Menu

ಕುಕ್‌ನ ಕೊಲೆಗೈದು ಶವ ಕಾರಲ್ಲಿಟ್ಟುಕೊಂಡು ಸುತ್ತಾಡಿದ ಕೆಫೆ ಮಾಲೀಕ ಅರೆಸ್ಟ್‌

ಶಿವಮೊಗ್ಗದ ಸಾಗರ ಪಟ್ಟಣದ ಕೆಫೆಯೊಂದರ ಮಾಲೀಕ ಇಮ್ರಾನ್‌ ಎಂಬಾತ ಕುಕ್‌ ಟಿಂಕೂ ಶರ್ಮಾ ಎಂಬ ಯುವಕನನ್ನು ಸ್ನೂಕರ್ ಸ್ಟಿಕ್‌ನಿಂದ ಕೊಲೆ ಮಾಡಿ ಶವವನ್ನುಕಾರಿನಲ್ಲಿ ಇಟ್ಟುಕೊಂಡು ಇಡೀ ದಿನ ಊರು ಸುತ್ತಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಹಣಕಾಸಿನ ಸಣ್ಣ ವಿವಾದದಿಂದ ಆರಂಭವಾದ ಜಗಳ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯ ನಂತರ ಇಮ್ರಾನ್, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ತನ್ನ ಹೊಂಡಾ ಸಿಟಿ ಕಾರಿನಲ್ಲಿ ಇರಿಸಿಕೊಂಡಿದ್ದ. ನಿರ್ಜನ ಪ್ರದೇಶಗಳು, ರೈಲ್ವೆ ಹಳಿ ಬಳಿ ಶವ ಎಸೆಯಲು ಯತ್ನಿಸಿ ವಿಫಲನಾಗಿ ಇಡೀ ದಿನ ಕಾರಿನಲ್ಲಿ ಶವ ಇಟ್ಟುಕೊಂಡು ವಿವಿಧ ಭಾಗಗಳಲ್ಲಿ ಸುತ್ತಾಡಿದ್ದಾನೆ. ಕೊನೆಗೆ ನೆಹರು ನಗರದಲ್ಲಿರುವ ತನ್ನ ಮನೆ ಮುಂದೆ ಕಾರು ನಿಲ್ಲಿಸಿದ್ದಾನೆ.

ಕಾರಿನಲ್ಲಿ ಶವ ಇರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಆರೋಪಿ ಇಮ್ರಾನ್‌ನನ್ನು ವಶಕ್ಕೆ ಪಡೆದಿದ್ದಾರೆ.  ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೆನಕ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣಕಾಸಿನ ವಿವಾದದಿಂದ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಟಿಂಕೂ ಶರ್ಮಾ ಆರು ತಿಂಗಳ ಹಿಂದೆ ಕೆಲಸಕ್ಕಾಗಿ ಬಿಹಾರದಿಂದ ಬಂದಿದ್ದ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಬಿ. ನಿಖಿಲ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *