ಹತ್ತು ವರ್ಷದ ಹಿಂದೆ ಅನೈತಿಕ ಸಂಬಂಧ ಬೆಳೆಸಿ ಮಹಿಳೆಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿಯನ್ನು ಆ ಮಹಿಳೆಯ ಮಗ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ನಡೆದಿದೆ. ಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಕೊಲೆಯಾದ ವ್ಯಕ್ತಿ. ಈರಯ್ಯ ಮಠಪತಿ ಕೊಲೆ ಆರೋಪಿ.
10 ವರ್ಷಗಳ ಹಿಂದೆ ಈರಯ್ಯನ ತಾಯಿ ಜೊತೆ ಬಸಪ್ಪ ಕೊಲ್ಹಾಪುರಕ್ಕೆ ಪರಾರಿಯಾಗಿದ್ದ. ಆಗ ಆರೋಪಿ ಈರಯ್ಯನಿಗೆ 18 ವರ್ಷ. ಹಲವು ವರ್ಷಗಳ ಬಳಿಕ ಈರಯ್ಯನ ತಾಯಿಯನ್ನು ಕೊಲ್ಹಾಪುರದಲ್ಲಿ ಬಿಟ್ಟು ನಾಲ್ಕು ದಿನಗಳ ಹಿಂದೆ ಬಸಪ್ಪ ಗ್ರಾಮಕ್ಕೆ ಬಂದಿದ್ದ. ದ್ವೇಷ ಸಾಧಿಸುತ್ತಿದ್ದ ಆರೋಪಿ ಈರಯ್ಯ ಆತನನ್ನು ಕೊಲೆ ಮಾಡಿದ್ದಾನೆ.
ಹತ್ಯೆ ಮಾಡಿದ ಬಳಿಕ ಶವದ ಮೇಲೆ ಕಾಲಿಟ್ಟು ಆರೋಪಿ ಈರಯ್ಯನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿ ಈರಯ್ಯನ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧೆಗೆ ಅಡ್ಡಿಯೆಂದು ಮಗಳ ಕೊಂದ ತಂದೆ
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಗಲ್ಲ ಎಂದು ತನ್ನದೇ ಮಗುವನ್ನು ಕೊಂದಿರುವ ಘಟನೆ ನಡೆದಿದೆ.
ಕೆರೂರು ಗ್ರಾಮದಲ್ಲಿ ಸಲೂನ್ ನಡೆಸುತ್ತಿದ್ದ ಪಾಂಡುರಂಗ ಕೊಂಡಮಂಗಲೆ ಎಂಬಾತನಿಗೆ ಒಂದು ಗಂಡು, ಎರಡು ಹೆಣ್ಣುಮಕ್ಕಳು. ಜೂನ್‌ನಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಿಲ್ಲುವ ಆಸೆ ಆತನದಾಗಿದೆ. ನಿಯಮ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಗ್ರಾಮದ ಸರಪಂಚ್ ಆಗುವ ದುರಾಸೆಯಿಂದ ಮಗಳನ್ನು ಕೊಲೆ ಮಾಡಿದ್ದಾನೆ.
ಮಗಳನ್ನು ನಿಜಾಮಾಬಾದ್‌ಗೆ ಬೈಕ್‌ನಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಗದ್ದೆಯಲ್ಲಿದ್ದ ನೀರಿಗೆಮಗಳನ್ನು ತಳ್ಳಿ ತಂದೆ ಓಡಿದ್ದಾನೆ. ಮಗುವಿನ ದೇಹ ಕಾಲುವೆಯಲ್ಲಿ ತೇಲುತ್ತಿರುವುದಿಂದ ಗ್ರಾಮಸ್ಥರು ನೋಡಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.


