Menu

ಆ.25ರಿಂದ ಜೀ ಪವರ್ ಚಾನೆಲ್ ಶುಭಾರಂಭ

zee power

ಬೆಂಗಳೂರು: ಭಾರತದ ಅತಿ ದೊಡ್ಡ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲೊಂದಾದ ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ಕಳೆದ ಮೂರು ದಶಕಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಕನ್ನಡದ ಅಭೂತಪೂರ್ಣ ಯಶಸ್ಸಿನ ನಂತರ ಈಗ ZEEL ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ವಾಹಿನಿ “ಜೀ ಪವರ್”ಹೊಸ ಚಾನೆಲ್ ಮೂಲಕ ಕನ್ನಡ ಮನರಂಜನೆ ಜಗತ್ತಿನಲ್ಲಿ ಮತ್ತೊಂದು ಅಲೆ ಸೃಷ್ಟಿಸಲು ಸಜ್ಜಾಗಿದೆ.

ಆಗಸ್ಟ್ 23, 2025 ರಂದು ಪ್ರಾರಂಭವಾಗಲಿರುವ ಜೀ ಪವರ್ ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ. ಆಗಸ್ಟ್ 25ರಿಂದ ಹೊಸ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಲಿದೆ. ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ, ಮತ್ತು ಕರುನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ.

ಕನ್ನಡದ ಮೊದಲ ಹೈಬ್ರಿಡ್ ಚಾನೆಲ್ ಜೀ಼ ಪವರ್ ನಲ್ಲಿ, ನಾಲ್ಕು ಧಾರಾವಾಹಿಗಳಾದ ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ ಮತ್ತು ಗೌರಿ, ಒಂದು ರಿಯಾಲಿಟಿ ಶೋ – ಹಳ್ಳಿ ಪವರ್ ಮತ್ತು ಭಕ್ತಿ ಕಾರ್ಯಕ್ರಮ-ಭವಿಷ್ಯ ದರ್ಶನ ಸೇರಿದಂತೆ ಅತ್ಯಾಕರ್ಷಕ ಕಾರ್ಯಕ್ರಮಗಳು ಇರಲಿವೆ.ಈ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಎಲ್ಲಾ ಧಾರಾವಾಹಿಗಳ ಕಥೆಗಳು ತನ್ನೆಲ್ಲಾ ಚೌಕಟ್ಟುಗಳನ್ನು ದಾಟಿ ದಿಟ್ಟ ಹೆಜ್ಜೆ ಇಟ್ಟು ವೀಕ್ಷಕರಿಗೆ ಹೊಸತನವನ್ನು ನೀಡಲು ಸಜ್ಜಾಗಿವೆ.

ಈ ವಾಹಿನಿಯಲ್ಲಿ ಎಲ್ಲಾ ವಯಸ್ಸಿನ ಗುಂಪುಗಳನ್ನು ಸೆಳೆಯುವ ಕಥೆಗಳಿರಲಿದ್ದು ಕುಟುಂಬದವರು ಒಟ್ಟಾಗಿ ಕುಳಿತು ನೋಡುತ್ತಾ ಮತ್ತೆ ಹಳೆಯ ಕಳೆದುಹೋದ ಫ್ಯಾಮಿಲಿ ಕ್ಷಣಗಳು ಮರುಕಳಿಸುವಂತೆ ಮಾಡುತ್ತದೆ. ಇದು ಕೇವಲ ವೀಕ್ಷಕರು ಏನು ನೋಡುತ್ತಾರೆ ಎಂಬುದರ ಬಗ್ಗೆ ಅಲ್ಲ, ಬದಲಾಗಿ ಅವರು ಹೆಚ್ಚಿನ ಉತ್ಸಾಹ ಮತ್ತು ಹೆಚ್ಚಿನ ಕಾರಣಗಳೊಂದಿಗೆ ನಮ್ಮ ವಾಹಿನಿಯನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ಬಗ್ಗೆಯಾಗಿದೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25 ರಿಂದ ಶುರು ಆಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ 23 ರಿಂದ ಪ್ರಸಾರ ಆಗಲಿದೆ.

ವೀಕ್ಷಕರು ತಮ್ಮ ದಿನವನ್ನು ಸ್ಫೂರ್ತಿಯೊಂದಿಗೆ ಜೀ಼ ಪವರ್ ನ ಭವಿಷ್ಯ ದರ್ಶನದೊಂದಿಗೆ ಪ್ರಾರಂಭಿಸಬಹುದು. ಪ್ರತಿದಿನ ಬೆಳಿಗ್ಗೆ 7:30 ರಿಂದ 9:00 ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜ್ಯೋತಿಷ್ಯ ಮತ್ತು ದೈವಿಕ ಚಿಂತನೆಯನ್ನು ವೀಕ್ಷಕರ ಮುಂದಿಡುವುದು ಮಾತ್ರವಲ್ಲೇ ದಿನಭವಿಷ್ಯದ  ಮುಖಾಂತರ ಅವರ ದಿನ ಹೇಗಿರಲಿದೆ ಎಂಬುದನ್ನು ತೋರಿಸಿಕೊಡಲಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಶರ್ಮ ಕಾಣಿಸಿಕೊಳ್ಳಲಿದ್ದಾರೆ.

ರಾಜಕುಮಾರಿ-ಸಿಟಿ ಜೀವನಕ್ಕೆ ಹೊಂದಿಕೊಳ್ಳುವ ಧೈರ್ಯಶಾಲಿ ಹಳ್ಳಿ ಹುಡುಗಿಯ ಕಥೆ. ಶಾಲೆಯ ಮೆಟ್ಟಿಲೇರದಿದ್ದರೂ ಈ ಹಳ್ಳಿ ಹುಡುಗಿ ಹೇಗೆ ತನ್ನ ಆಸೆ, ಕನಸಿನಂತೆ ಚಾಣಾಕ್ಷತನದಿಂದ ಯಶಸ್ವೀ ಮಹಿಳಾ ಉದ್ಯಮಿ ಆಗುವ ಕನಸನ್ನು ಮಿಠಾಯಿ ಅಂಗಡಿ ಇಡುವ ಮೂಲಕ ಸಾಧಿಸುತ್ತಾಳೆ ಎಂಬುದರ ಕುರಿತಾಗಿದೆ. ಈ ಧಾರಾವಾಹಿ ಪ್ರತಿದಿನ ಸಂಜೆ 7 ಗಂಟೆಗೆ, ಇದೇ ಆಗಸ್ಟ್ 25 ರಿಂದ ಪ್ರಸಾರ ಆಗಲಿದೆ.

ಇದೇ ಆಗಸ್ಟ್ 25 ರಿಂದ ಪ್ರಸಾರ ಆಗಲಿರುವ ‘ಗೌರಿ’ ಧಾರಾವಾಹಿ ಸಂಬಂಧಗಳನ್ನೇ ಸರ್ವಸ್ವ ಅಂದುಕೊಂಡಿರುವ ತಂಗಿ ಮತ್ತು ಸಂಬಂಧಕ್ಕೆ ಬೆಲೆಯೇ ಕೊಡದ ಅಕ್ಕ. ಅಷ್ಟೇ ತಂಗಿ ಹೇಗೆ ಎಲ್ಲಾ ಕಷ್ಟಗಳನ್ನು ನಗುನಗುತ್ತಲೇ ಎದುರಿಸುತ್ತಾಳೆ ಎಂಬುದನ್ನು ತೋರಿಸುತ್ತದೆ.

ಶಿಕ್ಷಣವೇ ಸರ್ವಸ್ವ ಎಂಬ ಅಕ್ಷರಾ ಮತ್ತು ಹಣವೇ ಸರ್ವಸ್ವ ಎಂದು ನಂಬುವ ಗ್ರಾಮದ ಮುಖ್ಯಸ್ಥೆ ಭುವನೇಶ್ವರಿ ನಡುವಿನ ಸೈದ್ಧಾಂತಿಕ ಘರ್ಷಣೆಯ ಬಗೆಗಿನ ಧಾರಾವಾಹಿಯೇ ‘ಜೋಡಿಹಕ್ಕಿ’. ಹಾಗೆಯೇ ಭುವನೇಶ್ವರಿ ಗೆ ವಿದ್ಯೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವೀ ಆಗ್ತಾಳಾ ಅಕ್ಷರ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.  ಈ ಧಾರಾವಾಹಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

ZEEL ನ ಚೀಫ್ ಕಂಟೆಂಟ್ ಮುಖ್ಯಸ್ಥ ರಾಘವೇಂದ್ರ ಹುಣಸೂರ್ “ಜೀ ಪವರ್ ಮನರಂಜನಾ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ವಾಹಿನಿಯಲ್ಲಿನ ಪ್ರಸಾರ ಆಗುವ ಧಾರಾವಾಹಿಗಳು ತಮ್ಮ ವಿಭಿನ್ನ ಮತ್ತು ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿದೆ. ಅಷ್ಟೇ ಅಲ್ಲದೆ ನಮ್ಮ ಕಥೆಗಳು ಸಂಕ್ಷಿಪ್ತ ಮತ್ತುವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿದೆ. ಜೀ ಪವರ್ ನ ಮೂಲಕ ಕರುನಾಡ ಜನರಿಗೆ ಹಿಂದೆದೂ ಕಾಣದ ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಜೀ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದರು.

ಭಾಸ್ಕರ್ ಅಯ್ಯರ್, ಬಿಸಿನೆಸ್ ಹೆಡ್, ಜೀ ಪವರ್, ಮಾತನಾಡಿ “ಜೀ಼ ಪವರ್ ಹೈಬ್ರೀಡ್ ಚಾನೆಲ್ ಆಗಿದ್ದು ಇಲ್ಲಿ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆಯುವ ಕಂಟೆಂಟ್ ಇರೋದು ಈ ವಾಹಿನಿಯ ಒಂದು ವಿಶೇಷತೆ.  ಅಷ್ಟೇ ಅಲ್ಲದೆ, ಈ ವಾಹಿನಿಯಲ್ಲಿ ಬರಲಿರುವ 4 ಧಾರಾವಾಹಿಗಳು ಮಹಿಳಾಪ್ರಾಧಾನವಾಗಿದ್ದರೂ, ಅಲ್ಲಿ ಪುರುಷರು ಹಾಗೂ ಯುವಜನತೆಯ ಭಾವನೆಗಳಿಗೂ ಬೆಲೆ ಕೊಟ್ಟಿರುವುದರಿಂದ ಇದು ಕನ್ನಡಿಗರನ್ನು ಮೊದಲ ದಿನದಿಂದಲೇ ತನ್ನತ್ತ ಆಕರ್ಷಿಸಲಿದೆ, ಅಷ್ಟೇ ಅಲ್ಲದೆ, ಇಲ್ಲಿ ಕರುನಾಡಿನ ಸಂಸ್ಕೃತಿ, ಕನ್ನಡಿಗರ ವಿಶಾಲ ಮನೋಭಾವ, ಶ್ರೀಮಂತ ಪರಂಪರೆ ಎಲ್ಲವೂ ತುಂಬಿತುಳುಕಲಿದೆ ಎಂದರು.

ರಾತ್ರಿ 8:30 ಕ್ಕೆ ಪ್ರಸಾರವಾಗುವ ಶುಭಸ್ಯ ಶೀಘ್ರಂ, ತನ್ನ ನಾಲ್ವರು ಹೆಣ್ಣುಮಕ್ಕಳು ಉತ್ತಮವಾದ ಮನೆಗೆ ಸೊಸೆಯಾಗಿ ಹೋಗಲಿ ಎಂದು ಬಯಸುವ ತಾಯಿಯ ಕುರಿತಾದ ಕೌಟುಂಬಿಕ ಧಾರಾವಾಹಿಯಾಗಿದೆ. ತನ್ನ ಕಿವಿ ಕೇಳದೆ ಇರುವ ಅಕ್ಕನ ಮದುವೆ ಜವಾಬ್ದಾರಿಯನ್ನು ಹೊತ್ತ ಶುಭ ಮದುವೆ ಬಗ್ಗೆ ಅಪಾರ ನಂಬಿಕೆ ಹೊತ್ತಿರುತ್ತಾಳೆ ಮತ್ತು ಆಕೆ ಹೇಗೆ ಮದುವೆ ಬಗ್ಗೆ ನಂಬಿಕೆಯೇ ಇಲ್ಲದ ಯುವರಾಜ್ ಅರಸು ನ ಯಾಕ್ ಆಗ್ತಾಳೆ ಎನ್ನುವುದು ಈ ಧಾರಾವಾಹಿಯಲ್ಲಿ ಕಾಣಿಸಲಿರುವ ಕುತೂಹಲ ಅಂಶ. ಇನ್ನು ಈ ಧಾರಾವಾಹಿಯಲ್ಲಿ ವಿಕಲಚೇತನರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ, ಮಧ್ಯಮ ವರ್ಗದ ಜನರು ಎದುರಿಸುವ ತೊಂದರೆಗಳನ್ನು ಬಹಳಾ ಚಂದವಾಗಿ ತೋರಿಸಿದ್ದಾರೆ.

ಪ್ರತಿದಿನ ರಾತ್ರಿ 9 ಗಂಟೆಯಿಂದ 10 ಗಂಟೆಗೆ ಪ್ರಸಾರ ಆಗಲಿರುವ ‘ಹಳ್ಳಿ ಪವರ್’ ರಿಯಾಲಿಟಿ ಶೋವನ್ನು ಅಕುಲ್ ಬಾಲಾಜಿ ನಿರೂಪಣೆ ಮಾಡಲಿದ್ದು, ಇದರಲ್ಲಿ ಸಿಟಿ ಹುಡುಗಿಯರು ಹಳ್ಳಿ ಜೀವನವನ್ನು ಹೇಗೆ ನಡೆಸಲಿದ್ದಾರೆ ಹಾಗೂ ಅವರು ಫೇಸ್ ಮಾಡುವ ಸವಾಲುಗಳು ಏನೆಂದು ತೋರಿಸಲಿದೆ. ಅಷ್ಟೇ ಅಲ್ಲದೇ ನಮಗೆ ಒಂದು ವಸ್ತುವನ್ನು ಕಳೆದುಕೊಂಡಾಗಲೇ ಅದರ ಮಹತ್ವ ಅರಿವಾಗೋದು ಎಂಬ ಅಂಶ ಈ ರಿಯಾಲಿಟಿ ಶೋ ನಲ್ಲಿ ಕಾಣಸಿಗುವುದರಿಂದ ಇದು ಎಮೋಷನಲಿ ವೀಕ್ಷಕರಿಗೆ ಹತ್ತಿರವಾಗಲಿದೆ.

ಜೀ಼ ಪವರ್ ನೊಂದಿಗೆ, ZEEL ಮಹತ್ವಾಕಾಂಕ್ಷೆ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಹೊಸ ಗುರುತಿನೊಂದಿಗೆ ಕನ್ನಡ ದೂರದರ್ಶನ ಕ್ಷೇತ್ರದಲ್ಲಿ ಹೊಸಹುರುಪನ್ನು ತುಂಬಲು ಸಜ್ಜಾಗಿದೆ. ಇದು ಕೇವಲ ವೀಕ್ಷಕರು ಏನು ನೋಡುತ್ತಾರೆ ಎಂಬುದರ ಬಗ್ಗೆ ಅಲ್ಲ, ಬದಲಾಗಿ ಅವರು ಹೆಚ್ಚಿನ ಉತ್ಸಾಹ ಮತ್ತು ಹೆಚ್ಚಿನ ಕಾರಣಗಳೊಂದಿಗೆ ನಮ್ಮ ವಾಹಿನಿಯನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ಬಗ್ಗೆಯಾಗಿದೆ. ಇನ್ನು ಜೀ ಪವರ್ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಕಾಲಿಡಲು ಕ್ಷಣಗಣನೆ ಶುರುವಾಗಿದ್ದು ಇದೇ 23 ರಂದು ಕರುನಾಡಿನ ಮನೆಮನಗಳಿಗೆ ಲಗ್ಗೆ ಇಡಲಿದೆ!

Related Posts

Leave a Reply

Your email address will not be published. Required fields are marked *