಡೆದಿದೆ. ಅಕ್ರಮ ಆಸ್ತಿಗಳ ನಿಖರವಾದ ಮೌಲ್ಯ ಮತ್ತು ಯಾವುದೇ ಜಪ್ತಿಗಳ ವಿವರಗಳನ್ನು ಪರಿಶೀಲನೆಯ ನಂತರ ಬಹಿರಂಗಪಡಿಸಲಾಗುವುದು ಎಂದು ಎಸಿಬಿ ಮುಖ್ಯಸ್ಥ ಅತುಲ್ ಸಿಂಗ್ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *