ಬೆಂಗಳೂರು: ಎಟರ್ನಲ್ ಸಂಸ್ಥೆಗಳಾದ – ಭಾರತದ ಆಹಾರ ಆರ್ಡರಿಂಗ್ ಮತ್ತು ಡೆಲಿವರಿ ಪ್ಲಾಟ್ಫಾಮ್ ಝೊಮ್ಯಾಟೊ ಮತ್ತು ತ್ವರಿತ ವಾಣಿಜ್ಯ ಪ್ಲಾಟ್ಫಾರ್ಮ್ -ಬ್ಲಿಂಕ್ ಇಟ್, ಹಕ್ದರ್ಶಕ್ ಜೊತೆಗಿನ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಮೊದಲ ಸಲ ಸರ್ಕಾರೀ ಯೋಜನೆ ಸೌಲಭ್ಯ ಶಿಬಿರದ ಸರಣಿಯನ್ನು ಆಯೋಜಿಸಿದವು.
ಡೆಲಿವರಿ ಪಾರ್ಟ್ನರ್ ಗಳೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪಡೆಯುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ. ಈ ಶಿಬಿರದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಕಾರ್ಮಿಕ ಆಯುಕ್ತರಾದ ಶ್ರೀ. ಡಾ. ಜಿ. ಮಂಜುನಾಥ್ ಮುಖ್ಯ ಅಥಿತಿಗಳಾಗಿದ್ದರು.
ಏಪ್ರಿಲ್ 2025ರಲ್ಲಿ ಇದು ಆರಂಭವಾದಾಗಿನಿಂದ, ಈ ಉಪಕ್ರಮವು ಅನೇಕ ಸರ್ಕಾರೀ ಕಲ್ಯಾಣ ಯೋಜನೆಗಳಡಿಯಲ್ಲಿ ಭಾರತಾದ್ಯಂತ 6000ಕ್ಕೂ ಹೆಚ್ಚಿನ ಡೆಲಿವರಿ ಪಾರ್ಟ್ನರ್ ಗಳ ನೋಂದಣಿಯನ್ನು ಉತ್ತೇಜಿಸಿದೆ. ಈ ಮೂಲಕ 150 ಕೋಟಿಗೂ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಶಿಬಿರದ ಮೂಲಕ ಹೆಚ್ಚುವರಿ 280+ ಡೆಲಿವರಿ ಪಾರ್ಟ್ನರ್ ಗಳು ಸಂಬಂಧಿತ ಕೇಂದ್ರ ಮತ್ತು ಸರ್ಕಾರಿ ಯೋಜನೆಗಳಿಗೆ ನೋಂದಣಿ ಮಾಡಿಕೊಂಡರು. ಇದರೊಂದಿಗೆ ಇದುವರೆಗೆ ನೋಂದಣಿ ಮಾಡಿಕೊಂಡಿರುವ ಬೆಂಗಳೂರು ಮೂಲದ ಡೆಲಿವರಿ ಪಾರ್ಟ್ನರ್ ಗಳ ಸಂಖ್ಯೆಯು 1000 ದಾಟಿದೆ.
ಡೆಲಿವರಿ ಪಾರ್ಟ್ನರ್ ಗಳು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಆರೋಗ್ಯ ವಿಮೆ), ಪಡಿತರ ಚೀಟಿ, ಇ-ಶ್ರಮ (ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ಡೇಟಾ ಬೇಸ್), ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ (ಜೀವ ವಿಮೆ), ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆ (ವೈಯಕ್ತಿಕ ಅಪಘಾತ ವಿಮೆ) ಮತ್ತು ಕರ್ನಾಟಕ ರಾಜ್ಯದ ಗಿಗ್ ನೌಕರರ ವಿಮಾ ಯೋಜನೆ ರೀತಿಯ ಯೋಜನೆಗಳಲ್ಲಿ ತಮ್ಮ ಹೆಚ್ಚಿನ ಆಸಕ್ತಿಯನ್ನು ತೋರಿದ್ದಾರೆ. ಹೆಚ್ಚಿನ ಪಾರ್ಟ್ನರ್ ಗಳು ಈಗ ಆರೋಗ್ಯ ವಿಮೆ, ವೈಯಕ್ತಿಕ ಅಪಘಾತ ವಿಮೆ ಮತ್ತು ಜೀವ ವಿಮೆ ಸಂಯೋಜನೆಯ ಬಹು ಕವರೇಜ್ ಗಾಗಿ ಆಯ್ಕೆ ಮಾಡುತ್ತಿದ್ದಾರೆ. ಇದು ಸುರಕ್ಷತೆಗಾಗಿ ಅವರ ಆದ್ಯತೆಯನ್ನು ಎತ್ತಿ ತೋರಿಸುತ್ತಿದೆ.
ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ ಮಾತಾಡಿದ, ಎಟರ್ನಲ್ ನ ಪ್ರಧಾನ ಸುಸ್ಥಿರತೆ ಅಧಿಕಾರಿಯಾಗಿರುವ, ಅಂಜಳ್ಳಿ ರವಿ ಕುಮಾರ್ ಅವರು, “ನಾವು ಎಟರ್ನಲ್ ನಲ್ಲಿ ಡೆಲಿವೆರಿ ಪಾರ್ಟ್ನರ್ ಗಳ ಆರೋಗ್ಯಕ್ಷೇಮವನ್ನು ಎಲ್ಲದರಲ್ಲಿ, ಎಲ್ಲದಕ್ಕಿಂತ ಮುಖ್ಯವೆಂದು ಪರಿಗಣಿಸುತ್ತೇವೆ. ಅನೇಕವುಗಳಲ್ಲಿ ಒಂದಾಗಿರುವ ಈ, ಸರ್ಕಾರಿ ಯೋಜನೆ ಸೌಲಭ್ಯ ಶಿಬಿರವು ಡೆಲಿವರಿ ಪಾರ್ಟ್ನರ್ಸ್ ಮತ್ತು ಅವರ ಕುಟುಂಬದ ಭವಿಷ್ಯವನ್ನು ರಕ್ಷಿಸುವ ಸರ್ಕಾರೀ ಕಲ್ಯಾಣ ಯೋಜನೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಬಹಳ ನಿರ್ಣಾಯಕವಾಗಿದೆ. ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ನಾವು ನಮ್ಮ ಸೌಲಭ್ಯ ಪಾಲುದಾರ – ಹಕ್ದರ್ಶಕ್ ಜೊತೆಗೆ ನಿರಂತರವಾಗಿ ಕಲಿಯುತ್ತೀದ್ದೇವೆ ಮತ್ತು ವಿಕಸಿತರಾಗುತ್ತಿದ್ದೇವೆ. ಉದಾಹರಣೆಗೆ, ಮಹಿಳಾ ಹಾಗೂ ವಿಕಲಾಂಗಚೇತನ ಡೆಲಿವರಿ ಪಾರ್ಟ್ನರ್ಸ್ ಈ ಲಾಭಗಳನ್ನು ಪಡೆಯಲು, ಇದಕ್ಕೆ ನೋಂದಣಿ ಮಾಡಿಕೊಳ್ಳಲು ಹೆಚ್ಚು ಒಲವು ತೋರುತ್ತಿದ್ದಾರೆ. ಹಾಗಾಗಿ ಈ ಯೋಜನೆಗಳ ಸೌಲಭ್ಯಗಳನ್ನು ಎಲ್ಲರೂ ನಿಜವಾಗಿ ಪಡೆದುಕೊಳ್ಳಲು ಈ ಯೋಜನೆಗಳಿಗೆ ಬಹು-ವಿಧಾನಗಳಿಂದ ಪ್ರವೇಶಾವಕಾಶದ ಅಗತ್ಯತೆ ಎದ್ದು ಕಾಣುತ್ತಿದೆ. ಈ ಪ್ರಯತ್ನವನ್ನು ವಿಸ್ತರಿಸಲು ಮತ್ತು ದೇಶಾದ್ಯಂತ ಶಾಶ್ವತ ಪರಿಣಾಮ ಬೀರಲು ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ.” ಎಂದರು.
ಮೂರು ವರ್ಷಗಳಿಂದ ಝೊಮ್ಯಾಟೊ ಡೆಲಿವರಿ ಪಾರ್ಟ್ನರ್ ಆಗಿರುವ ಉಮಾವತಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, “ನಾನು ಆಯುಷ್ಮಾನ್ ಭಾರತ್, ಪಿಂಚಣಿ ಮತ್ತು ಇ-ಶ್ರಮ ಕಾರ್ಡ್ ರೀತಿಯ ಲಾಭಗಳಿಗಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಯಿತು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ಸಹಾಯ ಮಾಡುತ್ತವೆ, ಇದು ನನಗೆ ಭದ್ರತೆ ಮತ್ತು ಸ್ಥಿರತೆಯ ಭಾವನೆ ಸಹ ನೀಡಿದೆ. ಝೊಮ್ಯಾಟೊ ಮತ್ತು ಬ್ಲಿಂಕ್ ಇಟ್ ಆಯೋಜಿಸಿರುವ ಈ ಸರ್ಕಾರೀ ಯೋಜನೆ ಸೌಲಭ್ಯ ಶಿಬಿರದಿಂದ ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಸರಳ ಮತ್ತು ಸುಲಭವಾಗಿದೆ. ಈ ರೀತಿಯ ಶಿಬಿರಗಳ ಲಾಭವನ್ನು ಇತರ ಡೆಲಿವರಿ ಪಾರ್ಟ್ನರ್ಸ್ ಸಹ ಮಾಡಿಕೊಳ್ಳಬೇಕೆಂದು ನಾನು ಪ್ರೋತ್ಸಾಹಿಸುತ್ತೇನೆ.” ಎಂದರು.


