ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
80-90ರ ದಶಕದ ಹಳ್ಳಿಯ ಕಥೆಯನ್ನು ಆಧರಿಸಿದ ಚಿತ್ರ ‘ಲ್ಯಾಂಡ್ಲಾರ್ಡ್’ ಆಗಿದ್ದು, ಕೋಡಿಹಳ್ಳಿ ರಾಚಯ್ಯನಾಗಿ ದುನಿಯಾ ವಿಜಯ್ ಅಭಿನಯಿಸಿದ್ದಾರೆ. ಭೂಮಿಗಾಗಿ ಹೋರಾಟದ ಕಥೆಯ ನಿರೂಪಣೆಯನ್ನು ಒಳಗೊಂಡಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರವು ಬಡವರ ಹಕ್ಕುಗಳಿಗಾಗಿ ಹೋರಾಟದ ಸಂದೇಶ ನೀಡುತ್ತದೆ.
ರಚಿತಾ ರಾಮ್ , ರಾಜ್ ಬಿ ಶೆಟ್ಟಿ, ಹಿರಿಯ ನಟಿ ಉಮಾಶ್ರೀ ಚಿತ್ರದಲ್ಲಿ ನಟಿಸಿದ್ದು, ಹಳ್ಳಿಯಲ್ಲಿ ಭೂ ಮಾಲೀಕರು ಮತ್ತು ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟದ ಚಿತ್ರಣ ವಿದೆ. ವೇ ಚಿತ್ರದ ಒಟ್ಟಾರೆ . ಸರ್ವರಿಗೂ ಸಮಾನತೆ ಇರಬೇಕು ಎಂಬ ಸಂವಿಧಾನದ ಮೂಲ ಆಶಯ ಎತ್ತಿಹಿಡಿಯುವ ಕಥೆ ಇದಾಗಿದೆ.
ರಾಜ್ ಬಿ ಶೆಟ್ಟಿ ಊರಲ್ಲಿ ದ್ಬಾಳಿಕೆ ನಡೆಸುವ ಧಣಿಯಾಗಿದ್ದು, ಕಾನೂನು, ಪೊಲೀಸ್ ವ್ಯವಸ್ಥೆ ಅವರ ಪರ ನಿಂತು ಬಡವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಅವರು ಈ ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಅವರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ. ರಾಜ್ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ವಿಲನ್ ಆಗಿ ಘರ್ಜಿಸಿದ್ದಾರೆ. ಬಡವರ ರಕ್ತ ಹೀರುವ ಖಳನಾಗಿ ಅವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ಕಟುಕನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಾ ಎಂಬ ದೇವದಾಸಿ ಪಾತ್ರದಲ್ಲಿ ಭಾವನಾ ರಾವ್ ಕಾಣಿಸಿಕೊಂಡಿದ್ದಾರೆ.


