ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಮೆಡಿಕಲ್‌ಗೆ ಬಂದ ಸಾಧು ವೇಷಧಾರಿ ಮಾಲೀಕನ ಬೆರಳಲಲಿದ್ದ ಚಿನ್ನದ ಉಂಗುರ, ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ವಿಷ್ಣು ದತ್ತ ಎಂಬವರ ಶ್ರೀ ಸಾಯಿ ಮೆಡಿಕಲ್‌ಗೆ ಬಂದ ಸಾಧು ವೇಷಧಾರಿ ಕುಡಿಯಲು ನೀರು ಬರುತ್ತಾನೆ, ವಿಷ್ಣು ದತ್ತ ಸಾಧುಗೆ ಕುಡಿಯಲು ಫ್ರಿಡ್ಕ್‌ನಲ್ಲಿದ್ದ ತಣ್ಣೀರು ಕೊಡುತ್ತಾರೆ. ನೀರು ಕುಡಿದ ಬಳಿಕ ಸಾಧು ಆಶೀರ್ವಾದವಾಗಿ ಎರಡು ಹೂಗಳನ್ನು ನೀಡಿದ್ದಾನೆ. ಹೂವಿನ ವಾಸನೆಯಿಂದ ವಿಷ್ಣು ದತ್ತ ಅವರಿಗೆ ಮಂಪರು ಕವಿದಂತಾಗಿತ್ತು. ಸಾಧು ವೇಷಧಾರಿ ಕಳ್ಳ ಅಂಗಡಿಯಲ್ಲಿದ್ದ 10,500 ರೂಪಾಯಿ, ವಿಷ್ಣು ದತ್ತ ಕೈಯಲ್ಲಿದ್ದ 5 ಗ್ರಾಂ ಚಿನ್ನದುಂಗರ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಸಾಧು ಹೋದ ಕೆಲವು ನಿಮಿಷ ನಂತರ ವಿಷ್ಣು ದತ್ತ ಎಚ್ಚರಗೊಂದ್ದು, ಕೈಯಲ್ಲಿದ್ದ ಗೋಲ್ಡ್ ರಿಂಗ್ ಮತ್ತು ಅಂಗಡಿಯಲ್ಲಿದ್ದ ಹಣ ಇಲ್ಲದಿರುವುದನ್ನು ಗಮನಿಸಿ ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೆಡಿಕಲ್ ಶಾಪ್ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸುತ್ತಿದ್ದಾರೆ.
ಸಾಧು ವೇಷಧಾರಿಯಾಗಿ ಸಿಂಧನೂರು ಪಟ್ಟಣದಲ್ಲಿ ಮೂವರು ಸುತ್ತಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಸಾಧುಗಳ ಫೋಟೋ ಮತ್ತು ವೀಡಿಯೊ ವೈರಲ್ ಆಗುತ್ತಿವೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.


