ಆರ್ಥಿಕ ಮುಗ್ಗಟ್ಟಿನಿಂದ ಮಗು ಆರೈಕೆ ಮಾಡಲು ಆಗಲ್ಲ ಅಂತ 9 ತಿಂಗಳ ಹಸುಗೂಸನ್ನು ಹೆತ್ತತಾಯಿಯೇ ನೀರಿನಲ್ಲಿ ಮುಳುಗಿಸಿ ಕೊಂದ ಹೃದಯವಿದ್ರಾವಕ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗದಲ ನಾಗಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 9 ತಿಂಗಳ ಹಸುಗೂಸನ್ನು ತಾಯಿ ರಾಧೆ ಕೊಲೆ ಮಾಡಿದ್ದಾರೆ.
ಗಂಡ ಪವನ್ ಕುಡಿತದ ದಾಸ್ಯಕ್ಕೆ ಬಿದ್ದಿದ್ದು, ಮನೆ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ. ಮನೆ ನಡೆಸಲು ಕಷ್ಟವಾಗಿದ್ದು, ಇದರ ನಡುವೆ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಆಗುತ್ತಿಲ್ಲ ಎಂದು ತಾಯಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ.
ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಾಯಿ ರಾಧೆಯನ್ನು ವಶಕ್ಕೆ ಪಡೆದಿದ್ದಾರೆ.