Menu

ಶೀಘ್ರದಲ್ಲೇ ನಮ್ಮ ಮೆಟ್ರೋಗೆ 96 ರೈಲುಗಳ ಸೇರ್ಪಡೆ!

namma metro

ಬೆಂಗಳೂರು: ಶೀಘ್ರದಲ್ಲೇ ಹೊಸದಾಗಿ 96 ರೈಲುಗಳನ್ನು ಸೇರ್ಪಡೆಗೊಳಿಸುವ ಮೂಲಕ ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಯೆಲ್ಲೋ ಲೈನ್​ ಆರಂಭದ ಬೆನ್ನಲ್ಲೇ ಬರೋಬ್ಬರಿ 96 ಹೊಸ ರೈಲುಗಳ ನಮ್ಮ ಮೆಟ್ರೋಗೆ ಬರುತ್ತಿದ್ದು, ಅವುಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ 4 ನಿಮಿಷಕ್ಕೊಂದರಂತೆ  ರೈಲು ಸಂಚಾರಕ್ಕೆ ಸಿದ್ಧತೆ ನಡೆದಿದೆ.

ನಮ್ಮ ಮೆಟ್ರೋ ಬಳಿ ಸದ್ಯ ಗ್ರೀನ್, ಪರ್ಪಲ್, ಯೆಲ್ಲೋ ಲೈನ್​​ಗಳು ಸೇರಿ ಒಟ್ಟು 64 ರೈಲುಗಳಿವೆ. ಆ ಪೈಕಿ ಗ್ರೀನ್ ಲೈನ್, ಪರ್ಪಲ್ ಲೈನ್​​ನಲ್ಲಿ 58, ಯೆಲ್ಲೋ ಲೈನ್​ನಲ್ಲಿ 6 ರೈಲುಗಳು ಹಾಲಿ ಕಾರ್ಯಾಚರಣೆ ನಡೆಸುತ್ತಿವೆ. ಈಗ ಇರುವ ಲೈನ್​​ಗಳಿಗೆ ಹೊಸ ರೈಲುಗಳು ಸೇರಿ, ಇನ್ನೂ ಆರಂಭವಾಗಬೇಕಿರುವ ಬ್ಲೂ ಮತ್ತು ಪಿಂಕ್​​ ಲೈನ್​​ಗಳಿಗೂ ರೈಲುಗಳನ್ನ ಆರ್ಡರ್​​ ನೀಡಲಾಗಿದೆ. ಇವುಗಳೆಲ್ಲ ಆಗಮಿಸಿದ ಬಳಿಕ ಹಾಲಿ ಇರುವ ನಮ್ಮ ಮೆಟ್ರೋ ರೈಲುಗಳ ಸಂಖ್ಯೆ 160ಕ್ಕೆ ಏರಿಕೆಯಾಗಲಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್​​ ಸಮಸ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸಿದೆ. ಇವುಗಳ ನಡುವಿನ ಸಂಚಾರ ಸಮಯ ಮತ್ತಷ್ಟು ಇಳಿಕೆಯಾದಲ್ಲಿ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಬಹು ಸಮಯದಿಂದ ಮೆಟ್ರೋಗಳ ನಡುವಿನ ಸಂಚಾರ ಸಮಯ ಇಳಿಸಬೇಕೆಂಬ ಬೇಡಿಕೆ ಇದ್ದು, ಹೊಸ ರೈಲುಗಳ ಸೇರ್ಪಡೆ ಇದನ್ನು ಈಡೇರಿಸಲಿದೆ.

Related Posts

Leave a Reply

Your email address will not be published. Required fields are marked *