ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಯುವಕನೊಬ್ಬನಿಗೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬಾಕೆಯ ಪರಿಚಯ ವಾಗಿ ಮಾತನಾಡುತ್ತ ಪ್ರೀತಿ ಬಿದ್ದಿದ್ದಾನೆ. ಹೀಗೆ ಏಳು ತಿಂಗಳಿಂದ ಆನ್‌ಲೈನ್ ಚಾಟಿಂಗ್ ನಡೆದಿದೆ. ಯುವಕ ಆಕೆಯ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದಾನೆ. ಆಕೆ ಮದುವೆಗೆ ಒಪ್ಪಿಕೊಂಡಿದ್ದಾಳೆ. ಮದುವೆಗೆ ಸಿದ್ದನಾಗಿದ್ದ ಯುವಕ ಈ ಮಧ್ಯೆ ಆತ್ಮಹತ್ಯೆಗೆ ಯತ್ನಿಸಿ, ತಂದೆ ಹೇಗೋ ಆತನನ್ನು ಬದುಕಿಸಿಕೊಂಡಿದ್ದಾರೆ.
ಯುವಕ ಏಳು ತಿಂಗಳಿಂದ ಆನ್ಲೈನ್ ಚಾಟ್, ಫೋನ್ ಟಾಕ್ ಅಂತ ಬ್ಯೂಸಿಯಾಗಿದ್ದು ಆತನ ಮಲ ತಾಯಿಯ ಜೊತೆ ಎಂಬ ವಿಷಯ ಗೊತ್ತಾಗ್ತಿದ್ದಂತೆ ಯುವಕ ನೊಂದುಕೊಂಡಿದ್ದಾನೆ. ಆನ್ಲೈನ್ ಡೇಟಿಂಗ್ ನಲ್ಲಿದ್ದ ಯುವಕ ಆಕೆಯ ಮುಖ ವನ್ನು ಒಮ್ಮೆಯೂ ನೋಡಿರಲಿಲ್ಲ. ನಂಬರ್ ಮಾತ್ರ ಇತ್ತು. ಯುವಕನ ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿತ್ತು. ಅದಕ್ಕಾಗಿ ಒಟಿಟಿ ಪಡೆಯಲು ಅಪ್ಪನ ಫೋನ್ ತೆಗೆದುಕೊಂಡಿದ್ದಾನೆ. ಅಪ್ಪನ ಫೋನ್ ನಲ್ಲಿ ಅನೇಕ ಮಹಿಳೆಯರ ನಂಬರ್ ಕಂಡಿದೆ. ಅದರಲ್ಲಿ ಈ ಮಹಿಳೆಯ ನಂಬರ್ ಕೂಡ ಸಿಕ್ಕಿದೆ. ಮಹಿಳೆ ಜೊತೆ ತಂದೆ ಚಾಟ್ ಮಾಡಿದ್ದನ್ನು ಮಗ ನೋಡಿದ್ದಾನೆ. ನಂಬರ್ ಸರಿಯಾಗಿ ಪರಿಶೀಲಿಸಿ ಕನ್ಫರ್ಮ್ ಮಾಡಿಕೊಂಡ ಯುವಕ ಸತ್ಯ ತಿಳಿದು ಆತಂಕಗೊಂಡಿ ದ್ದಾನೆ.
ಯುವಕನ ತಾಯಿಯ ಸಾವಿನ ಬಳಿಕ ತಂದೆ ಇನ್ನೊಂದು ಮದುವೆ ಆಗಿ ಮನೆಯವರಿಗೆ ಹೇಳಿರಲಿಲ್ಲ. ಈ ಮಧ್ಯೆ ಯುವಕ ವಿಷಯ ತಿಳಿಯದೆ ಆ ಮಹಿಳೆಗೆ ಮದುವೆ ಪ್ರಸ್ತಾಪ ಇಟ್ಟಿದ್ದ. ಆಕೆ ಯುವಕನ ತಂದೆಗೂ ಮೋಸ ಮಾಡಲು ಸಿದ್ಧವಾಗಿ ಮದುವೆಗೆ ಒಪ್ಪಿದ್ದಳು. ಚಾಟ್ ನಲ್ಲಿ ತನ್ನ ವಯಸ್ಸನ್ನು ಕಡಿಮೆ ಹೇಳಿದ್ದಳು. ಆಕೆ ಅಪ್ಪನ ಎರಡನೇ ಪತ್ನಿ ಎಂಬುದು ಗೊತ್ತಾಗುತ್ತಿದ್ದಂತೆ ಯುವಕ ಆಕೆ ಜೊತೆ ಮಾತನಾಡಿ ದ್ರೋಹವನ್ನು ಖಂಡಿಸಿ ಜಗಳವಾಡಿದ್ದಾನೆ. ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ಹೇಳಿಫೋನ್ ಕಟ್ ಮಾಡಿದ್ದಾನೆ.
ಇದರಿಂದ ಭಯಗೊಂಡ ಮಹಿಳೆ ತಕ್ಷಣ ಯುವಕನ ತಂದೆಗೆ ಫೋನ್ ಮಾಡಿ ವಿಷಯ ಹೇಳಿ ಆತನನ್ನು ರಕ್ಷಿಸುವಂತೆ ಹೇಳಿದ್ದಾಳೆ. ತಕ್ಷಣ ತಂದೆ ಮನೆಗೆ ಹೋಗಿದ್ದು, ಯುವಕ ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆಗೆ ಮುಂದಾಗಿದ್ದ. ತಂದೆ ಅವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಯುವಕ ಚೇತರಿಸಿಕೊಂಡಿದ್ದಾನೆ.