ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಪ್ರೀತಿಸಿದ ಯುವಕ ಮದುವೆಯಾಗಲು ಒಪ್ಪಲಿಲ್ಲವೆಂದು ನೊಂದ ಯುವತಿ ಆತ್ನಹತ್ಯೆ ಮಾಡಿಕೊಂಡಿದ್ದಾಳೆ. ವರ್ಷಿಣಿ (22) ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪ್ರೀತಿಸುತ್ತಿದ್ದರು.
ಯುವಕ ಮದುವೆಯಾಗಲು ಒಪ್ಪುತ್ತಿಲ್ಲವೆಂದು ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ವರ್ಷಿಣಿ, ತನಗಾದ ಮೋಸವನ್ನು ಬಿಚ್ಚಿಟ್ಟಿದ್ದು, ಸಾಯುತ್ತಿರುವುದಕ್ಕೆ ತಾಯಿಯ ಕ್ಷಮೆ ಕೇಳಿದ್ದಾರೆ. ಸಾವಿಗೆ ಕಾರಣವಾಗಿರುವ ಪ್ರೇಮಿ ದೇವರದೊಡ್ಡಿ ಗ್ರಾಮದ ಅಭಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಬ್ಲಾಕ್‌ಮೇಲ್ ಮಾಡಿ ರಿಂಗ್ ಮತ್ತು ಎಲ್ಲಾ ಹಣ ತೊಗೊಂಡ. ನಾನು ಪ್ರೆಗ್ನಂಟ್ ಆದೆ. ಗರ್ಭಪಾತ ಮಾಡಿಸಿದ. ಅವನನ್ನು ಸುಮ್ಮನೆ ಬಿಡಬೇಡಿ. ಅಮ್ಮ ಸಾಧ್ಯವಾದ್ರೆ ನನ್ನನ್ನು ಕ್ಷಮಿಸು ಅಮ್ಮ. ಸಾಯೋದಕ್ಕೆ ಭಯ ಆಗ್ತಿದೆ ಅಮ್ಮಾ. Sorry ಎಂದು ಬರೆದುಕೊಂಡಿದ್ದಾರೆ.
ಗ್ಯಾಂಗ್ ರೇಪ್ ಆರೋಪ: ಸಮ್ಮತಿಯ ಲೈಂಗಿಕತೆ ಎಂದ ಚಾಲಕ
ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಕ್ಯಾಬ್ ಚಾಲಕನೊಬ್ಬ ಗ್ಯಾಂಗ್ ರೇಪ್ ಮಾಡಿರುವುದಾಗಿ ಯುವತಿ ಆರೋಪಿಸಿರುವ ಪ್ರಕರಣದಲ್ಲಿ ಗ್ಯಾಂಗ್ ರೇಪ್ ನಡೆದಿಲ್ಲ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಪೊಲೀಸರಿಗೆ ಯುವತಿ ಮತ್ತು ಆರೋಪಿಯ ನಡುವಿನ ವಾಟ್ಸಾಪ್ ಚಾಟ್ ಲಭಿಸಿದ್ದು, ಅವರಿಬ್ಬರೂ ಮೊದಲೇ ಪರಿಚಿತರು ಎಂಬುದು ದೃಢಪಟ್ಟಿದೆ. ಯುವತಿಯು ಪ್ರಕರಣದ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿ, ಲೈಂಗಿಕ ಕ್ರಿಯೆಯು ಇಬ್ಬರ ಒಪ್ಪಿಗೆಯಿಂದಲೇ ನಡೆದಿತ್ತು ಎಂದು ತಿಳಿಸಿದ್ದಾನೆ. ಗ್ಯಾಂಗ್ ರೇಪ್ ಆಗಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದ್ದು, ಯುವತಿ ಏಕೆ ಈ ರೀತಿ ಗಂಭೀರ ಪ್ರಕರಣ ದಾಖಲಿಸಿದ್ದಾಳೆ ಎಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


