Menu

ಸಿಂಧನೂರು ಎಪಿಎಂಸಿಯಲ್ಲಿ ಯುವಕರ ಮಾರಾಮಾರಿ

ಸಿಂಧನೂರುಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೊದಲನೇ ಗೇಟ್ ಆವರಣದಲ್ಲಿ ಯುವಕರು ಕಟ್ಟಿಗೆಯಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಗಾಯ ಮಾಡಿಕೊಂಡಿದ್ದಾರೆ. ಯುವಕರು ಯಾವುದೋ ಒಂದು ಆಟದ ಹಣದ ವಿಚಾರಕ್ಕೆ ಹೊಡೆದಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿಕೊಂಡಿದ್ದಾರೆ.

ಬಸವ ವಿರುಪಾಪುರ ಹಾಗೂ ಶಿವರಾಜ ಪಿ ಅವರವರ ಗೆಳೆಯರನ್ನು ಕರೆಸಿ ಮಾರಮಾರಿ ಜಗಳ ಆಡಿದ್ದಾರೆ, ಬಸವ ವಿರುಪಾಪುರ ಕುಟುಂಬದವರಿಗೆ ಹಾಗೂ ಗೆಳೆಯರಿಗೆ ಗಾಯವಾಗಿದೆ. ಸಾರ್ವಜನಿಕರಿಗೆ ಎಪಿಎಂಸಿಗೆ ಹೋಗಲು ಭಯ ಸೃಷ್ಟಿಸುವ ಮಟ್ಟಿಗೆ ಈ ಜಗಳ ತಲುಪಿದೆ.

ಘಟನೆಯಲ್ಲಿ ಪಂಪನಗೌಡ, ಮಲ್ಲನಗೌಡ ಕುರುಕುಂದಿ, ಬದ್ರಿ ವಿರುಪಾಪುರ್, ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾನೂನು ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಜಗಳ ಆಡುವುದು, ಭಯ ಸೃಷ್ಟಿಸುವುದು ಅಪರಾಧವಾಗಿರುತ್ತದೆ. ಹೀಗಿರುವಾಗ ಘಟನೆ ಸಂಬಂಧ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಯಾರೂ ಪ್ರಕರಣ ದಾಖಲು ಮಾಡಿಲ್ಲ, ಸಿಬ್ಬಂದಿ ಎಪಿಎಂಸಿ ಆವರಣದಲ್ಲಿ ಇದ್ದಾರೆ, ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಡಿವೈಎಸ್ಪಿ ಜೆ.ಚಂದ್ರಶೇಖರ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *