ಉತ್ತರಾಖಂಡ್‌ನ ಹನ್ನೆರಡು ಜ್ಯೋತಿರ್ ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ ಧಾಮ ಯಾತ್ರಿಗಳ ದರ್ಶನಕ್ಕೆ ಏಪ್ರಿಲ್ 22ರಂದು ತೆರೆಯಲಿದೆ. ಅಂದು ಬೆಲಗ್ಗೆ ವೃಷಭ ಲಗ್ನದಲ್ಲಿ ಎಂಟು ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ.
ಟಿ ಗಂಗಾಧರ ಲಿಂಗ್ ಅವರನ್ನು ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ನೇಮಿಸಲಾಗಿದ್ದು, ದೇವಾಲಯದಲ್ಲಿ ಪವಿತ್ರ ಆಚರಣೆಗಳು ಮತ್ತು ಸಮಾರಂಭಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದಾಗಿರುತ್ತದೆ.
ಬದರಿನಾಥ ದೇವಾಲಯದಲ್ಲಿ ಏಪ್ರಿಲ್ 23 ಬೆಳಿಗ್ಗೆ 6:15ಕ್ಕೆ ಬ್ರಹ್ಮ ಮುಹೂರ್ತದಲ್ಲಿ ಯಾತ್ರಿಗಳ ದರ್ಶನಕ್ಕಾಗಿ ದ್ವಾರಗಳು ತೆರೆಯಲಿವೆ. ವಾರ್ಷಿಕ ಗದುಘರ್ ಯಾತ್ರೆ ಏಪ್ರಿಲ್ 7ರಿಂದ ಆರಂಭ ಗೊಳ್ಳಲಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು ಏಪ್ರಿಲ್ 19 ತೆರೆಯಲಿವೆ.


