ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗುಂಡಾಲ್ ಅಣೆಕಟ್ಟು ಸಮೀಪ ಹುಲಿಯ ಮೃತದದೇಹ ಪತ್ತೆಯಾಗಿದೆ. ಮಲೆ ಮಹದೇಶ್ವರ ಸಂರಕ್ಷಿತ ಅರಣ್ಯದಲ್ಲಿ ಇತ್ತೀಚೆಗೆ ಒಟ್ಟು ಐದು ಹುಲಿಗಳು ಮೃತಪಟ್ಟಿದ್ದವು.
ಈಗ ಹುಲಿಯ ಸಾವಿನ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದು ಹುಲಿಯ ಸಹಜ ಸಾವೇ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಸಂಭವಿಸಿದ ಸಾವೇ ಎಂಬ ಬಗ್ಗೆ ಸಮಗ್ರ ತಪಾಸಣೆ ನಡೆಯಲಿದೆ.
ಬಿಆರ್‌ಟಿ ಹುಲಿ ಅಭಯಾರಣ್ಯದ ಕೊಳ್ಳೇಗಾಲ ಶ್ರೇಣಿಯಲ್ಲಿ ಬರುವ ಗುಂಡಾಲ್ ಅಣೆಕಟ್ಟು ಬಳಿ 2024ರ ನ್‌ನಲ್ಲಿ ಹುಲಿಯೊಂದು ಮಮೃತಪಟ್ಟಿತ್ತು. ಆ ಹುಲಿಯ ಭುಜಕ್ಕೆ ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಹುಲಿಗಳ ಕಾದಾಟದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಕೊಳ್ಳೇಗಾಲ ಬಳಿಯ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ 2025 ಜೂನ್ ತಿಂಗಳಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿ ದ್ದವು.
ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ವಿಷಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ ಎಂದು ಹೇಳಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಅಧಿಕಾರಿಗಳು ಬಂಧಿಸಿದ್ದರು.


