ಕಡೂರು ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಇಪ್ಪತ್ತು ವರ್ಷದ ಯುವಕ ಪ್ರಕರಣವೊಂದರಲ್ಲಿ ಪೊಲೀಸ್ ವಿಚಾರಣೆ ಎದುರಿಸಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಂದನ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಕುಡ್ಲೂರು ಗ್ರಾಮದ ಯುವತಿಯೊಬ್ಬಳು ಪ್ರಿಯಕರನೊಂದಿಗೆ ತೆರಳಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಬೀರೂರು ಪೊಲೀಸರು, ಆಕೆಯ ಮೊಬೈಲ್‌ನಲ್ಲಿ ಚಂದನ್‌ನ ಸಂಪರ್ಕ ವಿವರಗಳು ಮತ್ತು ದೂರವಾಣಿ ಸಂಖ್ಯೆ ಕಂಡು ವಿಚಾರಣೆಗೆ ಕರೆಸಿ ಹಲವು ಬಾರಿ ಮಾತುಕತೆ ನಡೆಸಿದ್ದರು. ಸೋಮವಾರವೂ ವಿಚಾರಣೆಗೆ ಹಾಜರಾಗಿದ್ದ ಚಂದನ್‌ನನ್ನು ಬಳಿಕ ಪೊಲೀಸರು ಮನೆಗೆ ಕಳುಹಿಸಿದ್ದರು. ಸಂಜೆ ವೇಳೆಗೆ ಮನೆಗೆ ತೆರಳಿದ ಆತ ಆತ್ಮಹತ್ಯೆ ಮಾಇಕೊಂಡಿದ್ದಾನೆ.
ಯುವತಿ ಮನೆ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಚಂದನ್ ಕಾರಣ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದರು, ಇದು ಆತನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಲಾಗಿದೆ. ಆ ಯುವತಿ ಅಪ್ಪನಿಗೆ ನನ್ನನ್ನು ಹುಡುಕಬೇಡಿ. ಚಂದನ್ ನನಗೆ ಅಣ್ಣನ ರೀತಿ ಅಂತ ಲೆಟರ್ ಬರೆದಿಟ್ಟು ಹೋಗಿದ್ದಳು. ಆದರೂ ಪೊಲೀಸರು ವಿಚಾರಣೆ ನಡೆಸಿದರೆಂದು ಆಕೆಯ ಅಪ್ಪ ಆಕೆ ಹೋಗಲು ನೀನೇ ಕಾರಣ, ಎಲ್ಲಿದ್ದಾಳೆ ಅಂತ ಗೊತ್ತು ಹೇಳು ಎಂದು ಗಲಾಟೆ ಮಾಡಿದ್ದರು.
ಆತ್ಮಹತ್ಯೆಗೂ ಮೊದಲು ಯುವಕ , ಆ ಹುಡುಗಿ ಎಲ್ಲಿದ್ದಾಳೆ ಗೊತ್ತಿಲ್ಲ. ಆಕೆ ಹೋಗಿರೋದಕ್ಕೆ ಕಾರಣ ನಾನಲ್ಲ. ಊರಿನ ಜನ ನನ್ನನ್ನು ಒಂದು ರೀತಿ ನೋಡ್ತಿದ್ದಾರೆ. ಆ ಹುಡುಗಿ ಅಪ್ಪ ನನಗೆ ತುಂಬಾ ಬೈದ್ರು, ನನಗೆ ಬದುಕಲು ಇಷ್ಟ ಇಲ್ಲ. ಕ್ಷಮಿಸಿ ಎಂದು ತಾಯಿಗೆ ಮೆಸೇಜ್ ಮಾಡಿ ಮಾಡಿದ್ದ.
ದಲಿತ ಸಂಘಟನೆಗಳು ಹುಡುಗಿ ಅಪ್ಪನ ಕಿರುಕುಳದಿಂದಲೇ ಆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಅವನ ಸಾವಿಗೆ ನ್ಯಾಯ ಸಿಗಬೇಕು. ಯುವತಿ ಅಪ್ಪನ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸ್ ಠಾಣೆ ಬಳಿ ಆಗ್ರಹಿಸಿದ್ದಾರೆ.
ಪೊಲೀಸ್ ವಿಚಾರಣೆಯ ಒತ್ತಡವೇ ಅಥವಾ ಬೇರೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಸುಸೈಡ್
ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಇ ವೆಂಕಟೇಶ್ ಮೃತಪಟ್ಟ ವಿದ್ಯಾರ್ಥಿ. ತುಮಕೂರಿನ ಎಸ್‌ಐಟಿ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಉಪ್ಪಾರಹಳ್ಳಿಯಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ.
ನನ್ನದು ಒಂದೇ ಒಂದು ಆಸೆ, ನೀವು ಐದೂ ಜನ ಒಟ್ಟಿಗೆ ಇರಬೇಕು ಅನ್ನೋದು, ಒಬ್ಬರನೊಬ್ಬರು ಬಿಟ್ಟು ಕೊಡದೇ, ಬೇರೆಯಾಗದೇ ಹೀಗೆ ಇರಬೇಕೆಂದು ನನ್ನ ಆಸೆ. ಇಂತಿ ನಿಮ್ಮ ಪ್ರೀತಿಯ ಮಗ ಎಂದು ವೆಂಕಟೇಶ್ ಡೆತ್‌ನೋಅನಲ್ಲಿ ಬರೆದಿದ್ದಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.


