ಆಂಧ್ರದ ತಿರುಪತಿ ದೇವಾಲಯದಲ್ಲಿ ಕಳೆದ ಐದು ವರ್ಷಗಳಲ್ಲಿ ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳನ್ನು ತಯಾರಿಸಿ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019-2024ರ ಅವಧಿಯಲ್ಲಿ ವಿತರಿಸಲಾದ ಒಟ್ಟು 48.76 ಕೋಟಿ ಲಡ್ಡುಗಳಲ್ಲಿ ಇದೂ ಸೇರಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಈ ಕಲಬೆರಕೆ ತುಪ್ಪ ತಯಾರಿಸಿ ಲಡ್ಡು ತಯಾರಿಸುತ್ತಿದ್ದ ಬಹಿರಂಗಗೊಂಡಿತ್ತು. ಕೇಂದ್ರ ತನಿಖಾ ದಳದ ನೇತೃತ್ವದ ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್ ಮತ್ತು ಇತರ ವಿಷಕಾರಿ ಪದಾರ್ಥಗಳೊಂದಿಗೆ ಬೆರೆಸಿ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಶೆಲ್ ಕಂಪನಿಗಳು ಪೂರೈಸಿವೆ ಎಂಬುದು ಈಗಾಗಲೇ ಪತ್ತೆಯಾಗಿದೆ. ಕಳೆದ ಐದು ವರ್ಷಗಳಲ್ಲಿ 11 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಯಾವ ಭಕ್ತರಿಗೆ ಕಲಬೆರಕೆ ಲಡ್ಡುಗಳನ್ನು ಸ್ವೀಕರಿಸಿದ್ದಾರೆಂದು ತಿಳಿಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖರೀದಿ ದಾಖಲೆಗಳು ಮತ್ತು ಉತ್ಪಾದನೆ ಮತ್ತು ಮಾರಾಟದ ದತ್ತಾಂಶವನ್ನು ಆಧರಿಸಿ ಈ ಲೆಕ್ಕಾಚಾರ ಮಾಡಲಾಗಿದೆ ಎಂದು ಬಿ.ಆರ್. ನಾಯ್ಡು ತಿಳಿಸಿದ್ದಾರೆ. ಇತ್ತೀಚೆಗೆ ಎಸ್‌ಐಟಿ ಮಾಜಿ ಟಿಟಿಡಿ ಅಧ್ಯಕ್ಷ ಮತ್ತು ವೈಎಸ್‌ಆರ್‌ಸಿಪಿ ಸಂಸದ ವೈವಿ ಸುಬ್ಬಾ ರೆಡ್ಡಿ ಅವರನ್ನು ಎಂಟು ಗಂಟೆ ವಿಚಾರಣೆ ನಡೆಸಿತು. ತುಪ್ಪದ ಸಾಗಣೆ ಏಕೆ ತೆರವುಗೊಳಿಸಲಾಯಿತು ಎಂದು ಟಿಡಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಅವರನ್ನೂ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಎಸ್‌ಐಟಿ ಪ್ರಮುಖ ತನಿಖಾ ಮಾಹಿತಿಗಳನ್ನು ನೆಲ್ಲೂರಿನ ನ್ಯಾಯಾಲಯಕ್ಕೆ ಸಲ್ಲಿಸಿದೆ.


