Tuesday, November 25, 2025
Menu

ಸಿಂಧನೂರಿನಲ್ಲಿ ಜೆಡಿಎಸ್ ಪ್ರತಿಭಟನೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಂಧನೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ವಿರುದ್ಧದ ಬೃಹತ್ ಪ್ರತಿಭಟನೆ ಹಾಗೂ ಎತ್ತಿನ ಬಂಡಿಗಳ ಜಾತವನ್ನು ಉದ್ಘಾಟಿಸಿ ಅವರು  ಮಾತನಾಡಿದರು

ತುಂಗಭದ್ರ ಡ್ಯಾಮ್ ಸರಿಪಡಿಸುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲ, ಇದರಿಂದ ಸಾವಿರಾರು ರೈತರಿಗೆ ಬೆಳೆ ಇಲ್ಲದಂತೆ ಆಗಿದೆ, ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿ ಇದೆ. ಇದರಿಂದ ಯಾವ ರೈತರಿಗೂ ನೆಮ್ಮದಿ ಇಲ್ಲದಂತೆ ಆಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಡವರಿಗೆ, ಕಾರ್ಮಿಕರಿಗೆ, ರೈತರಿಗೆ ಅನೇಕ ಬಡವರ್ಗದವರಿಗೆ ನೆಮ್ಮದಿ ಇಲ್ಲದ ವಾತಾವರಣ ಸೃಷ್ಟಿಯಾಗಿದೆ, ಯಾವ ಅಭಿವೃದ್ಧಿಯೂ ರಾಜ್ಯದಲ್ಲಿ ಆಗುತ್ತಿಲ್ಲ, ಕೇವಲ ತಮ್ಮ ಕುರ್ಚಿಗಾಗಿ  ಬಡಿದಾಡುವ ಕೆಲಸ ನಡೆಯುತ್ತಿದೆ, ಇದರಿಂದ ಮತ್ತಷ್ಟು ರೈತರು ಕಂಗಾಲು ಆಗಿದ್ದಾರೆ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ದರ ನಿಗದಿ ಮಾಡಿಲ್ಲ, ಖರೀದಿ ಕೇಂದ್ರಗಳು ಇಲ್ಲವೇ ಇಲ್ಲ, ಶಾಲಾ, ಆಸ್ಪತ್ರೆ ಅನೇಕ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಇವೆ.  ಇದರಿಂದ ನೆಮ್ಮದಿಯಾಗಿ ಬದುಕಲು ಬಡವರು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದಿಂದ ಹಮ್ಮಿಕೊಲ್ಳಲಾಗಿದ್ದ ಈ ಹೋರಾಟದಲ್ಲಿ ಅನೇಕ ಎತ್ತಿನ ಬಂಡಿ ಮೂಲಕ ಮೆರವಣಿಗೆ ನಡೆಯಿತು, ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಶಾಸಕ ಸುರೇಶ ಬಾಬು, ಮಾಜಿ ಶಾಸಕ ಬಾಲಕೃಷ್ಣ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ರಾಜ ವೆಂಕಟಪ್ಪ ನಾಯಕ್, ಸಿದ್ದು ಬಂಡಿ, ಸಿ.ವಿ ಚಂದ್ರಶೇಖರ, ಬಸವರಾಜ ನಾಡಗೌಡ ವೆಂಕಟೇಶ್ ಬಸವರಾಜ ನಾಡಗೌಡ ವೆಂಕಟೇಶ್ ನಂಜಲದಿನ್ನಿ, ನಾಗೇಶ ಹಂಚಿನಾಳ ಮತ್ತಿತರರು ಇದ್ದರು.

Related Posts

Leave a Reply

Your email address will not be published. Required fields are marked *