Menu

ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಬೆಂಗಳೂರು ನಗರದ ನಾನಾ ಕಡೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯಾಚರಣೆ ತೀವ್ರಗೊಂಡಿದ್ದು, 272 ಅಕ್ರಮ ಬಾಂಗ್ಲಾ ವಲಸಿಗರನ್ನು  ಗಡಿಪಾರು ಮಾಡಲಾಗಿದೆ. ಗಹಡಿಪಾರುಗೊಂಡವರಲ್ಲಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ.

ಸಿಸಿಬಿ ಪೊಲೀಸರು ಬಾಂಗ್ಲಾ ವಲಸಿಗರನ್ನು ಕರೆತರುತಿದ್ದ ಜಾಲವನ್ನು ಬೇಧಿಸುವ ಕೆಲಸ ಆರಂಭಿಸಿ, ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ ತ್ರಿಪುರಗಡಿಯಿಂದ ಬಿಎಸ್‌ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಮೂಲಕ ಈ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುತ್ತಿದೆ.

ಅಕ್ರಮ ಬಾಂಗ್ಲಾ ವಲಸಿಗರು ಭಾರತದ ಗಡಿಯೊಳಗೆ ಪ್ರವೇಶಿಸುವುದಕ್ಕೆ ಮೂವರು ನೆರವಾಗುತ್ತಿದ್ದರು. ಒಬ್ಬ ಭಾರತದ ಗಡಿಯವರೆಗೂ ಅವರನ್ನು ಕರೆತರುತ್ತಿದ್ದ. ಮತ್ತೊಬ್ಬ ಭಾರತದ ಗಡಿ ದಾಟಿಸಿ ಒಳಗೆ ಕರೆಸಿಕೊಳ್ಳುತ್ತಿದ್ದ, ಇನ್ನೊಬ್ಬ ಭಾರತದಲ್ಲಿರುವ ಕೆಲಸದ ಬಗ್ಗೆ ಮಾಹಿತಿ ನೀಡಿ,ಕೆಲಸ ಹುಡುಕಿಕೊಡುತ್ತಿದ್ದ. ಈ ಮೂವರನ್ನು ಬಂಧಿಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *