ಯಡ್ರಾಮಿ ಪಟ್ಟಣದ 1 ಮತ್ತು 2ನೇ ವಾರ್ಡಿನ ಮನೆಗಳಿಗೆ ಕಲುಷಿತ ಕಳೆದ ಕೆಲವು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿನಲ್ಲಿ ಗಲೀಜು ಹಾಗೂ ದುರ್ವಾಸನೆ ನೀರು ಬರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲದಿದ್ದರೂ, ಅನಿವಾರ್ಯ ವಾಗಿ ಅದೇ ನೀರನ್ನು ಸೇವಿಸಬೇಕಾದ ಪರಿಸ್ಥಿತಿ ನಿವಾಸಿಗಳಿಗೆ ಎದುರಾಗಿದೆ. ಇದರ ಪರಿಣಾಮವಾಗಿ ವಾರ್ಡಿನ ಅನೇಕ ನಿವಾಸಿಗಳು, ಮಕ್ಕಳು ಮತ್ತು ವೃದ್ಧರು ಇದೆ ರೀತಿ ನೀರು ಸರಬರಾಜು ಆದರೆ ವಾಂತಿ, ಭೇದಿ ಹಾಗೂ ಜ್ವರದಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಮುನ್ಸೂಚನೆಗೆ ಎದ್ದು ಕಾಣುತ್ತಿದೆ.
ಪಟ್ಟಣ ಪಂಚಾಯಿತಿಯ ಈ ನಿರ್ಲಕ್ಷ್ಯ ಜನಸಾಮಾನ್ಯರ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಮುಂಜಾಗೃತ ಕ್ರಮವಾಗಿ ಪೈಪ್‌ಲೈನ್ ಸೋರಿಕೆಯಾಗಿದೆಯೇ ಅಥವಾ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲವೇ ಎಂಬ ಕನಿಷ್ಠ ತಪಾಸಣೆಯು ಅಧಿಕಾರಿಗಳು ನಡೆಸುತ್ತಿಲ್ಲ. ಜನರ ಜೀವದ ಜೊತೆ ಚೆಲ್ಲಾಟವಾಡುವುದು ನಿಲ್ಲಿಸಿ ಎಂದು ವಾರ್ಡಿನ ಪ್ರಮುಖರು ಆಗ್ರಹಿಸಿದ್ದಾರೆ.
ಸಂಜೆಯೊಳಗೆ ಪರ್ಯಾಯ ನೀರಿನ ವ್ಯವಸ್ಥೆ ಅಥವಾ ಪೈಪ್‌ಲೈನ್ ದುರಸ್ತಿ ಮಾಡುಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ ತೋರಿದರೆ ನಿವಾಸಿಗಳೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳು ಹರದಾಡುತ್ತಿವೆ.


