Menu

ಪುತ್ತೂರಿನ ಯುವಕ ಬೆಂಗಳೂರಲ್ಲಿ ಸಾವು: ಸಿಗರೇಟ್‌, ಪುಡ್‌ ಪಾಯಿಸನ್‌, ಅಸ್ತಮಾ ಕಾರಣವೇ?

ಪುತ್ತೂರಿನ ಯುವಕನೊಬ್ಬ ಕೊಡಗಿನ ಯುವತಿ ಜೊತೆ ಬೆಂಗಳೂರಿನ ಮಡಿವಾಳ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಈ ಸಾವಿಗೆ ಫುಡ್ ಪಾಯ್ಸನ್ ಅಥವಾ ಅತಿಯಾದ ಸಿಗರೇಟ್ ಸೇವನೆ ಕಾರಣವೇ ಅಥವಾ ಅವರ ಕುಟುಂಬವನ್ನು ಬಾಧಿಸುತ್ತಿದ್ದ ಅಸ್ತಮಾ ಕಾರಣ ಇರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ತಕ್ಷಿತ್ ಮೃತದೇಹ ಪತ್ತೆಯಾದಾಗ ರೂಮ್ ನಲ್ಲಿ ಸಿಗರೇಟ್ ತುಂಡುಗಳು ಪತ್ತೆಯಾಗಿದ್ದವು, ಅತಿಯಾದ ಸಿಗರೇಟ್‌ ಸೇವನೆಯಿಂದ ಸಾವು ಸಂಭವಿಸಿರಬಹುದು, ತಕ್ಷಿತ್ ಕುಟುಂಬದಲ್ಲಿ ಕೆಲವರಿಗೆ ಅಸ್ತಮಾ ಸಮಸ್ಯೆ ಇದೆ ಎಂದು ಹೇಳಲಾಗಿದೆ. ಫುಡ್ ಪಾಯಿಸನ್‌ ಆಗಿದ್ದ ಕಾರಣ ಟ್ಯಾಬ್ಲೆಟ್‌ ತೆಗೆದುಕೊಂಡಿದ್ದರು. ಆದರೆ ಅದರಿಂದ ಏನೂ ಸಮಸ್ಯೆ ಆಗಿಲ್ಲ ಎಂದು ತಿಳಿದು ಬಂದಿದೆ. ತಕ್ಷಿತ್ ಗೆಳತಿ ಮತ್ತು ಹೋಟೆಲ್ ಸಿಬ್ಬಂದಿಯಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಅಕ್ಟೋಬರ್‌ 17 ರಂದು ಮಧ್ಯಾಹ್ನ ಆನ್ಲೈನ್ಮೂಲಕ ಹೋಟೆಲ್‌ನಿಂದ ಇಬ್ಬರೂ ಫುಡ್ ಆರ್ಡರ್ ಮಾಡಿದ್ದರು, ಈ ವೇಳೆ ಆರೋಗ್ಯ ಕೆಟ್ಟಿದ್ದು ಇಬ್ಬರಿಗೂ ವಾಮಿಟ್ ಆಗಿ ಮಾತ್ರೆ ತೆಗೆದುಕೊಂಡಿದ್ದರು. ಆರೋಗ್ಯ ಸಮಸ್ಯೆಯಿಂದ ಯುವತಿ ಊರಿಗೆ ಹೊರಟಿದ್ದಳು. ತಾನು ಸಂಬಂಧಿಕರ ಮನೆಗೆ ಹೋಗೋದಾಗಿ ತಕ್ಷಿತ್ ತಿಳಿಸಿದ್ದ.

ರಾತ್ರಿ ಮತ್ತೆ ಯುವತಿಗೆ ಕರೆ ಮಾಡಿ ಲಾಡ್ಜ್ ನಲ್ಲೇ ಉಳಿಯುವುದಾಗಿ ಹೇಳಿದ್ದ. ಲಾಡ್ಜ್ ಬಿಲ್ ಮತ್ತು ರಾತ್ರಿ ಊಟದ ದುಡ್ಡನ್ನ ಪೇ ಮಾಡಲು ಯುವತಿಗೆ ಹೇಳಿದ್ದ. ಬಿಲೆ ಪೇ ಮಾಡಿ ರಾತ್ರಿ 10 ಗಂಟೆಗೆ ತಕ್ಷಿತ್ ಜೊತೆ ಯುವತಿ ಮಾತನಾಡಿದ್ದಳು. ಬೆಳಗ್ಗೆ ಕಾಲ್‌ ಮಾಡಿದಾಗ ತಕ್ಷಿತ್‌ ರಿಸೀವ್‌ ಮಾಡಿರಲಿಲ್ಲ. ಆಕೆ ಲಾಡ್ಜ್‌ ರಿಸೆಪ್ಷನಿಸ್ಟ್‌ಗೆ ಫೋನ್ ಮಾಡಿ ವಿಚಾರಿಸಿದ್ದಳು. ಲಾಡ್ಜ್‌ ಸಿಬ್ಬಂದಿ ರೂಂಗೆ ಹೋಗಿ ನೋಡಿದಾಗ ಆತ ಮೃತಪಟ್ಟಿದ್ದ.

ಇದೇ ಫುಡ್ 100 ಕ್ಕೂ ಹೆಚ್ಚು ಜನರಿಗೆ ಕೊಟ್ಟಿದ್ದೇವೆ, ಆದರೆ ಇವರಿಂದ ಮಾತ್ರ ಕಂಪ್ಲೆಂಟ್ ಬಂದಿರೋದು ಎಂದು ಹೋಟೆಲ್‌ನವರು ಹೇಳಿದ್ದಾರೆ. ಪೊಲೀಸರು ಫುಡ್ ಇನ್ಸ್ ಪೆಕ್ಟರ್ ಮುಖಾಂತರ ಸ್ಯಾಂಪಲ್ ಕಲೆಕ್ಟ್ ಮಾಡಿಸಿದ್ದಾರೆ. ಫುಡ್ ಇನ್ಸ್ ಪೆಕ್ಟರ್ ವರದಿ ಮತ್ತು ಎಫ್‌ಎಸ್‌ಎಲ್‌ ಮತ್ತು ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *