ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾರ ಉಡುಗೆ, ಆಕೆ ಇರುವ ರೀತಿಯ ಬಗ್ಗೆ ನಿಂದನೀಯವಾಗಿ ಮಾತನಾಡಿರುವ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಶ್ವನಿ ಅವರು ರಕ್ಷಿತಾಗೆ ‘ಶಿ ಈಸ್ ಎ ಎಸ್’ ಎಂದು ಹೇಳಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಸಹ ಅಶ್ವಿನಿ ಅವರು ಈ ಪದ ಬಳಸಿರುವುದನ್ನು ಖಂಡಿಸಿದ್ದರು. ಅಶ್ವಿನಿ ಯಾವ ಅರ್ಥದಲ್ಲಿ ‘ಎಸ್’ ಎಂದಿದ್ದರು ಎಂಬುದು ಸ್ಪಷ್ಟವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ‘ಎಸ್’ ಎಂಬುದಕ್ಕೆ ಬೇರೆ ಬೇರೆ ರೀತಿಯ ಅರ್ಥಗಳನ್ನು ನೀಡುತ್ತಿರುವುದನ್ನು ಕಾಣಬಹುದು. ಎಸ್ ಎಂದರೆ ಏನು, ಅದು ಸ್ಲಂ ಅಂತಾನಾ ಅಥವಾ ಎಸ್‌ಎಎಸ್‌ಟಿ ಅಂತಾನಾ ಆ ಬಗ್ಗೆ ಅಶ್ವಿನಿ ಗೌಡ ಕ್ಲಾರಿಫಿಕೇಶನ್ ಕೊಡಬೇಕು ಎಂದು ವಕೀಲ ಪ್ರಶಾಂತ್ ಮೆಹ್ತಾಲ್ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ. ಅಶ್ವಿನಿ ಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್ ಸೇರಿ ನಾಲ್ವರ ವಿರುದ್ಧ ದೂರು ಸಲ್ಲಿಸಿದ್ದಾರೆ.
ಅಶ್ವಿನಿ ಗೌಡ ಅವರ ಆಕ್ಷೇಪಾರ್ಹ ಪದಗಳನ್ನು ಶೋನಲ್ಲಿ ಡಿಲೀಟ್ ಮಾಡಬೇಕಿತ್ತು ಅಥವಾ ಮ್ಯೂಟ್ ಮಾಡಬೇಕಿತ್ತು. ಅದರೆ ಅವರು ಯಾರೂ ಕೂಡ ಈ ಕೆಲಸ ಮಾಡಿಲ್ಲ. ಹೀಗಾಗಿ ಬಿಡದಿ ಪೊಲೀಸ್ ಸ್ಟೇಷನ್‌ನಲ್ಲಿ ಆಡಳಿತ ವರ್ಗ ಸೇರಿ ಈ ನಾಲ್ಕು ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದೇನೆ ಎಂದಿದ್ದಾರೆ.
ಅಶ್ವಿನಿ ಗೌಡ ಅವರು ರಕ್ಷಿತಾ ಅವರಿಗೆ ಬಳಸಿದ ‘She is S’ ಎಂಬ ಪದವು ವೈಯಕ್ತಿಕ ನಿಂದನೆ ಜೊತೆಗೆ ಜಾತಿ ನಿಂದನೆಯ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಪದಗಳನ್ನು ಬಳಸುವುದು ಕಾನೂನು ಅಪರಾಧ ಮತ್ತು ಸಾಮಾಜಿಕವಾಗಿ ಆಕ್ಷೇಪಾರ್ಹ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಶಾಂತ್ ಮಿತ್ತಲ್ ಅವರ ದೂರಿನ ಅನ್ವಯ ಬಿಡದಿ ಪೊಲೀಸರು ಸದ್ಯಕ್ಕೆ ಎನ್.ಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.