ಬೆಂಗಳೂರಿನ ತೋಟದಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ತಂದೆಯ ಕಾರಿಗೆ ಸಿಲುಕಿ ಮಗು ಸ್ಥಳದಲ್ಲೇ ಮೃತಪಟ್ಟ ಗೃದಯವಿದ್ರಾವಕ ಘಟನೆಯೊಂದು ನಡೆದಿದೆ. ದೇವಿಕಾ ಹಾಗೂ ಮುನೇಶ್ ದಂಪತಿಯ ಒಂದು ವರ್ಷ ಹತ್ತು ತಿಂಗಳ ನೂತನ್ ಕಾರಿನಡಿ ಸಿಲುಕಿ ಅಸು ನೀಗಿದ ಮಗು.
ಮಳವಳ್ಳಿ ತಾಲೂಕಿನ ಬೂವಿನದೊಡ್ಡಿಯ ಊರಿಗೆ ಹೊರಡುವ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಗಮನಿಸದ ಕಾರಣ ಕಾರು ಡಿಕ್ಕಿಯಾಗಿದೆ. ದಂಪತಿ ಮೂರು ದಿನಗಳ ಹಿಂದೆಯಷ್ಟೇ ಬಾಮೈದ ಮೋಹನ್ ಅವರ ಮನೆಗೆ ಬಂದಿದ್ದರು. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಹಳೆದ್ವೇಷಕ್ಕೆ ವ್ಯಕ್ತಿಯ ಕೊಲೆ
ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಎರಡು ದಿನದ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಹಳೆ ದ್ವೇಷವೇ ಕಾರಣವೆಂದು ಹೇಳಲಾಗಿದೆ. ಈ ಗಲಾಟೆಯಲ್ಲಿ ಒಬ್ಬ ಕೊಲೆಯಾಗಿ, ಮತತ್ತೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಲಾಂಗು-ಮಚ್ಚುಗಳಿಂದ ನಡೆದ ಫೈಟ್ನಲ್ಲಿ ಕ್ಯಾತ್ಸಂದ್ರದ ನಿವಾಸಿ ಅಭಿಷೇಕ್ ಎಂಬಾಂತ ಮೃತಪಟ್ಟಿದ್ದು, ಎನ್ಇಪಿಎಸ್ ಠಾಣೆಯ ರೌಡಿಶೀಟರ್ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೆಲವು ಲ ದಿನಗಳ ಹಿಂದೆ ಅಭಿಷೇಕ್ ಮತ್ತು ಮನೋಜ್ ಗುಂಪಿನ ಹುಡುಗರು ಬಾರ್ನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಕಳೆದ ತಿಂಗಳು ರಾಜಿ ಸಂಧಾನದ ಯತ್ನ ನಡೆದಿತ್ತು. ಮೊನ್ನೆ ರಾತ್ರಿ ಇದೇ ವಿಚಾರವಾಗಿ ಮಾತುಕತೆ ನಡೆದಿದ್ದು, ಅಭಿಷೇಕ್ ಇಬ್ಬರು ಗೆಳೆಯರ ಜೊತೆ ಬಂದು ಮನೋಜ್ ಮೇಲೆ ಹಲ್ಲೆ ಮಾಡಿದ್ದ. ಮನೋಜ್ ಜೊತೆಗಾರರನ್ನು ಕರೆಸಿ ಅಭಿಷೇಕ್ ಮೇಲೆ ದಾಳಿಗೈದು ಹತ್ಯೆ ಮಾಡಿದ್ದಾನೆ. ಈ ವೇಳೆ ಮನೋಜ್ಗೂ ಗಂಭೀರ ಗಾಯವಾಗಿ ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


