Menu

ಮದುವೆ ದೀಪಾಲಂಕಾರ: ನವ ವರ, ತಂದೆ ವಿದ್ಯುತ್‌ ಆಘಾತಕ್ಕೆ ಬಲಿ

ಮದುವೆ ಮುಗಿದು ವಾರವಷ್ಟೇ ಕಳೆದಿರುವಾಗ ದೀಪಾಲಂಕಾರ ಮಾಡಿದ್ದ ಸಾಮಗ್ರಿಯಿಂದ ವಿದ್ಯುತ್‌ ಸ್ಪರ್ಶಗೊಂಡು ನವ ವರ ಮತ್ತು ಆತನ ತಂದೆ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರದ ಭೀಮವರಂನಲ್ಲಿ ಮದುವೆ ಸಂಭ್ರಮಕ್ಕಾಗಿ ಮನೆಗೆ ಹಾಕಿದ್ದ ವಿದ್ಯುತ್ ದೀಪಾಲಂಕಾರ ತೆಗೆಯುವಾಗ ಮೊದಲು ತಂದೆಗೆ ವಿದ್ಯುತ್ ಶಾಕ್ ಹೊಡೆದಿದೆ, ತಂದೆಯನ್ನು ರಕ್ಷಿಸಲೆಂದು ಹೋಗಿದ್ದ  ವರನೂ ಮೃತಪಟ್ಟಿದ್ದಾನೆ.
ನವ ವರ ಶರತ್ ಕುಮಾರ್, ತಂದೆ ಸಾಂಬಯ್ಯ ಮೃತಪಟ್ಟವರು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಾಂಬಯ್ಯ-ರಮಾದೇವಿ ದಂಪತಿಗೆ ಮೂವರು ಮಕ್ಕಳಿದ್ದು, ಕಿರಿಯ ಮಗ ಶರತ್ ಕುಮಾರ್ ಹೈದರಾಬಾದ್‌ನಲ್ಲಿ ಸಿಎ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 24 ರಂದು ಸಂಬಂಧಿಯ ಮಗಳೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು.

ಮಂಗಳವಾರ ರಾತ್ರಿ ಮಳೆ ಬಂದಾಗ ಸಾಂಬಯ್ಯ ಮನೆ ಮೇಲೆ ಹೋಗಿದ್ದಾಗ ಅಕಸ್ಮಾತ್ ಆಗಿ ಲೈಟಿಂಗ್ ಟಚ್ ಮಾಡಿದ್ದಾರೆ. ಆಗ ವಿದ್ಯುತ್‌ ಶಾಕ್ ಹೊಡೆದು ಅಲ್ಲೇ ಕುಸಿದು ಬಿದ್ದಿದ್ದಾರೆ.  ತಂದೆಯನ್ನು ರಕ್ಷಿಸಲೆಂದು ಬಂದ ಮಗ ಶರತ್‌ ಕುಮಾರ್‌ಗೂ ವಿದ್ಯುತ್‌ ಸ್ಪರ್ಶಗೊಂಡು ಅಸು ನೀಗಿದ್ದಾರೆ.

Related Posts

Leave a Reply

Your email address will not be published. Required fields are marked *