ತುಮಕೂರು ನಗರದ ಬನಶಂಕರಿಯಲ್ಲಿ ಅತ್ತಿಗೆ ಜತೆ ಸಂಬಂಧ ಹೊಂದಿದ್ದ ತಮ್ಮನನ್ನು ಅಣ್ಣನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ತನ್ನ ಪತ್ನಿಯೊಂದಿಗೆ ತಮ್ಮ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಸೋದರರ ಮಧ್ಯೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಅಣ್ಣ ಮತ್ತು ತಂದೆಯನ್ನು ಬಂಧಿಸಿದ್ದಾರೆ.
29 ವರ್ಷದ ಸ್ಟಾಲಿನ್ ಕೊಲೆಯಾದವ ವ್ಯಕ್ತಿ. ಆರೋಪಿಗಳಾದ ಸ್ಟಾಲಿನ್ ಹಿರಿಯ ಸೋದರ ನವೀನ್ ಮತ್ತು ತಂದೆ ಜಾನ್ ಪಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಸ್ಟಾಲಿನ್‌ಗೆ ಮದುವೆ ನಿಗದಿಯಾಗಿತ್ತು.
ಸ್ಟಾಲಿನ್ ತನ್ನ ಹಿರಿಯ ಸೋದರ ನವೀನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮದುವೆಯಾಗುತ್ತಿರುವ ಯುವತಿ ಗಂಭೀರ ಆರೋಪ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಮಾರ್ಚ್ 22ರಂದು ನವೀನ್ ಮತ್ತು ಸ್ಟಾಲಿನ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಸ್ಟಾಲಿನ್ ಹೊಟ್ಟೆಗೆ ನವೀನ್ ಚಾಕುನಿಂದ ಚುಚ್ಚಿದ್ದಾನೆ.


