Menu

ಕೊಡಗಿನಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ

ಕೊಡಗು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೃಷ್ಣರಾಜಸಾಗರ ಅಣೆಕಟ್ಟೆಗೆ ಒಳಹರಿವು ಪ್ರಮಾಣ ಗಣನೀಯ ಏರಿಕೆಯಾಗಿದೆ.

ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು, ನಿರಂತರ ಮಳೆಯಿಂದಾಗಿ 17,427 ಕ್ಯೂಸೆಕ್‌ಗೆ ಹೆಚ್ಚಳವಾಗಿದೆ. ಒಳಹರಿವು ಹೆಚ್ಚಾದ್ದರಿಂದ ಜಲಾಶಯದಲ್ಲಿ ನೀರಿನ ಮಟ್ಟವು ಏರಿಕೆಯಾಗುತ್ತಿದೆ.

ಕೆಆರ್‌ಎಸ್‌ ಗರಿಷ್ಠ ಮಟ್ಟ: 124.80 ಅಡಿಯಿದ್ದು, ಇಂದಿನ ನೀರಿನ ಮಟ್ಟ 109.75 ಅಡಿ ದಾಖಲಾಗಿದೆ. ಒಳಹರಿವು ಒಳಹರಿವು 17,427 ಕ್ಯೂಸೆಕ್, ಹೊರಹರಿವು 4,514 ಕ್ಯೂಸೆಕ್,  ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದೆ.

ಇಂದಿನ ಒಟ್ಟು ನೀರು ಸಂಗ್ರಹ 31.471 ಟಿಎಂಸಿ, ಅಣೆಕಟ್ಟೆಯಿಂದ ನದಿಗೆ ಹಾಗೂ ನಾಲೆಗಳಿಗೆ ಒಟ್ಟು 4,514 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ.

Related Posts

Leave a Reply

Your email address will not be published. Required fields are marked *