ಕ್ಯಾಬಿನೆಟ್ ನಲ್ಲಿ ಯಾರು ಇರಬೇಕು, ಯಾರು ಇರಬಾರದು ಅನ್ನೋದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಈಶ್ವರಪ್ಪ ಪ್ರಾಮಾಣಿಕರಿದ್ರೆ ಅವರಿಗೆ ಕಳೆದ ಬಾರಿ ಯಾಕೆ ಟಿಕೆಟ್ ನೀಡಲಿಲ್ಲ, ಬಿ. ನಾಗೇಂದ್ರ ಮತ್ತು ಈಶ್ವರಪ್ಪ ಪ್ರಕರಣಕ್ಕೆ ವ್ಯತ್ಯಾಸವಿದೆ. ರಾಜೀನಾಮೆ ಕೊಟ್ಟ ಬಳಿಕವೂ ಬಿಜೆಪಿಯವರು ಪಾದಯಾತ್ರೆ ಮಾಡ್ತಿದ್ದಾರೆ. ಬಳ್ಳಾರಿ ಪಾದಯಾತ್ರೆ ಬಗ್ಗೆ ಜೆಡಿಎಸ್ಗೆ ಗೊಂದಲ. ಬಿಡದಿ ಬಗ್ಗೆ ಬಿಜೆಪಿಗೆ ಗೊಂದಲ. ದಿನಗೂಲಿ ಕೊಟ್ಟು ಇಂದಿನ ಪಾದಯಾತ್ರೆಗೆ ಕರೆಯಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಕಲಬುರಗಿ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆಯ ಬದಲು ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ಬಿಜೆಪಿಯವರು ಹೋರಾಟ ಮಾಡಲಿ ಎಂದು ಹೇಳಿದರು. ಬಿಜೆಪಿಯವರು ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಇವರು ಜನರಿಗೆ ಏನ್ ಹೇಳ್ತಾರೋ ಗೊತ್ತಿಲ್ಲ. ಸಿಐಡಿ ಚಾರ್ಜ್ ಶೀಟ್ ನಲ್ಲಿ ಹೆಸರಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚಿಸಲು ನಾವು ಸಿದ್ಧರಿದ್ದೇವೆ. ಅದಕ್ಕೆ ಉತ್ತರ ಕೂಡ ಕೊಡುತ್ತೇವೆ ಎಂದು ಹೇಳಿದರು.
ಸದಸನದ ಅಮೂಲ್ಯವಾದ ಸಮಯ ಹಾಳು ಮಾಡಬಾರದು ಎಂದು ನಾಗೇಂದ್ರ ಸುದ್ದಿಗೋಷ್ಟಿ ಕರೆದು ದಾಖಲೆಗಳನ್ನ ಬಿಡುಗಡೆ ಮಾಡಿದರು. ಸದನ ನಡೆಯಬೇಕಾದರೆ ಅವರಿಗೆ ಸುವರ್ಣ ಅವಕಾಶವಿತ್ತು. ಮಾಧ್ಯಮ ಮುಂದೆ ಬಂದು ನಾಗೇಂದ್ರ ನೀಡಿದ ದಾಖಲೆಗಳಂತೆ ಹಣ ಯಾವ ಬ್ಯಾಂಕ್ನಿಂದ ಹೋಗಿತ್ತೋ ಅದೇ ಅಕೌಂಟ್ಗೆ ವಾಪಾಸ್ ಬಂದಿದೆ. ಯಾವುದೇ ಪುರಾವೆ ಕೊಡದೆ ಪಾದಯಾತ್ರೆ ಮಾಡ್ತಿದ್ದಾರೆ.,ಪಾದಯಾತ್ರೆ ಮೂಲಕ ಜನರ ಬಳಿಯಾದರೂ ದಾಖಲೆಗಳನ ನು ಇಡಲಿ. ಹಿಟ್ ಅಂಡ್ ರನ್ ಮಾಡಬೇಡಿ ಬಿಜೆಪಿಗರೇ, ನೂರು ಸಲ ಸುಳ್ಳು ಹೇಳಿದರೂ ಸತ್ಯವಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಎನ್ಡಿಆರ್ಎಫ್ ನಿಯಮ ಪ್ರಕಾರ ಬರಗಾಲ ಘೋಷಣೆ ಮಾಡದ ಹಾಗೇ ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಬರ ಪರಿಹಾರ ವಿಚಾರದಲ್ಲೂ ಕೇಂದ್ರ ಅನ್ಯಾಯ ಮಾಡಿತ್ತು. ನಾವು ಸುಪ್ರೀಂ ಕೋರ್ಟ್ ಮೊರೆಹೋಗಿ ನ್ಯಾಯ ಪಡೆದುಕೊಂಡೆವು. ಕಂದಾಯ, ಕೃಷಿ ಸಚಿವರು , ಸಿಎಂ ಕೂಡ ಕೇಂದ್ರ ಸಚಿವರನ್ನು ಖುದ್ದು ಭೇಟಿ ಮಾಡಿದ್ದಾರೆ. ಇತಿಹಾಸದಲ್ಲಿ ಅತೀ ಹೆಚ್ಚು ಬೆಳೆ ವಿಮೆ ಪರಿಹಾರ ಕಲಬುರಗಿ ಜಿಲ್ಲೆಗೆ ಬಂದಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಎಫ್ಐಆರ್ ಆಗಲ್ಲ. ಅನ್ಯಾಯ, ಅಕ್ರಮ ಪ್ರಶ್ನಿಸಿದವರ ವಿರುದ್ಧ ಎಫ್ಐಆ ದಾಖಲಾಗುತ್ತದೆ. ಇದು ಕೇಂದ್ರ ಸರ್ಕಾರ ನಡೆದುಕೊಳ್ಳುವ ರೀತಿಯಾಗಿದೆ ಎಂದರು.
ಕೆಪಿಎಸ್ ಸಿಯಲ್ಲಿ ಪ್ರಿಯಾಂಕ್ ವಿಕೆಟ್ ಬೀಳುತ್ತೆ ಎಂಬ ಅಶೋಕ ಹೇಳಿಕೆ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ , ಬಿಜೆಪಿ ಬೌಲರ್ ಗಳು ಹೇಗಿದ್ದಾರೆ. ನಮಗೆ ಅವರು ನೋಬಾಲ್, ಪುಲ್ ಟಾಸ್ ಹಾಕ್ತಿದ್ದಾರೆ. ಇಲ್ಲಿ ಅಂಪೈರ್ ಯಾರೇ ಇದ್ರೂ ವಿಕೆಟ್ ಬೀಳೋದು ಅವರದ್ದೇ. ಬಿಜೆಪಿ-ಜೆಡಿಎಸ್ ನವರಿಗೆ ಸಾಮಾನ್ಯ ಜ್ಞಾನವಿಲ್ಲ. ಇವಾಗ ಮಧ್ಯವರ್ತಿ ಸಿಕ್ಕಿರೋದು ಯಾರೂ, ಅವರ ಹೆಗಲ ಮೇಲೆ, ನಿಮ್ಮ ಹೆಗಲ ಮೇಲೆ ಮೋದಿಯವರ ಹೆಗಲ ಮೇಲೆ ಬಿಜೆಪಿ ಶಲ್ಯ ಇದೆ. ಬಿಜೆಪಿ ನಾಯಕರೇ ಕೇಕ್ ಕಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ರೆ ಸದನದಲ್ಲಿ ಯಾಕೆ ಚರ್ಚೆ ಯಾಕೆ ಮಾಡಲಿಲ್ಲ, ಶಿವಶಂಕರಪ್ಪ ಸಾಹುಕಾರ್ ಹೆಸರು ಯಾಕೆ ಹೇಳ್ತಿಲ್ಲ, ಸಾಹುಕಾರ್ ಅವರನ್ನು ಅಧ್ಯಕ್ಷ ಮಾಡಿದ್ದು ಯಾರು, ಕುಮಾರಸ್ವಾಮಿಯವರಿಗೆ ಮಾಡೋಕೆ ಕೆಲಸ ಇಲ್ಲ. ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಎಂದರು.
ಝಿರೋ ಟ್ರಾಫಿಕ್ ನಾವು ಕೇಳಿಲ್ಲ. ಬಿ.ಸಿ ಪಾಟೀಲ್ ಅವರಿಗೆ ಏನು ತೊಂದರೆಯಾಗಿದೆ ಎನ್ನೋದು ಗೊತ್ತಿಲ್ಲ. ಅವರು ಹೋಂ ಮಿನಿಸ್ಟರ್ ಇದ್ರೆ ಏನ್ ಮಾಡ್ತಿದ್ದರು. ಸುಮ್ನೆ ಯಾವುದ್ಯಾವುದೋ ವಿಚಾರ ಮಾತನಾಡಿದ್ರೆ ಏನ್ ಮಾಡೋದು ಎಂದು ಖರ್ಗೆ ಹೇಳಿದರು.


