Menu

ಹೃದಯಾಘಾತಕ್ಕೆ ಯುವಜನತೆ ಬಲಿ: ಕೋವಿಡ್‌ ಲಸಿಕೆ ಕಾರಣವಲ್ಲ ಎಂದ ವರದಿ

ಯುವಜನತೆ ಹೃದಯಾಘಾತದಿಂದ ಮೃತಪಡಲು ಕೋವಿಡ್ ಲಸಿಕೆಯೇ ಕಾರಣವಿರಬಹುದೇ ಎನ್ನುವ ಸಂಶಯದಿಂದ ರಾಜಾರಾಂ ತಲ್ಲೂರು ಎಂಬವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ವಿಚಾರದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. 10 ನುರಿತ ವೈದ್ಯರ ತಂಡ ಯುವ ಜನತೆಯ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ.

ಒಂದೇ ತಿಂಗಳಲ್ಲಿ ಹಾಸನಜಿಲ್ಲೆಯ 13 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಈ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣ ಎನ್ನುವ ಸಂಶಯ ಮೂಡಿತ್ತು. ಧೂಮಪಾನ, ಮದ್ಯಪಾನ, ಕುಟುಂಬದಲ್ಲಿನ ಅನುವಂಶೀಯ ಕಾಯಿಲೆಗಳು ಹೃದಯಾಘಾತಕ್ಕೆ ಕಾರಣವಾಗುತ್ತಿವೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಾ ಇದ್ದದ್ದು ಹೃದಯಾಘಾತಕ್ಕೆ ಕಾರಣ. ವಿಮಲ್, ಗುಟ್ಕಾ ಸೇವನೆ ಕೂಡ ಹೃದಯಾಘಾತಕ್ಕೆ ಕಾರಣ ಎಂದು ವರಿದಿ ಹೇಳಿದೆ.

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದು ಸಂಶೋಧಕರ ವರದಿಯಲ್ಲಿ ಬಯಲಾಗಿದೆ. ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

Related Posts

Leave a Reply

Your email address will not be published. Required fields are marked *