Sunday, September 28, 2025
Menu

ಜಾತಿಗಳ ನಡುವೆ ಗೊಂದಲ ಸೃಷ್ಟಿಸುವ ಪಕ್ಷ ಕಾಂಗ್ರೆಸ್, ಜಾತಿಗಣತಿಯಲ್ಲಿ ಹಿಂದೂ ಧರ್ಮ ಇರಲಿ: ಶಾಸಕ ಬೆಲ್ಲದ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಜಾತಿ ಮಧ್ಯ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ, ಪ್ರತಿಯೊಬ್ಬರು ಜಾತಿ ಜನಗಣತಿಯಲ್ಲಿ ಧರ್ಮ ಹಿಂದೂ, ಜಾತಿಯಲ್ಲಿ ಲಿಂಗಾಯಿತ ಉಪಜಾತಿಯಲ್ಲಿ ತಮ್ಮ ತಮ್ಮ ಜಾತಿ ಬರಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.

ಅವರು ನಗರದ ದೇವರಾಜ ಅರಸು ಮಾರುಕಟ್ಟೆಯಲ್ಲಿ ನೂತನವಾಗಿ ಆಗಿರುವ ಬಿಜೆಪಿ ಪಕ್ಷದ ಕಚೇರಿ ಯನ್ನು ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು ಕಾರ್ಯಾಲಯದಲ್ಲಿ ಹಿಂದುಗಳು ಇರುವ ನಾಡು ನಮ್ಮದು ಅತೀ ಹೆಚ್ಚು ಕರ್ನಾಟಕದಲ್ಲಿ ಹಿಂದುಗಳು ಇದ್ದಾರೆ, ಇಂಥ ದೊಡ್ಡ ಧರ್ಮವನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ, ಇದಕ್ಕೆ ಯಾರು ಕಿವಿ ಕೊಡದೆ, ಧರ್ಮದಲ್ಲಿ ಹಿಂದೂ ಜಾತಿಯಲ್ಲಿ ಲಿಂಗಾಯತ ಅಥವಾ ವೀರಶೈವ ವೀರಶೈವ ಉಪಜಾತಿಗಳಲ್ಲಿ ತಮ್ಮ ಜಾತಿಯ ಹೆಸರು ಬರಸಬೇಕು ಎಂದರು.

ಜಯ ಮೃತುಂಜಯ ಶ್ರೀಗಳು ಸಮಾಜ ಕಟ್ಟಿದ್ದಾರೆ, ಶಾಸಕ ಕಾಶಪ್ಪ ರಾಜಕೀಯ ಮಾಡುತ್ತಾನೆ : ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಜಯ ಮೃತ್ಯುಂಜಯ ಶ್ರೀಗಳು ಸಮಾಜ ಕಟ್ಟಿ ಬಳಸಿದ್ದಾರೆ, ಎಲ್ಲರಿಗೂ ಸಮಾನತೆ ನೀಡುವ ಶ್ರೀಗಳು ಆಗಿದ್ದಾರೆ, ಅವರಿಗೆ ಮಠದಿಂದ ಉಚ್ಚಾಟನೆ ಮಾಡಿರುವುದು ಟ್ರಸ್ಟ್ ಸಮಸ್ಯೆ ಇದೆ, ಇದನ್ನೇ ಶಾಸಕ ವಿಜಯಾನಂದ ಕಾಶಪ್ಪನವರು ರಾಜಕೀಯ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.

ಕಾಂಗ್ರೆಸ್ ನಿಂದ ಅಭಿವೃದ್ಧಿ ಶೂನ್ಯ : ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದಲೂ ಒಂದು ಅಭಿವೃದ್ಧಿ ಆಗಿಲ್ಲ, ಎಲ್ಲಾ ಕಡೆ ಶೂನ್ಯ ಅಭಿವೃದ್ಧಿ ಆಗಿದೆ, ಗೊಂದಲದಲ್ಲಿ ರಾಜ್ಯ ಸರ್ಕಾರ ಇದೆ, ಮುಖ್ಯಮಂತ್ರಿಗಳು ನಾನು ನೀನು ಎಂಬ ಮಾತುಗಳು ದಿನದಿಂದ ದಿನಕ್ಕೆ ಹೆಚ್ಚು ತಲೆ ಇದ್ದಾವೆ, ಅಭಿವೃದ್ಧಿಯ ಕಡೆಗೆ ಗಮನ ಕೊಡುವ ಕೆಲಸ ಮಾಡಬೇಕು ರೈತರ ಪರ ಬಡವರ ಪರ ನಿಲ್ಲಬೇಕು ಎಂದರು.

ವಿಜಯೇಂದ್ರ ಅವರು ಅಧ್ಯಕ್ಷರು : ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಜೆಪಿಗೆ ಬರೋದು ನಮ್ಮ ಗಮನಕ್ಕೆ ಇಲ್ಲ, ಹೈಕಮಾಂಡ್ ಗೆ ಬಿಟ್ಟ ವಿಷಯ ಅಧ್ಯಕ್ಷ ಗೊಂದಲ ಸದ್ಯಕ್ಕೆ ಯಾವುದು ಇಲ್ಲ, ಈ ಸದ್ಯ ನಮ್ಮ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರೇ ನಮಗೆ ಅಧ್ಯಕ್ಷರು ಆಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ. ಕರಿಯಪ್ಪ, ಡಾ.ಬಸವರಾಜ ಕ್ಯಾಟರ್ ಕೊಪ್ಪಳ, ಬಿಜೆಪಿ ಅಧ್ಯಕ್ಷ ವೆಂಕೋಬ ರಾಮತ್ನಾಳ, ನಗರ ಘಟಕ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ್, ನಗರಸಭೆ ಸದಸ್ಯ ರಾಜಶೇಖರ ಇತರರು ಇದ್ದರು.

Related Posts

Leave a Reply

Your email address will not be published. Required fields are marked *