ಸಿಂಧನೂರು: ಇಂದಿನ ದಿನಮಾನದಲ್ಲಿ ತಂದೆ ತಾಯಿಯವರು ಹೇಳಿದ ಮಾತು ಕೇಳದ ಮಕ್ಕಳನ್ನು ಹೆಚ್ಚಾನೆಚ್ಚು ನೋಡ್ತಾ ಇದ್ದೇವೆ, ಸಿಂಧನೂರಿನಲ್ಲಿ ಒಬ್ಬ ಯುವಕ ತಮ್ಮ ತಂದೆ ತಾಯಿಯ ಆಸೆಯಂತೆ 6 ಲಕ್ಷ ಖರ್ಚು ಮಾಡಿ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಿಸಿರುವ ಘಟನೆ ನಡೆದಿದೆ. .
ಖಾಸಗಿ ಉದ್ಯೋಗದಲ್ಲಿ ಇರುವ ಅಬ್ದುಲ್ ಜನತಾ ಕಾಲೋನಿಯ ಯುವಕನು ತಮ್ಮ ತಂದೆ ತಾಯಿಯವರು ಹಿಂದೆ ನಾವು ಬೆಂಗಳೂರು ಮುಖಾಂತರ ಸಿಂಧನೂರಿನಲ್ಲಿ ಹೆಲಿಕ್ಯಾಪ್ಟರ್ ಮುಖಾಂತರ ಮೇಲುಗಡೆ ಸುತ್ತಾಡಬೇಕು ಎಂಬ ಆಸೆ ಇಟ್ಟಿದ್ದರು ಎಂದು ಮಗನ ಬಳಿ ಹೇಳಿದ್ದಾರೆ, ಅವರ ಆಸೆಯಂತೆ ಖಾಸಗಿ ಉದ್ಯೋಗಿ ಅಬ್ದುಲ್ ಜನತಾ ಕಾಲೋನಿ ಯುವಕ ತಮ್ಮ ತಂದೆ ತಾಯಿಯವರನ್ನು ಸೇರಿಕೊಂಡು ಈಡೇರಿಸಿ ತಮ್ಮ ಕುಟುಂಬದವರನ್ನು ಹೆಲಿಕ್ಯಾಪ್ಟರ್ ಮುಖಾಂತರ ಸಿಂಧನೂರು ತುಂಬಾ ಸುತ್ತಾಡಿರುವುದು ಶನಿವಾರ ಕಂಡು ಬಂತು.
ವಾರ್ಡ್ ನಂಬರ್ 25 ರ ಜನತಾ ಕಾಲೋನಿಯ ನಿವಾಸಿಗಳಾದ ಶರೀಫ್ ಸಾಬ್ ಇವರ ಧರ್ಮಪತ್ನಿ ಸಜಾದಿ ಬೇಗ ಇವರನ್ನು ಇವರ ಮೊದಲ ಮಗ ಅಬ್ದುಲ್ 6 ಲಕ್ಷ ರೂಪಾಯಿ ಖರ್ಚು ಮಾಡಿ ಇವರ ಆಸೆಯಂತೆ ಬೆಂಗಳೂರಿನಿಂದ ಸಿಂಧನೂರು ವರೆಗೆ ಹೆಲಿಕ್ಯಾಪ್ಟರ್ ಮುಖಾಂತರ ಆಗಮಿಸಿ, ಇಲ್ಲಿಯ ಸ್ಥಳೀಯ ಎಲ್ಲಾ ತಾಣಗಳನ್ನು ತಂದೆ-ತಾಯಿ ಹಾಗೂ ಅವರ ಕುಟುಂಬದವರಿಗೆ ತೋರಿಸಿ ಆಸೆಯನ್ನು ಈಡೇರಿಸ ಮಗ ಆಗಿದ್ದಾನೆ. ಇವರ ಪ್ರೀತಿಗೆ ಸಿಂಧನೂರು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಇವರು : ಅಬ್ದುಲ್ ಇವರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ರಿಯಲ್ ಎಸ್ಟೇಟ್ ನಲ್ಲಿ ತಮ್ಮ ಸಾಮರ್ಥ್ಯ ತೋರಿಸ್ಕೊಂಡು ಜೀವನ ಸಾಗಿಸುವ ಕೆಲಸದಲ್ಲಿ ಇದ್ದಾರೆ, ಇವರ ತಂದೆ ತಾಯಿಯವರು ಆಸೆ ಪಟ್ಟಂತೆ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಿಸಿದ್ದು ಇತರರಿಗೆ ಮಾದರಿ ಆಗಿದ್ದಾರೆ.
ಖಾಸಗಿ ಹೆಲಿಕ್ಯಾಪ್ಟರ್ ಆದರೂ ಬಂದೋಬಸ್ತ್ ಫುಲ್ :
ಮೊದಲ ಬಾರಿಗೆ ಸಿಂಧನೂರಿನಲ್ಲಿ ಖಾಸಗಿ ಹೆಲಿಕ್ಯಾಪ್ಟರ್ ತೆಗೆದುಕೊಂಡು ಬಂದು ತಂದೆ ತಾಯಿಯವರನ್ನು ಸುತ್ತಾಡಿಸಿರುವ ಏಕೈಕ ವ್ಯಕ್ತಿ ಅಬ್ದುಲ್ ಜನತಾ ಕಾಲೋನಿ ಅವರು ಆಗಿದ್ದಾರೆ,? ಖಾಸಗಿ ಹೆಲಿಕ್ಯಾಪ್ಟರ್ ಆಗಿದ್ದರು ಹಣ ನಿಗದಿಯಂತೆ ಕೊಟ್ಟ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಯಿಂದ ಹೆಲಿಕ್ಯಾಪ್ಟರ್ ಸುತ್ತಮುತ್ತ ಬಂದ ಬಸ್ ಮಾಡಿರುವುದು ಕಂಡು ಬಂತು.
ಹೆಲಿಕ್ಯಾಪ್ಟರ್ ನೋಡಲು ವಿದ್ಯಾರ್ಥಿಗಳು ಮೈದಾನದಲ್ಲಿ: ಅಬ್ದುಲ್ ಜನತಾ ಕಾಲೋನಿ ತಮ್ಮ ತಂದೆ ತಾಯಿಯವರ ಆಸೆಯನ್ನು ಈಡೇರಿಸಲು 6 ಲಕ್ಷ ರೂಪಾಯಿ ಮಾಡಿ ಶನಿವಾರ ಕುಷ್ಟಗಿ ರಸ್ತೆಯಲ್ಲಿ ಇರುವ ಹೆಲಿಕ್ಯಾಪ್ಟರ್ ನಿಲ್ದಾಣದಲ್ಲಿ ನಿಲ್ಸಲಾಗಿದೆ ಹೆಲಿಕ್ಯಾಪ್ಟರನ್ನು ನೋಡಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಮುಗಿಯಬಿದ್ದಿದ್ದು ಕಂಡು ಬಂತು.
ನಮ್ಮ ತಂದೆ ತಾಯಿಯವರು ಹಿಂದೆ ನನಗೆ ಹೆಲಿಕ್ಯಾಪ್ಟರ್ ನಲ್ಲಿ ಸಿಂಧನೂರಿನಲ್ಲಿ ಸುತ್ತಾಡಿಸಬೇಕು ಎಂದು ಹೇಳಿದ್ದರು, ತಂದೆ ತಾಯಿಯವರ ಆಸೆಯನ್ನು ನಾನು ಈಡೇರಿಸುವ ಕೆಲಸ ಮಾತ್ರ ಮಾಡಿದ್ದೇನೆ, ಯಾವುದೇ ಪ್ರಚಾರಕ್ಕಾಗಿ ನಾನು ಮಾಡಿಲ್ಲ, ನನ್ನದು ಇದು ಒಂದು ಸಣ್ಣ ಕೆಲಸ ಎಂದು ಅಬ್ದುಲ್ ಜನತಾ ಕಾಲೋನಿಯ ನಿವಾಸಿ ಸಿಂಧನೂರು ಪ್ರತಿಕ್ರಿಯಿಸಿದ್ದಾರೆ.


