ಮಳಖೇಡದಲ್ಲಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಏಳು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕಲಬುರಗಿಯ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಆವರಣದಲ್ಲಿ ಮೃತದೇಹ ಸಿಕ್ಕಿದ್ದು, ಭಾಗ್ಯಶ್ರೀ ಸುಲಹಳ್ಳಿ (21) ಕೊಲೆಯಾದ ಯುವತಿ.
ಸೆಪ್ಟೆಂಬರ್ 11 ರಂದು ಏಕಾಏಕಿ ನಾಪತ್ತೆಯಾಗಿದ್ದ ಭಾಗ್ಯಶ್ರೀ ಸುಲಹಳ್ಳಿಯನ್ನು ಕೊಲೆ ಮಾಡಿ ಕಾರ್ಖಾನೆಯ ನಿರ್ಜನ ಪ್ರದೇಶದಲ್ಲಿ ಯುವಕ ಶವ ಬಿಸಾಕಿದ್ದ ಎಂಬುದಾಗಿ ತಿಳಿದು ಬಂದಿದೆ. ಮಳಖೇಡ ಠಾಣೆ ಪೊಲೀಸರು ಕೊಲೆ ಆರೋಪಿ ಮಂಜುನಾಥ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಹಳ್ಳಿಖೇಡದಲ್ಲಿ ಮೂಕ ಮಹಿಳೆಗೆ ಲೈಂಗಿಕ ಕಿರುಕುಳ
ಬೀದರ್ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂಕ ಮಹಿಳೆಯ ಬಟ್ಟೆಹರಿದು ಮಾನಭಂಗ ಮಾಡಲು ಯತ್ನಿಸಿದ್ದಾಗಿ ದೂರು ದಾಖಲಾಗಿದೆ. ಅನ್ವರ್ ಪಾಷಾ ಫಕೀರ್ ಎಂಬಾತನ ವಿರುದ್ಧ ಹಳ್ಳಿಖೇಡ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಗಳ ಮಾನಭಂಗಕ್ಕೆ ಯತ್ನಿಸಲಾಗಿದೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ.
ಆರೋಪಿ ಅಬು ಪಾಶಾ ಮೂಕ ಮಗಳ ಮನೆಗೆ ನುಗ್ಗಿ ಅನುಚಿತ ವರ್ತನೆ ತೋರಿದ್ದಾನೆ, ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಆಕೆಯನ್ನು ತಳ್ಳಿಕೊಂಡು ಆರೋಪಿ ಮನೆಯಿಂದ ಓಡಿದ್ದಾನೆ.
ಳಿಕ ಮಗಳನ್ನು ವಿಚಾರಿಸಿದಾಗ ಈ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆ ತಾಯಿ ಹಳ್ಳಿಖೇಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರೋಪಿ ಅಬು ಪಾಷಾನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.